Mysuru Dasara festival ವಿಶ್ವವಿಖ್ಯಾತಿ ಮೈಸೂರು ದಸರಾ ಮಹೋತ್ಸವವನ್ನು ಕೊರೋನಾ ಹಿನ್ನೆಲೆಯಲ್ಲಿ ಅಕ್ಟೋಬರ್ 7 ರಿಂದ 15 ರವರೆಗೆ ಸರಳವಾಗಿ ಆಚರಿಸಲಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಹ ಜಂಬೂ ಸವಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಾ ಅರಮನೆ ಆವರಣದಲ್ಲಿ ಆಚರಿಸಲಾಗುತ್ತಿದೆ.
ಈ ವರ್ಷದ ದಸರಾ ಉತ್ಸವಕ್ಕೆ ಅಕ್ಟೋಬರ್ 7 ರಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರು ಚಾಲನೆ ನೀಡಿದ್ದಾರೆ. ಈ ವರ್ಷವೂ ಸಹ ದಸರೆಯ ಮುಖ್ಯ ಆಕರ್ಷಣೆ ಜಂಬೂ ಸವಾರಿ ಅಕ್ಟೋಬರ್ 15 ರಂದು ಜರುಗಲಿದೆ. ಅಂದು ಸಾಯಂಕಾಲ 4.36 ರಿಂದ 4.44 ರವರೆಗೆ ನಂದಿ ಧ್ವಜ ಪೂಜೆ ನೆರವೇರಲಿದೆ. ಬಳಿಕ ಸಾಯಂಕಾಲ 5 ರಿಂದ 5.30 ರವರೆಗೆ ಜಂಬೂ ಸವಾರಿ ನಡೆಯಲಿದೆ.
Mysuru Dasara festival ಏನಿದು ಮೈಸೂರು ದಸರಾ ಮಹೋತ್ಸವ
ನಾಡಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕದ ಅತೀ ದೊಡ್ಡ ಹಾಗೂ ಪ್ರಮುಖ ಉತ್ಸವವಾಗಿದೆ. ಈ ದಸರಾ ಮಹೋತ್ಸವಕ್ಕೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಮೈಸೂರು ಅರಸರಾದ ರಾಜ ಒಡೆಯರ್ ಅವರು ಕ್ರಿ.ಶ. 1610 ರಲ್ಲಿ ಶ್ರೀರಂಗಪ್ಟಟದಲ್ಲಿ ದಸರಾ ಆರಂಭಿಸಿದರು. ಆದರೆ ಕ್ರಿ.ಶ. 1336 ಕಸ್ಸೇ ವಿಜಯನಗರ ಸಾಮ್ರಾಜ್ಯದಲ್ಲಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿತ್ತು ಎಂಬುದಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರು ದಾಖಲಿಸಿದ ಮಾಹಿತಿಯಿಂದ ತಿಳಿಯುತ್ತದೆ. ದಸರಾ ಮಹೋತ್ಸವಕ್ಕೆ ವೈಭವದ ಇತಿಹಾಸ ಇರುವುದಂತೂ ನಿಜ. ಈ ದಸರಾ ಉತ್ಸವ ಸಾಂಸ್ಕೃತಿಕ ಸಂಕೇತವಾಗಿ ಕಂಡುಬರುತ್ತದೆ.
ಇದನ್ನೂ ಓದಿ ಹಸಿರು ಪಟ್ಟಿಯಲ್ಲಿದ್ದರೂ ಸಾಲ ಮನ್ನಾಏಕಾಗಿಲ್ಲಾ? ಇಲ್ಲಿದೆ ಮಾಹಿತಿ
ಈ ವರ್ಷ ಅಕ್ಟೋಬರ್ 15 ರಂದು ವಿಜಯದಶಮಿ ಪ್ರಯುಕ್ತ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯೂ ಆನೆಯು ನಾಡದೇವಿ ತಾಯಿ ಚಾಮುಂಡಿಯ ಚಿನ್ನದ ಉತ್ಸವ ಮೂರ್ತಿಯನ್ನು ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಲಿದ್ದಾನೆ. ಇದಕ್ಕಾಗಿ ದಸರೆ ಆನೆಗಳಿಗೂ ತಾಲೀಮು ನೀಡಲಾಗಿದ್ದು, ಫಿರಂಗಿ ತಾಲೀಮು ಕೂಡ ಭರದಿಂದ ಸಾಗಿದೆ. ಕೊರೋನಾ ಕಾರಣದಿಂದಾಗಿ ದಸರಾ ವೀಕ್ಷಣೆಗೆ ಹೆಚ್ಚು ಜನರಿಗೆ ಪ್ರವೇಶಾವಕಾಶ ಇಲ್ಲ. ಹೀಗಾಗಿ ದಸರಾ ವೈಭವವನ್ನು ಜನರು ತಾವು ಇರುವಲ್ಲಿಯೇ ವೀಕ್ಷಿಸಲು ಅನಕೂಲವಾಗುವಂತೆ ವೆಬ್ ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ.
ನಿಮ್ಮ ಮೊಬೈಲ್ ನಲ್ಲಿಯೇ ದಸರಾ ಮಹೋತ್ಸವದ ನೇರ ಪ್ರಸಾರ ವೀಕ್ಷಿಸಲು ಈ
https://mysoredasara.gov.in/live-stream-kannada/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನೇರ ಪ್ರಸಾರ ವೀಕ್ಷಿಸಲು ಎರಡು ಬಾರ್ ಕೋಡ್ ನೀಡಲಾಗಿದೆ. ಫೇಸ್ ಬುಕ್ ಹಾಗೂ ಯು ಟ್ಯೂಬ್. ನಿಮಗೆ ಯಾವುದರಲ್ಲಿ ಅನುಕೂಲವಾಗುತ್ತದೆಯೋ ಅದನ್ನು ಸ್ಕ್ಯಾನ್ ಮಾಡಿ ದಸರಾ ಮಹೋತ್ಸವವನ್ನು ವೀಕ್ಷಿಸಬಹುದು. ಸ್ಕ್ಯಾನ್ ಮಾಡಲು ಸಮಸ್ಯೆಯಾಗುತ್ತಿದ್ದರೆ
ಯೂಟೂಬ್ ನಲ್ಲಿ ಕಾರ್ಯಕ್ರಮ ವೀಕ್ಷಿಸಲು
https://www.youtube.com/c/Mysuruvartheilaake
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಒಂದು ವೇಳೆ ಫೇಸ್ ಬುಕ್ ನಲ್ಲಿ ವೀಕ್ಷಿಸಬೇಕಾದರೆ
https://www.facebook.com/mysorevarthe/live/
ಲಿಂಕ್ ಮೇಲೆ ಕ್ಲಿಕ್ ಮಾಡಿ ದಸರಾ ಮಹೋತ್ಸವ ಕಣ್ತುಂಬಿಸಿಕೊಳ್ಳಬಹುದು. ದಸರಾ ಮಹೋತ್ಸವದ ಅಂಗವಾಗಿ ನಡೆಯವ ಕಾರ್ಯಕ್ರಮಗಳ ಮಾಹಿತಿಯನ್ನು ಮುಖ್ಯಪುಟದಲ್ಲಿನೀಡಲಾಗಿದೆ. ಕಾರ್ಯಕ್ರಮಗಳು ಕಾಲಂನಲ್ಲಿ ಕ್ಲಿಕ್ ಮಾಡಿದರೆ ಅಲ್ಲಿ ಮುಖ್ಯ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಿದೆ.
ಮೈಸೂರು ದಸರಾ ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆ. ಈ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಜನ ಬರುತ್ತಾರೆ.