ಯಾವುದೇ ಹಗ್ಗ ಟೇಪ್ ಇಲ್ಲದೆ ನಿಮ್ಮ ಜಮೀನಿನ ಅಳತೆ ಮೊಬೈಲ್ ನಲ್ಲಿ ಹೀಗೆ ಮಾಡಿ

Written by Ramlinganna

Published on:

Land Measurement in mobile here : ನಿಮ್ಮ ಜಮೀನಿನ ಅಳತೆ ಮಾಡಲು ನೀವು ಈಗ ಟೇಪ್ ಅಥವಾ ಹಗ್ಗ ಪಡೆಯಬೇಕಿಲ್ಲ. ಇನ್ನೊಬ್ಬರ ಸಹಾಯವೂ ಬೇಕಿಲ್ಲ. ಹೌದು, ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಕೇವಲ ಒಂದೇ ನಿಮಿಷದಲ್ಲಿ ನೀವು ಅಳತೆ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ

ಹಿಂದಿನಿಂದಲೂ ಜಮೀನು ಅಳತೆ ಮಾಡಲು ಸರಪಳಿ ಬಳಸುವುದು,ವಾಡಿಕೆ, ಜಮೀನು ಅಳತೆ ಮಾಡಿಸಬೇಕಾದರೆ ಜಮೀನು ಮಾಲಿಕ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿ ನಂತರ ಅಧಿಕಾರಿಗಳು ಬಂದು ಜಮೀನು ಸರ್ವೆ ಮಾಡುತ್ತಾರೆ. ಆದರೆ ಈಗ ಯಾರ ಸಹಾಯವೂ ಇಲ್ಲದೆ ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಜಮೀನಿನ ಅಳತೆಯನ್ನು ಮಾಡಬಹುದು.

ಏನಿದು ದಿಶಾಂಕ್ ಆ್ಯಪ್ ?

ಈ ದಿಶಾಂಕ್ ಆ್ಯಪ್ ನ್ನು ಕಂದಾಯ ಇಲಾಖು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ದಿಶಾಂಕ್ ಎಂಬ ಹೊಸ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ.ಈ ದಿಶಾಂಕ್ ಆ್ಯಪ್ ಮೂಲಕ ರೈತರು ಕ್ಷಣದಲ್ಲೇ ಜಮೀನಿನ ಅಳತೆ ಮಾಡಬಹುದು. ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ. ಈ ದಿಶಾಂಕ್ ಆ್ಯಪ್ ರಾಜ್ಯದ ಎಳ್ಲಾ ಜಿಲ್ಲೆಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಒಳಗೊಂಡಿದೆ.

Land Measurement in mobile here ಮೊಬೈಲ್ ನಲ್ಲಿ ಜಮೀನಿನ ಅಳತೆ ಮಾಡುವುದು ಹೇಗೆ?

ನಿಮ್ಮ ಜಮೀನಿನ ಅಳತೆಯನ್ನು ಮಾಡಲು ಈ

https://play.google.com/store/apps/details?id=com.ksrsac.sslr&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ದಿಶಾಂಕ್ ಯ್ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಿಂತ ಅಲೋ ದಿಶಾಂಕ್ ಟು ಆಕ್ಸೆಸ್ ದಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ನೀವು  ಭಾಷೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  ನಂತರ ನೀವು ನಿಮ್ಮ ಮೊಬೈಲ್ ನಲ್ಲಿ ಜಿಪಿಎಸ್ ಆನ್ ಮಾಡಿಕೊಳ್ಳಬೇಕಾಗುತ್ತದೆ. ಆಗ ನಿಮಗೆ ನಿಂತಿರುವ ಸ್ಥಳದ ಮಾಹಿತಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಸರ್ವೆ ನಂಬರ್ ಸಹ ಕಾಣಿಸುತ್ತದೆ. ಇದಾದ ನಂತರ ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಇನ್ನೊಂದು ಪೇಜ್ ನಿಮಗೆ ಓಪನ್ ಆಗುತ್ತದೆ. ನಂತರ ಅಲ್ಲಿ ಮಾಲಿಕರ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಗಮೆ ಆ ಜಮೀನಿನ ಮಾಲಿಕರು ಯಾರು ಇದ್ದಾರೆ ಅವರ ಅಕ್ಕಪಕ್ಕದ ಜಮೀನಿನ ಮಾಲಿಕರು ಯಾರಿದ್ದಾರೆ ಅವರ ಹೆಸರು ಸಹ ನಿಮಗೆ ಕಾಣಿಸುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾರಿಗೆ ಯಾವಾಗ ಜಮೆ? ಇಲ್ಲಿದೆ ಮಾಹಿತಿ

ಒಂದು ವೇಳೆ ನಿಮಗೆ ನೀವು ನಿಂತಿರುವ ಪಾಯಿಂಟ್ ಕಾಣಿಸದಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಸರ್ವೆ ನಂಬರ್ ನಮೂದಿಸಿದ ನೀವು ನಿಂತಿರುವ ಸ್ಥಳದ ಪಾಯಿಂಟ್ ನಿಮಗೆ ಕಾಣಿಸುತ್ತದೆ. ಆಗ ನೀವು ಅಲ್ಲಿ ಕಾಣಿಸುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಲೈನ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ  ಸರ್ವೆ ನಂಬರಿನಲ್ಲಿ ನೀವು ಯಾವ ದಿಕ್ಕಿನಿಂದ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ಜಮೀನು ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜಮೀನಿನ ಅಳತೆ ಪ್ರಕಾರಗಳು,

ಮೀಟರ್, ಫೀಟ್ ಹೀಗೆ ನಿಮಗೆ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೀಟರ್ ನಲ್ಲಿ ಅಳತೆ ಮಾಡಿಕೊಳ್ಳುವವರಾಗಿದ್ದರೆ ಮೀಟರ್ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಫೀಟ್ ಮೂಲಕ ಅಳತೆ ಮಾಡಿಕೊಳ್ಳಲು ಬಯಸಿದ್ದರೆ ಫೀಟ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನಿಮಗೆ ಆಯ್ಕೆಗಳು ಇರುತ್ತದೆ. ಅದರಲ್ಲಿ ನೀವು ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡು ಜಮೀನಿನ ಅಳತೆಯನ್ನು ಮೊಬೈಲ್ ನಲ್ಲೇ ಮಾಡಬಹುದು,

Leave a Comment