Job fair on July 8 ವಿವಿಧ ಜಿಲ್ಲೆಗಳಲ್ಲಿ ನಿರುದ್ಯೋಗ ಯಿುವಕ ಯುವತಿಯರಿಗೆ ಉದ್ಯೋಗ ಒದಗಿಸುವುದಕ್ಕಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಲು ಕೋರಲಾಗಿದೆ.
ಹುಬ್ಬಳ್ಳಿ ನಗರದ ದ್ಯಾವಪ್ಪನವರ ಕೊರವಿ ಸಿದ್ನಾಳ ಎಜುಕೇಶನ್ ಟ್ರಸ್ಟಿನ ಚೇತನ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಂದ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗಾಗಿ ಜುಲೈ 8 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸ್ಕೂಲ್ ನ ನಿರ್ದೇಶಕ ಡಾ.ವಿ.ಎಂ. ಕೊರವಿ ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಮೊದಲು ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಸುಮಾರು 23ಕ್ಕೂ ಹೆಚ್ಚು ಕಂಪನಿಗಳು ಹಾಗೂ 2200 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಿದ್ದರು.
ಅದರಂತೆ 8 ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾವುದೇ ಪದವಿ ಹಿನ್ನೆಲೆಯ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿದ್ಯಾರ್ಥಿಗಳನ್ನು ಈ ಉದ್ಯೋಗ ಮೇಳದಲ್ಲಿ ಆಹ್ವಾನಿಸುತ್ತಿದ್ದೇವೆ ಎಂದರು.
ಈ ಮೇಳದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಲು ಈ
https://tinyurl.com/chetanmba-hubli-jobfair23
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ನಂತರ ನಿಮ್ಮ ಈ ಮೇಲ್ ಐಡಿ ಹಾಕಬೇಕು. ನಂತರ ನಿಮ್ಮ ಹೆಸರು, ಕಾಲೇಜು, ಕೆಲಸದ ಅನುಭವ, ಯಾವುದಾದರು ಕಂಪನಿಯಲ್ಲಿ ಕೆಲಸ ಮಾಡಿದ್ದರೆ ಕಂಪನಿ ಹೆಸರು ನಿಮ್ಮ ಮೊಬೈಲ್ ನಂಬರ್ ಹಾಗೂ ವ್ಯಾಟ್ಸಪ್ ನಂಬರ್ ಸೇರಿದಂತೆ ಇನ್ನಿತರ ಮಾಹಿತಿ ಭರ್ತಿ ಮಾಡಿ ಅರ್ಜಿಸಲ್ಲಿಸಬಹುದು.
ಜುಲೈ 15 ರಂದು ಉದ್ಯೋಗ ಮೇಳ ಹೆಸರು ನೋಂದಣಿಗೆ ಸೂಚನೆ
ವಿಶ್ವ ಕೌಶಲ್ಯ ದಿನದ ಅಂಗವಾಗಿ ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜುಲೈ 15 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಪಡೆಯಲು ಮೊಬೈಲ್ ನಲ್ಲೇ ಹೀಗೆ ಬೆಳೆ ಸಮೀಕ್ಷೆ ಮಾಡಿ
ಸದರಿ ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಅಭ್ಯರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಪದವೀಧರ ತಮ್ಮ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. 371 (ಜೆ) ಪ್ರಮಾಣ ಪತ್ರ ಹಾಗೂ 2 ಪಾಸ್ ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ಇದೇ ಜುಲೈ 10 ರಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಬಂದು ನೋಂದಣಿ ಮಾಡಿಕೊಳ್ಳಬೇಕು.
Job fair on July 8 ಬೀದರ್ ಜಿಲ್ಲೆಯಲ್ಲಿಯೂ ಜುಲೈ 8 ರಂದು ಉದ್ಯೋಗ ಮೇಳ
ಬೀದರ್ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೀದರ್ ಹಾಗೂ ಕರ್ನಾಟಕ ಪಿಯು ಕಾಲೇಜು ಸಹಯೋಗದಲ್ಲಿ ಜುಲೈ 8 ರಂದು ಕರ್ನಾಟಕ ಪಿಯು ಕಾಲೇಜು ಕುಂಬಾರ ವಾಡಾ ಮನ್ನಳ್ಳಿ ರೋಡ್, ಬೀದರ್ ನಲ್ಲಿ ನೇಮಕಾತಿ ಮೇಳ ಆಯೋಜಿಸಲಾಗಿದೆ.
ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್ಎಸ್ಎಲ್ಸಿ, ಐಟಿಐ, ಪಿಯುಸಿ ಹಾಗೂ ಯಾವುದ ಪದವಿ ಪಡೆದ 18 ರಿಂದ35 ವಯೋಮಾನದವರು ಭಾಗವಹಿಸುಬುದು.
ಭಾಗವಹಿಸುವ ಅಭ್ಯರ್ಥಿಗಳು 9480842995, 9019870871. 9916528852 ಗೆ ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು.
ರಾಯಚೂರಿನಲ್ಲಿ 7 ರಂದು ಉದ್ಯೋಗ ಮೇಳ
ರಾಯಚೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜುಲೈ 7 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಎರಡು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ನೇರ ಸಂದರ್ಸನ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬಾಲಾಜಿ ಕಾಂಪ್ಲೆಕ್ಸ್, ನೆಲಮಹಡಿ, ಗೂಡ್ ಶೆಡ್ ರಸ್ತೆ, ಸ್ಟೇಶನ್ ಏರಿಯಾ, ರಾಯಚೂರು, ದೂರವಾಣಿ 08532 231684, ಮೊ. 8618603928 ಗೆ ಸಂಪರ್ಕಿಸಲು ಕೋರಲಾಗಿದೆ.
ಜುಲೈ 14 ರಂದು ಕಾರ್ಯಾಗಾರ
ವಿಶ್ವ ಕೌಶಲ್ಯ ದಿನದ ಅಂಗವಾಗಿ ಇದೇ ಜುಲೈ 14 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕೆಎಎಸ್, ಮತ್ತು ಕೆಪಿಎಸ್.ಸಿ ಪರೀಕ್ಷಾರ್ಥಿಗಳಿಗೆ ಪರ್ಸನಾಲಿಟಿ ಡೆವಲಪಮೆಂಟ್ ಹಾಗೂ ಸಾಫ್ಟ್ ಸ್ಕಿಲ್ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
ಈ ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಚಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846 ಗೆ ಸಂಪರ್ಕಿಸಲು ಕೋರಲಾಗಿದೆ.
ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ಬಾಗಲಕೋಟೆ ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ ದಾಂಡೇಲಿ ಹಾಗೂ ಟಾಟಾ ಮೋಟರ್ಸ್ ಧಾರವಾಡ ಇವರ ಸಹಯೋಗದಲ್ಲಿ 30 ದಿನಗಳ ಕಾಲ ಲಘು ವಾಹನ ಚಾಲನಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
20 ರಿಂದ 45 ವರ್ಷ ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡು ಅರ್ಜಿಯನ್ನು ಜುಲೈ 18 ರೊಳಗಾಗಿ ತಲುಪಿಸುವಂತೆ ಆರ್ಸೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 08284 298547, 9632143217, 9449782425 ಗೆ ಸಂಪರ್ಕಿಸಬಹುದು.