ನವೆಂಬರ್ 8 ರಂದು ಉದ್ಯೋಗ ಮೇಳ

Written by Ramlinganna

Published on:

Job fair in kalaburgi ಕಲಬುರಗಿ ಜಿಲ್ಲಾಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ನವೆಂಬರ್ 8 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Job fair in kalaburgi ಉದ್ಯೋಗ ಮೇಳ

ಟಾಟಾ ಕ್ಯಾಪಿಟಲ್ ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ, ಐಟಿಐ, ಡಿಪ್ಲೋಮಾ ಯಾವುದೇಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾದೊಳಗಿರಬೇಕು. ಕಿಯಾ ಮೋಟರ್ಸ್ ದಲ್ಲಿ ಜನರಲ್ ಮ್ಯಾನೇಜರ್ ಸೇಲ್ಸ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 28 ರಿಂದ 45 ವಯೋಮಾನದೊಳಗಿರಬೇಕು. ಸೇಲ್ಸ್ ಮ್ಯಾನೇಜರ್, ಟೀಮ್ ಲೀಡರ್, ಮಾರ್ಕೇಟಿಂಗ್ ಮ್ಯಾನೇಜರ್, ಎಚ್.ಆರ್. ಮ್ಯಾನೇಜರ್, ಅಕೌಂಟ್ಸ್ ಮ್ಯಾನೇಜರ್ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು. ಸೇಲ್ಸ್ ಟೇಲಿಕಾಲರ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು.

ಜನಜಾಗರಣ ಯೂಟೂಬ್ ಚಾನಲಿಗೆ subscribe ಆಗಲು ಕೆಳಗೆ ಕಾಣುವ subscribe ಮೇಲೆ  ಕ್ಲಿಕ್ ಮಾಡಿ ನಂತರ ಪೇಜ್ ಓಪನ್ ಆಗಲಿದೆ ಅಲ್ಲಿ subscribe ಮಾಡಿ

ಸ್ವತಂತ್ರ ಮೈಕ್ರೋ ಫೈನಾನ್ಸ್ ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ30 ವಯೋಮಾನದೊಳಗಿರಬೇಕು. ಶ್ರೀ ಸಾಯಿ ಅರ್ಥ ಮೂವರ್ಸ್ ದಲ್ಲಿ ಸರ್ವೀಸ್ ಇಂಜಿನಿಯರ್ ಹುದ್ದೆಗೆ ಐಟಿಐ ಅಥವಾ ಡಿಪ್ಲೋಮಾ (ಯಾವುದೇ ಟ್ರೇಡ್)  ವಿದ್ಯಾರ್ಹತೆ ಹೊಂದಿರಬೇಕು.ಸೇಲ್ ಇಂಜನಿಯರಿಂಗ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವಯೋಮಾನದೊಳಗಿರಬೇಕು. ಎಕ್ಸಪ್ರೆಸ್ ಬ್ಸಿ ದಲ್ಲಿ ಫೀಲ್ಡ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ18 ರಿಂದ 35 ವಯೋಮಾನದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಡ ದಿನದಂದು ನಡೆಯುವ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಇದನ್ನೂ ಓದಿ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮೊಬೈಲ್ ನಲ್ಲಿ ಹೀಗೆ ಮಾಡಿ

ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

ಜನನ ಮರಣ ಪ್ರಮಾಣ ಪತ್ರ  ಆನ್ಲೈನ್ ನಲ್ಲೇ ಪಡೆಯಿರಿ

ಜನನ ಮರಣ ಪ್ರಮಾಣ ಪತ್ರ ಆನ್ಲೈನ್ ನಲ್ಲಿ ಪಡೆಯಲು ಈ

https://ejanma.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಬರ್ತ್ ಸರ್ಟಿಫಿಕೇಟ್ ಬೇಕೋ ಅಥವಾ ಡೆತ್ ಸರ್ಟಿಫಿಕೇಟ್ ಬೇಕೋ ಎಂಬುದನ್ನು ಗುರುತಿಸಬೇಕು.  ಯಾವ ಸರ್ಟಿಫಿಕೇಟ್ ಬೇಕೋ ಅದರ ಮೇಲೆ ಕ್ಲಿಕ್ ಮಾಡಬೇಕು. ಬರ್ತ್ ಸರ್ಟಿಫಿಕೇಟ್ ಬೇಕಾದರೆ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ಬರ್ತ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

ರಾಜ್ಯಾದ್ಯಂತ 5950 ಗ್ರಾಮ ಪಂಚಾಯತಿಗಳಿವೆ. ಎಲ್ಲಾ ಪಂಚಾಯತಿಗಳಲ್ಲೂ ಈ ಸೇವೆ ಕಲ್ಪಿಲಾಗುವುದು. ಜೊತೆಗೆ, ವಿವಾಹ ನೋಂದಣಿಯೂ ಗ್ರಾಮ ಪಂಚಾಯತಿಗಳಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.  ಈ ವರೆಗೆ ವಿವಾಹ ನೋಂದಣಿ ಕಾರ್ಯ ಕೇವಲ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೇ ನಡೆಯುತ್ತಿತ್ತು. ಪಿಡಿಓಗಳನ್ನು ಜನನ ಮರಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಮ ಪಂಚಾಯತಿ ಕಾರ್ಯದರ್ಶಿಯವರನ್ನು ಉಪ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.

Leave a Comment