Link your adhaar with Voter Id ಜನಸಾಮಾನ್ಯರು ಮನೆಯಲ್ಲಿಯೇ ಕುಳಿತು ವೋಟರ್ ಐಡಿ ಕಾರ್ಡಿಗೆ ತಮ್ಮ ಆಧಾರ್ ಕಾರ್ಡ್ ನ್ನು ಮ ಲಿಂಕ್ ಮಾಡಬಹುದು. ಹೌದು, ವೋಟರ್ ಐಡಿ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ.
ಜನಸಾಮಾನ್ಯರು ಮನೆಯಲ್ಲಿಯೇ ಕುಳಿತು ವೋಟರ್ ಐಡಿ ಕಾರ್ಡಿಗೆ ಆಧಾರ್ ನಂಬರ್ ಲಿಂಕ್ ಮಾಡುವ ಸುಲಭ ವಿಧಾನ ಇಲ್ಲಿದೆ. ಇದಕ್ಕಾಗಿ ಯಾರ ಬಳಿಯೂ ಹೋಗಬೇಕಿಲ್ಲ.ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಎಲ್ಲಾ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ Voter Helpline App ಮುಖಾಂತರ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು.
Link your adhaar with Voter Id ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಹೇಗೆ?
ಮೊಬೈಲ್ ನಲ್ಲೇ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಪ್ಲೇ ಸ್ಟೋರ್ ನಲ್ಲಿ Voter Helpline Appನ್ನು Install ಮಾಡಿಕೊಳ್ಳಬಹುದು. ಅಥವಾ ಈ
https://www.google.com/search?q=voter+helpline&oq=&aqs
ಲಿಂಕ್ ಮೇಲೆ ಕ್ಲಿಕ್ ಮಾಡಿ install ಮೇಲೆ ಕ್ಲಿಕ್ ಮಾಡಬೇಕು. ನಂತರ Open ಮೇಲೆ ಕ್ಲಿಕ್ ಮಾಡಬೇಕು. ನಂತರ I agree ಮೇಲೆ ಕ್ಲಿಕ್ ಮಾಡಬೇಕು ನಂತರ Next ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು ಕನ್ನಡದಲ್ಲಿ ಮಾಹಿತಿ ಭರ್ತಿ ಮಾಡಬೇಕಾದರೆ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ಇಂಗ್ಲೀಷ್ ಭಾಷೆ ಆಯ್ಕೆ ಮಾಡಿಕೊಂಡರೆ ಸುಲಭವಾಗಿ ಲಿಂಕ್ ಮಾಡಬಹುದು.
ಮೊಬೈಲ್ ನಲ್ಲಿ ಆ್ಯಪ್ ಎಡಗಡೆ ಕೆಳಗಡೆ Explore ಮೇಲೆ ಕ್ಲಿಕ್ ಮಾಡಬೇಕು. ನಂತರ Electoral Authentication Form-6B Select ಮಾಡಿಕೊಳ್ಳಬೇಕು.
Let’s start ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಹಾಕಬೇಕು. ಆಮೇಲೆ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. Do you already have voter id number ಕೆಳಗಡೆ Yes ಆಯ್ಕೆ ಮಾಡಿಕೊಂಡು Next ಮೇಲೆ ಕ್ಲಿಕ್ ಮಾಡಬೇಕು. ವೋಟರ್ ಐಡಿ (ಚುನಾವಣಾ ಗುರುತಿನ ಚೀಟಿ ನಂಬರ್ ನಮೂದಿಸಬೇಕು. ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಎಲೆಕ್ಷನ್ ಕಾರ್ಡ್ ಡಿಟೇಲ್ ಕಾಣುತ್ತದೆ.
ಅಲ್ಲಿ ನಿಮ್ಮ ಹೆಸರು, ವಯಸ್ಸು, ತಂದೆಯ ಹೆಸರು ಸೇರಿದಂತೆ ಇನ್ನಿತರ ಮಾಹಿತಿ ಕಾಣುತ್ತದೆ. Next ಮೇಲೆ ಕ್ಲಿಕ್ ಮಾಡಬೇಕು.ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಮೂದಿಸಬೇಕು. ಮೊಬೈಲ್ ನಂಬರ್ ಹಾಕಬೇಕು.
ಇದನ್ನೂ ಓದಿ : ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?
ಮೇಲ್ ಐಡಿ ಇದ್ದರೆ ಹಾಕಬೇಕು. ಇಲ್ಲದಿದ್ದರೆ ಬಿಡಬೇಕು. Place of Application ನಲ್ಲಿ ನಿಮ್ಮ ಊರು ನಮೂದಿಸಬೇಕು. ಫಾರ್ಮ್ 6 ಬಿ Preview ಕಾಣುತ್ತದೆ. ಅಲ್ಲಿ ನಿಮ್ಮ ಹೆಸರು, ಎಲೆಕ್ಷನ್ ಕಾರ್ಡ್, ಮೊಬೈಲ್ ನಂಬರ್, ಮೇಲ್ ಐಡಿ, ಆಧಾರ್ ಕಾರ್ಡ್ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ನಂತರ Proceed ಇದಾದನಂತರ conform ಮೇಲೆ ಕ್ಲಿಕ್ ಮಾಡಬೇಕು.
ಆಗ Thank you your application has been submitted successful ಎಂಬ ಮೆಸೇಜ್ ಬರುತ್ತದೆ. ಅದನ್ನು ನೀವು ಸ್ಕ್ರೀನ್ ಶ್ಯಾಟ್ ತೆಗೆದುಕೊಳ್ಳಬಹುದು. ಅಥವಾ Reference number ಬರೆದಿಟ್ಟುಕೊಳ್ಳಬಹುದು. ಒಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಕೊನೆಗೆ ಡನ್ ಮೇಲೆ ಕ್ಲಿಕ್ ಮಾಡಬಹುದು.