ನಿಮ್ಮ ಜಮೀನಿನ ಆಕಾರ್ ಬಂದ್ ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

Land akarband check here : ರೈತಮಿತ್ರರೇ ಈಗ ನೀವು ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಆಕಾರ್ ಬಂದ್ ಚೆಕ್ ಮಾಡಬಹುದು. ಆಕಾರ್ ಬಂದ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಟು ಜಮೀನಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ

Land akarband check here  ನಿಮ್ಮ ಜಮೀನಿನ ಆಕಾರ್ ಬಂದ್ ಹೀಗೆ ಚೆಕ್ ಮಾಡಿ

ನಿಮ್ಮ ಜಮೀನಿನ ಆಕಾರ್ ಬಂದ್ ಚೆಕ್ ಮಾಡಲು ಈ

https://bhoomojini.karnataka.gov.in/service39/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕರ್ನಾಟಕ ಸರ್ಕಾರ ಭೂ ಮಾಪನಾ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಕಾರ್ ಬಂದ್ ಚೆಕ್ ಮಾಡುವ ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ  ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ  ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹಿಸ್ಸಾ ನಂಬರ್ ನಲ್ಲೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಆಕಾರ್ ಬಂದ್ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಕಾರ್ ಬಂದ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಮೂದಿಸಿ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಕಾಣಿಸುತ್ತದೆ. ನಂತರ ನೀವು ಆಯ್ಕೆ ಮಾಡಿದ ಸರ್ವೆ ನಂಬರ್ ಎಷ್ಟು ಹೆಕ್ಟೇರ್ ಅಂದರೆ ಎಷ್ಟು ಎಕರೆ ಜಮೀನಿದಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಖರಾಬು ಜಮೀನು, ಖುಷ್ಕಿ ಜಮೀನು, ತರಿ ಜಮೀನು, ಬಾಗಾಯ್ತು ಹಾಗೂ ಪ್ಲಾಂಟೇಶನ್ ಜಮೀನು ಎಷ್ಟಿದೆ ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.

ಜಮೀನಿಗೆ ಸಂಬಂಧಿಸಿದ ದಾಖಲೆಗಳಾವುವು?

ಜಮೀನಿಗ ಸಂಬಂಧಿಸಿದ ದಾಖಲೆಗಳಲ್ಲಿ ಪಹಣಿ, ಮುಟೇಷನ್, ಕಾಫಿ, ಪೋಡಿ ನಕ್ಷೆ ಅತೀ ಮಹತ್ವದ್ದಾಗಿದೆ. ಇವುಗಳನ್ನು ನೀವು ಕರ್ನಾಟಕ ಸರ್ಕಾರದ ಭೂಮಿ ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಪರಿಶೀಲಿಸಬಹುದು. ಡೌನ್ಲೋಡ್ ಸಹ ಮಾಡಬಹುದು. ಮತ್ತು ಹೊಸ ದಾಖಲೆಗಳಿಗಾಗಿ ಆನ್ಲೈನ್ ಮೂಲಕ ಅರ್ಜಿಯೂ ಸಲ್ಲಿಸಬಹುದು. ಇವುಗಳ ಮೂಲಕ ಜಮೀನೀನ ಮಾಲೀಕತ್ವ, ವಿಸ್ತೀರ್ಣ, ಸಾಲದ ವಿವರ, ಇತ್ಯಾದಿ ಮಾಹಿತಿಗಳನ್ನು ತಿಳಿಯಬಹುದು.

ಇದನ್ನೂ ಓದಿ ನಿಮಗೇಕೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲ ಇಕೆವೈಸಿ ಆಗಿದೆಯೇ ಇಲ್ಲೇ ಚೆಕ್ ಮಾಡಿ

ಪಹಣಿ ಜಮೀನಿನ ಮಾಲಿಕ, ವಿಸ್ತೀರ್ಣ, ಸಾಲ, ಕಂದಾಯ ಇತ್ಯಾದಿ ವಿವರಗಳನ್ನು ಒಳಗೊಂಡ ದಾಖಲೆಯಾಗಿದೆ.

ಮುಟೇಶನ್ – ಜಮೀನಿನ ಮಾಲೀಕತ್ವದಲ್ಲಿ ಆದ ಬದಲಾವಣೆಗಳ ( ಮಾರಾಟ ವಿಭಾಗ ಇತ್ಯಾದಿ)

ಪೋಡಿ ನಕ್ಷೆ – ಭೂಮಿಯನ್ನು ವಿಂಗಡಿಸಿದಾಗ ಅಥವಾ ಸಣ್ಣ ತುಂಡುಗಳಾಗಿ ವಿಂಗಡಿಸಿದಾಗ ರಚಿಸುವ ಭೂ ನಕ್ಷೆಯಾಗಿದೆ.

ಭೂ ಸುಧಾರಣೆ ಘೋಷಣಾ ಪ್ರಮಾಣ ಪತ್ರ- ಭೂ ಸುಧಾರಣೆ ಕಾಯ್ದೆ 1961ರ ಕಲಂ 81 ಎ ಅಡಿಯಲ್ಲಿ ಬೇಕಾಗುವ ಘೋಷಣಾ ಪತ್ರವಾಗಿದೆ.

ದೃಢೀಕೃತ ಪ್ರಮಾಣ ಪತ್ರಗಳುಪ – ನೋಂದಣಿ ಇಲಾಖೆಗೆ ನೋಂದಣಿ ಸಂದರ್ಭದಲ್ಲಿ ಸಲ್ಲಿಸಲು ಅನುಬಂಧ-11 ಮತ್ತು ನಮೂನೆ 1 ಅಗತ್ಯವಿದೆ.

ಈ ಆಕಾರ್ ಬಂದ್ ಮಾಹಿತಿ ನಿಮಗೆ ವೀಕ್ಷಣೆ ಮಾಡುವುದಕ್ಕಾಗಿ ಲಭ್ಯವಿದೆ. ನಿಮಗೆ ಓರಿಜಿನಲ್ ಆಖಾರ್ ಬಂದ್ ಬೇಕಾದರೆ ಶುಲ್ಕ ಪಾವತಿಸಿ ಪಡೆಯಬೇಕಾಗುತ್ತದೆ. ನೀವು ನಿಮ್ಮ ಮೊಬೈಲ್ ನಲ್ಲಿಯೂ ಆಕಾರ್ ಬಂದ್ ಶುಲ್ಕ ಪಾವತಿಸಿ ಆಕಾರ್ ಬಂದ್ ಪಡೆಯಬಹುದು. ಇಲ್ಲಿದಿದ್ದರೆ ನೀವು ನಾಡ ಕಚೇರಿಯಲ್ಲಿ ಶುಲ್ಕ ಪಾವತಿಸಿ ಆಕಾರ್ ಬಂದ್ ದಾಖಲೆಯನ್ನು ಪಡೆದುಕೊಳ್ಳಬಹುದು.

Leave a Comment