land ownership plan ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿನ ಭೂ ಒಡೆತನ ಯೋಜನೆಯಡಿಯಲ್ಲಿ ಬಂಜಾರಾ ಸಮುದಾಯದ ಭೂ ರಹಿತ ಮಹಿಳಾ ಕಾರ್ಮಿಕರಿಗೆ ಜಮೀನು ಖರೀದಿಗೆ 15 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಕನಿಷ್ಟ 2 ಎಕರೆ ಖುಷ್ಕಿ ಅಥವಾ 1 ಎಕರೆ ತರಿ ಅಥವಾ ಕನಿಷ್ಟ 1/2 ಎಕರೆ (20 ಗುಂಟೆ) ಭಾಗಾಯ್ತು ಜಮೀನನ್ನು ಖರೀದಿಸಿ ನೋಂದಣಿ ಮಾಡಿಕೊಡಲಾಗುವುದು. ನಿಗಮದಿಂದ ಸಹಾಯಧನ ಹಾಗೂ ಸಾಲವನ್ನು ಮಂಜೂರು ಮಾಡಿ ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಜಮೀನನ್ನು ಖರೀದಿಸಿ ಕೊಡಲಾಗುವುದು. ನಿಗದದ ವತಿಯಿಂದ ಜಮೀನನ್ನು ಖರೀದಿಸಿ ನೋಂದಣಿ ಮಾಡಿಸಲಾಗುವುದು. ಸೆಪ್ಟೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಘಟಕ ವೆಚ್ಚ ರೂ. 15 ಲಕ್ಷಗಳಾಗಿದ್ದು, ಈ ಪೈಕಿ 7.50 ಲಕ್ಷ ಸಹಾಯಧನ ಹಾಗೂ ರೂ. 7.50 ಲಕ್ಷ ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು ಶೇ. 6 ರ ಬಡ್ಡಿ ದರದಲ್ಲಿ 20 ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ. 20 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
land ownership plan ಭೂಮಿ ಖರೀದಿಗೆ ಅರ್ಹತೆಗಳು:
ಅರ್ಜಿದಾರರು ಪರಿಶಿಷ್ಟ ಲಂಬಾಣಿ ಜಾತಿಗೆ ಸೇರಿದ ಮಹಿಳಾ ಫಲಾನುಭವಿಯಾಗಿರಬೇಕು. ಅರ್ಜಿದಾರರು 18 ರಿಂದ 50 ವಯೋಮಾನದವರಾಗಿರಬೇಕು. ನಿಗಮದಿಂದ ಈ ಹಿಂದೆ ಸಾಲ ಪಡೆದಿರಬಾರದು. ಕೃಷಿ ಕಾರ್ಮಿಕಕರ ದೃಢೀಕರಣ ಪತ್ರ ಹೊಂದಿರಬೇಕು. (ತಹಶೀಲ್ದಾರರರಿಂದ)ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪ್ರಸ್ತಾವನೆ ಸಿದ್ದಗೊಂಡಿರಬೇಕು. ನಿಗಮದಿಂದ ನೇರ ಸಾಲ ಕಲ್ಪಿಸಲಾಗುವುದು.
ಇದನ್ನೂ ಓದಿ ಮೊಬೈಲ್ ನಲ್ಲೇ ಜಮೀನಿನ ಸ್ಕೆಚ್ ನಕ್ಷೆ ಹೀಗೆ ಪಡೆಯಿರಿ
ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000/- ಹಾಗೂ ನಗರ ಪ್ರದೇಶದಲ್ಲಿ ರೂ.2,00,000/- ಮಿತಿಯೊಳಗಿರಬೇಕು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.
ಸೂಚನೆ: ಅರ್ಜಿದಾರರು ದಯವಿಟ್ಟು ಸರಿಯಾಗಿ ಸ್ಕ್ಯಾನ್ ಮಾಡಿದ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಜಿರಾಕ್ಸ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬಾರದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇತ್ತೀಚಿನ ಭಾವಚಿತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆದಾಯ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಹೊಂದಿರಬೇಕು. ಪಹಣಿ (ಆರ್.ಟಿ.ಸಿ), ಆಧಾರ್ ಕಾರ್ಡ್ ಹೊಂದಿರಬೇಕು. ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್,.ಒಂದು ಬಿಳಿ ಪೇಜ್ ಮೇಲೆ ಸಹಿ ಮಾಡಿದ ನಂತರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ರೈತರು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಕೋರಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಯಸುವ ಆಸಕ್ತ ರೈತರು
http://ktdcl.in/web4/online/onlineapp.php
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತಾಂಡಾ ಅಭಿವೃದ್ಧಿ ನಿಗಮದ ಪೇಜ್ ಓಪನ್ ಆಗುತ್ತದೆ ಅಲ್ಲಿ ಭೂ ಒಡೆತನ ಯೋಜನೆ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಒಡೆತನ ಯೋಜನೆಯ ಪೇಜ್ ತೆರೆಯಲ್ಪಡುತ್ತದೆ. ಅಥವಾ
http://ktdcl.in/web4/landownership.php
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಭೂ ಒಡೆತನ ಯೋಜನೆಯ ಪೇಜ್ ಓಪನ್ ಆಗುತ್ತದೆ. ಜಿಲ್ಲೆ, ತಾಲೂಕು, ತಾಂಡಾ, ವಿಧಾನಸಭಾ ಕ್ಷೇತ್ರ, ಅರ್ಜಿದಾರನ ಹೆಸರು, ತಂದೆಯ ಹೆಸರು, ಮೊಬೈಲ್ ನಂಬರ್, ವಿದ್ಯಾರ್ಹತೆ, ಪೂರ್ಣ ವಿಳಾಸ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ಏನಾದರು ಸಮಸ್ಯೆಗಳಾದರೆ 9113000963 ನಂಬರಿಗೆ ಸಂಪರ್ಕಿಸಬಹುದು.
ಈಗಾಗಲೇ ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮರವರನ್ನು ಸಂಪರ್ಕಿಸಬಹುದು.
ಲೇಖನ: ರಾಮಲಿಂಗ್ ಬಾಣ್ಣೋತ್, ಇಟಕಾಲ ತಾಂಡಾ