ನಿಮ್ಮ ಹೆಸರಿನಲ್ಲಿರುವ ಜಮೀನು ಹಿಂದೆ ಯಾರ ಯಾರ ಹೆಸರಿನಲ್ಲಿತ್ತು ಹೀಗೆ ಚೆಕ್ ಮಾಡಿ

Written by Ramlinganna

Published on:

Land history check here :  ನೀವು ಖರೀದಿಸಿರುವ ಅಥವಾ ನಿಮ್ಮ ಹೆಸರಿನಲ್ಲಿರುವ ಜಮೀನು ಹಿಂದೆ ಯಾರ ಯಾರ ಹೆಸರಿನಲ್ಲಿತ್ತು ಯಾರ ಯಾರ ಹೆಸರಿನಿಂದ ನಿಮ್ಮ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ರೈತರು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ನೀವು ಖರೀದಿಸಿರುವ ಜಮೀನು ಅಥವಾ ನಿಮ್ಮ ಹೆಸರಿನಲ್ಲಿರುವ ಜಮೀನು ಈ ಹಿಂದೆ ಯಾರ ಹೆಸರಿನಲ್ಲಿತ್ತು ಎಂಬುದನ್ನು ಮಾಡಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಭೂಮಿ ಆನ್ಲೈನ್ ಮುಟೇಶನ್ ಎಕ್ಸಟ್ರ್ಯಾಕ್ಟ್ ಎಂಬ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ನಮೂದಿಸಬೇಕು. Fetch Details ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಬರುವ ಹಿಸ್ಸಾ ನಂಬರ್ ಗಳು ಕಾಣಿಸುತ್ತದೆ. ಅದರ ಮುಂದೆ ಆ ಸರ್ವೆ ನಂಬರ್  ಗಳು ಯಾವ ವರ್ಷ ಜಮೀನು ವರ್ಗಾವಣೆಯಾಗಿದೆ. ಅದರ ಎದುರುಗಡೆ ಮುಟೇಶನ್ ನಂಬರ್ ಕಾಣಿಸುತ್ತದೆ. ನಂತರ ಜಮೀನು ಪಿತ್ರಾರ್ಜಿತವಾಗಿ ವರ್ಗಾವಣೆಯಾಗಿದೆಯೋ ಅಥವಾ ಪಹಣಿ ಬದಲಾವಣೆಯಾಗಿದೆಯ ಹಾಗೂ ಯಾವ ವರ್ಷದಲ್ಲಿ ತಹಶೀಲ್ದಾರರವರು ಅಪ್ರೂವ್ ಮಾಡಿದ್ದಾರೆ ದಿನಾಂಕ ಸಹಿತ ಮಾಹಿತಿ ಕಾಣಿಸುತ್ತದೆ.

ನಿಮ್ಮ ಜಮೀನಿನ ಹಿಸ್ಸಾ ನಂಬರ್ ಯಾವುದೋ ಅದರ ಹಿಂದುಗಡೆಯಿರುವ Select ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು Preview ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಇದು ನಿಮಗೆ ನಿಮ್ಮ ಜಮೀನು ಯಾರ ಯಾರ ಹೆಸರಿನಿಂದ ವರ್ಗಾವಣೆಯಾಗಿದೆ. ಯಾವ ವರ್ಷ ಮುಟೇಶನ್ ಆಗಿದೆ. ಸದ್ಯ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನಲ್ಲಿ ಜಂಟಿಯಾಗಿದೆಯ ಜಮೀನು ಪಟ್ಟಾ ಆಗಿದ್ದರೆ ಯಾವ ವರ್ಷ ಹಾಗೂ ಯಾವ ದಿನಾಂಕದಂದು ಆಘಿದೆ. ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.

Land history check here : ರೈತರ ಜಮೀನಿನ ದಾಖಲೆಗಳಲ್ಲಿ ಅತೀ ಮುಖ್ಯವಾದ ದಾಖಲೆ ಯಾವುದು ?

ತಮಗೆಲ್ಲಾ ಗೊತ್ತಿದ್ದ ಹಾಗೆ ಪಹಣಿ ಅಥವಾ ಆರ್.ಟಿ.ಸಿ ಎಂಬ ದಾಖಲೆ ಅತೀ ಮುಖ್ಯವಂದುಕೊಳ್ಳುತ್ತಾರೆ. ಪಹಣಿಯೊಂದಿಗೆ ರೈತರ ಬಳಿ ಆಕಾರ್ ಬಂದ್ ಖಾತಾ ನಂಬರ್,ಜಮೀನಿನ ಸ್ಕೆಚ್ ಎಲ್ಲಾ ದಾಖಲೆಗಳು ಇರಬೇಕು. ಇದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಹೆಸರು ಒಂದೇ ರೀತಿ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ನಿಮ್ಮ ಜಮೀನಿನಲ್ಲಿರುವ ಹೆಸರು ಹಾಗೂ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಬುಕ್ ನಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಸಹ ನಿಮಗೆ ಸರ್ಕಾರದ ಸಬ್ಸಿಡ ಹಣ ಸಿಗುವುದಿಲ್ಲ.

ಇತ್ತೀಚೆಗೆ ರೈತರಿಗೆ ಎಫ್ಐಡಿ ಕಡ್ಡಾಯಗೊಳಿಸಿದೆ

ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ ಹಣ ಸೌಲಭ್ಯ ಪಡೆಯಬೇಕಾದರೆ ಎಫ್ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಹೆಸರಿಗೆ ಕೇಂದ್ರ ಸರ್ಕರಾದ ಎಫ್ಐಡಿ ಇಲ್ಲದಿದ್ದರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ.

ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ಇಕೆವೈಸಿ ಮತ್ತು ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ನೋಂದಾಯಿತ ರೈತರಿಗೆ ಸಂಖ್ಯೆ ನೀಡಲಾಗುವುದು. ಇದನ್ನು ಪಿಎಂ ಕಿಸಾನ್ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿ ಕಡ್ಡಾಯವಾಗಿ ಉಪಯೋಗಿಸಲಾಗುತ್ತದೆ. ಆದ್ದರಿಂದ ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಮತ್ತು ಜಮೀನಿನ ಪಹಣಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಅಥವಾ ತೋಟಗಾರಿಕೆ ಇಲಾಖೆಯಲ್ಲಿಯೂ ಎಫ್ಐಡಿಗೆ ಅರ್ಜಿ ಸಲ್ಲಿಸಬಹುದು.

Leave a Comment