ಮಿನಿ ಟ್ರ್ಯಾಕ್ಟರ್ ಖರೀದಿಗೆ 1 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Mini Tractor Subsidy to farmers : ರೈತರಿಗೆ ಗುಡ್ ನ್ಯೂಸ್. ಹೌದು, ರೈತರು ಮಿನಿ ಟ್ರ್ಯಾಕ್ಟರ್ ಖರೀದಿಗೆ 1 ಲಕ್ಷ ರೂಪಾಯಿಯವರೆಗೆ ಹಾಗೂ ಇನ್ನಿತರ ಉಪಕರಣಗಳಿಗೂ ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನ 2024-25 ನೇ ಸಾಲಿನ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಸಂರಕ್ಷಿತ ಬೇಸಾಯದಡಿ ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 1 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು. ಹಾಗಾದರೆ ಯಾವ ಯಾವ ರೈತರಿಗೆ  ಎಷ್ಟು ಸಬ್ಸಿಡಿ ನೀಡಲಾಗುವುದು? ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಲಬುರಗಿ ಜಿಲ್ಲಯ ಸೇಡಂ ತಾಲೂಕಿನಿಂದ ಮಿನಿ ಟ್ರ್ಯಾಕ್ಟರ್ ಖರೀದಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಯಾಂತ್ರೀಕರಣ ಸಂರಕ್ಷಿತ ಬೇಸಾಯದಡಿ 20 ಪಿಟಿಓ ಹೆಚ್.ಪಿ ಅಶ್ವಶಕ್ತಿಯ ಕೆಳಗಡೆ ಮಿನಿ ಟ್ರ್ಯಾಕ್ಟರ್ ಖರೀದಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಿಂದ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕೃಷಿ ಚಟುವಟಿಕೆಗಳಿಗೆ ದಿನದಿಂದ ದಿನಕ್ಕೆ ಕೂಲಿ ಕಾರ್ಮಿಕರ ಕೆಲಸ ಹೆಚ್ಚಾಗುತ್ತಿದ್ದರಿಂದ ಸಣ್ಣ ಅನುಕೂಲವಾಗಲೆಂದು ಸಬ್ಸಿಡಿ ಸಹ ನೀಡಲಾಗುವುದು. ರೈತರು ಈ ಟ್ರ್ಯಾಕ್ಟರ ಗಳನ್ನು ಖರೀದಿಸಿ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಬಹುದು.

ಸೇಡಂ ತಾಲೂಕಿನಿಂದ ವಿವಿಧ ಸೌಲಭ್ಯ ನೀಡಲು ಅರ್ಜಿ ಆಹ್ವಾನ

2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ ಹೊಸ ಪ್ರದೇಶ ವಿಸ್ತರಣೆ (ಬಾಳೆ, ಸೀಬೆ, ಬಿಡಿ ಹೂಗಳು, ಹೈಬ್ರಿಡ್ ತರಕಾರಿ ಹಾಗೂ ಪ್ಲಾಸ್ಟಿಕ್ ಮಲ್ಚಿಂಗ್, ತೋಟಗಾರಿಕೆಯಲ್ಲಿ ಯಾಂತ್ರಿಕರಣ ಯೋಜನೆ ಅಡಿ 20 ಹೆಚ್.ಪಿ ಗಿಂತ ಕಡಿಮೆ ಇರುವ ಮಿನಿ ಟ್ರ್ಯಾಕ್ಟರ್, ಪಾಲಿ ಹೌಸ್, ಕೋಯ್ಲೋತ್ತರ ನಿರ್ವಹಣೆ ಘಟಕಗಳಾದ ಪ್ಯಾಕ್ ಹೌಸ್, ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸೇಡಂ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ ಮೊಬೈಲ್ ನಂಬರ್ ಹಾಕಿ ನಿಮಗೆಷ್ಟು ಹಣ ಜಮೆ ಚೆಕ್ ಮಾಡಿ

ನೀರಾವರಿ ಸೌಲಭ್ಯ ಹೊಂದಿರುವ ರೈತರು ಸೇಡಂ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಜುಲೈ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯ್ಲಲಿ ಘಟಕ ಅಳವಡಿಸಿಲು ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯವರ್ಗದ ರೈತರಿಗೆ ಶೇ. 55 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.

ಆಸಕ್ತ ರೈತರು ಪಹಣಿ, ಹೋಲ್ಡಿಂಗ್, ನೀರು ಬಳಕೆ ಪ್ರಮಾಣ ಪತ್ರ, ಗಣಕೀಕೃತ ಬೆಳೆ ದೃಢೀಕರಣ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಹಾಗೂ ಜಾತಿ ಪ್ರಮಾಣ ಪತ್ರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Mini Tractor Subsidy to farmers ರೈತರು ಯಾವ ಯಾವ ದಾಖಲಾತಿ ಸಲ್ಲಿಸಬೇಕು?

ಅರ್ಹ ರೈತರು ನಿಗದಿತ ಅರ್ಜಿ ನಮೂನೆ ಜೊತೆಗೆ ಪಹಣಿ, ಇತ್ತೀಚಿನ ಭಾವಚಿತ್ರ, ಖಾತೆ ಉತಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ  ಜಾತಿ ಪ್ರಮಾಣ ಪತ್ರ ನೀಡಬೇಕು. ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಸಲ್ಲಿಸಬೇಕು.  ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು.

Leave a Comment