rain alert in these districts ಕೇರಳಕ್ಕೆ ಗುರುವಾರ ಕಾಲಿಟ್ಟಿರುವ ಮುಂಗಾರು ಭಾನುವಾರದ ವೇಳೆಗೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಯಲ್ಲೋ ಅಲರ್ಟ್ ನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಪ್ರಸಕ್ತ ಮುಂಗಾರು ಕೇರಳದ ಮೂಲಕ ಭಾರತವನ್ನು ಗುರುವಾರ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರದ ವೇಳೆಗೆ ರಾಜ್ಯಕ್ಕೆ ಮುಂಗಾರು ಪ್ರದೇಶವಾಗುವ ನಿರೀಕ್ಷೆಯಿದೆ.
ಇದರಿಂದ ಕರಾವಳಿಯ ನಾಲ್ಕು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಭಾನುವಾರದಿಂದ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಸರಾಸರಿ 83 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ. 92 ರಿಂದ 96 ರಷ್ಟು ಮಳೆಯಾಗಲಿದೆ. ಜೂನ್ ಅವಧಿಯಲ್ಲಿಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ.
rain alert in these districts ಕರಾವಳಿ ತಂಪೆರೆದ ಮಳೆ- ಇನ್ನೆರಡು ದಿನಗಳಲ್ಲಿ ಮುಂಗಾರು ನಿರೀಕ್ಷೆ
ಮುಂಗಾರು ಮಳೆಗೂ ಮುನ್ನವೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬಿಫೋರ್ ಜಾಯ್ ಚಂಡಮಾರುತ ಪ್ರಭಾವದ ಮಳೆ ಕಾಣಿಸಿದೆ.
ಮಂಗಳೂರು ಸುತ್ತಮುತ್ತ ಸಂಜೆ ವೇಳೆ ಮಳ ತಂಪೆರೆದಿದೆ. ಬಿಸಿಲಿನಿಂದ ಕಂಗೆಟ್ಟ ನಗರದ ಜನತೆ ತುಂತುರು ಮಳೆಯಿಂದ ತುಸು ನಿಟ್ಟುಸಿರು ಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೂಡ ಈಗಾಗಲೇ ಗ್ರಾಮಾಂತರ ಪ್ರದೇಶಗಳ ಅಲ್ಲಲ್ಲಿ ಕೆಲವು ದಿನಗಳಿಂದ ಹನಿ ಮಳೆ ಕಾಣಿಸಿತ್ತು. ಈ ಬಾರಿ ವಿಳಂಬವಾಗಿ ಕೇರಳಕ್ಕೆ ಗುರುವಾರ ಮಾನ್ಸೂನ್ ಆಗಮಿಸಿದ್ದು, ಇನ್ನೆರಡು ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಚಂಡಮಾರುತ – ರಾಜ್ಯದ ಕರಾವಳೀಲಿ ಅಲೆಗಳಬ್ಬರ
ಅರಬ್ಬಿ ಸಮುದ್ರದಲ್ಲಿ ಬಿಫೋರ್ ಜೋಯ್ ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸಸಿಹಿತ್ತು, ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಮಲ್ಪೆ ಬೀಚ್ ಗಳಲ್ಿ ಸಮುದ್ರದ ಅಲೆಗಳ ಅಬ್ಬರ ಬುಧವಾರ ನಸುಕಿನಿಂದ ಹೆಚ್ಚಾಗಿದೆ.
ಇದನ್ನೂ ಓದಿ : ಪಿಎಂ ಕಿಸಾನ್ 14ನೇ ಕಂತು ಈ ದಿನ ಬಿಡುಗಡೆ : ಲಿಸ್ಚ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಿ
ಜಿಲ್ಲಾಡಳಿತದ ಆದೇಶದಂತೆ ಪಣಂಬೂರು, ಬುಧವಾರ ನಸುಕಿನಿಂದ ಚಂಡಮಾರತದ ಪ್ರಭಾವ ಕಡಲದ ತಡಿಯಲ್ಲಿ ಗೋಚರಿಸುತ್ತಿದೆ. ಬೃಹತ್ ಗಾತ್ರದ ಅಲೆಗಳು ಸಮುದ್ರದ ಅಂಚಿಗೆ, ಬಂಡೆಕಲ್ಲುಗಳಿಗೆ ಬಹುವೇಗಗಳಲ್ಲಿಬಂದು ಅಪ್ಪಳಿಸುತ್ತಿವೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ಟ, ಕೈಕೋ, ಹಿಲೆರಿಯಾನಗರ, ಸುಭಾಷನಗರ, ಕೈಕೋ, ಸಮ್ಮರ್ ಸ್ಯಾಡ್, ಸೋಮೇಶ್ವರ, ಉಚ್ಚಿಲ, ಬಟಪಾಡಿ ಭಾಗದ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಚಂಡಮಾರುತ – ಕರ್ನಾಟಕ ಕರಾವಳಿಗೆ 3 ದಿನ ಕಟ್ಟೆಚ್ಚರ
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಫೋರಜೋಯ್ (ವಿಪತ್ತು) ಚಂಡಮಾರುತ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಕರ್ನಾಟಕ, ಲಕ್ಷದ್ವೀಪ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ.
ಚಂಡಮಾರುತದ ಪ್ರಭಾವ ಜೂನ್ 10 ರವರೆಗೆ ದೇಶದ ನೈಋತ್ಯ ಭಾಗದಲ್ಲಿರುವ ಈ ರಾಜ್ಯಗಳ ಕರಾವಳಿ ಮೇಲೆ ಆಗಲಿದೆ. ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಬಿಸುತ್ತಿದೆ. ಶುಕ್ರವಾರ 135- 145 ಕಿಮೀ ಗೆ ಹಾಗೂ ಶನಿವಾರ 170 ಕಿ.ಮೀ ಗೆ ಏರಬಹುದು. ಹೀಗಾಗಿ ಮೀನುಗಾರರು ಕರಾವಳಿಗೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.ಈ ಚಂಡಮಾರುತ ಮುಂಗಾರು ಮೇಲೆ ಪರಿಣಾಮ ಬೀರಲಿದೆ.