job card beneficiary list : ನರೇಗಾ ಜಾಬ್ ಕಾರ್ಡ್ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ) ಪಟ್ಟಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಅಡಿಯಲ್ಲಿ ಯಾರು ಯಾರು ಹೆಸರು ನೋಂದಾಯಿಸಿಕೊಂಡಿದ್ದಾರೋ ಅವರೆಲ್ಲರೂ ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
job card beneficiary list ಜಾಬ್ ಕಾರ್ಡ್ ದಿಂದಾಗುವ ಪ್ರಯೋಜನಗಳು
ನರೇಗಾ ಜಾಬ್ಕಾರ್ಡ್ ಇದ್ದರೆ ಎಂಜಿನರೇಗಾ ಯೋಜನೆಯಡಿ ಉದ್ಯೋಗ ಪಡೆಯಲು ಸಹಾಯವಾಗುತ್ತದೆ. ಕೂಲಿ ಹಣವನ್ನು ಕಾರ್ಡ್ ದೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುವುದು. ಕೂಲಿ ಪಾವತಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಜಾಬ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ
ಮನರೇಗಾ ಜಾಬ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://nregastrep.nic.in/netnrega/loginframegp.aspx?salogin=Y&state_code=15
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮನರೇಗಾ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಪ್ರಸಕ್ತ ಸಾಲಿನ ವರ್ಶ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಬ್ಲಾಕ್ ನಲ್ಲಿ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಪಂಚಾಯತ್ ಅಂದರೆ ನಿಮ್ಮ ಊರು ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ ಆ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Proceed ಮೇಲೆ ಕ್ಲಿಕ್ ಮಾಡಬೇಕು. ನಂತರ Job card Registration ಕೆಳಗಡೆ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ Job card Employment Registration ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರು ಯಾರು ಜಾಬ್ ಕಾರ್ಡ್ ಗಾಗಿ ನೋಂದಣಿ ಮಾಡಿಸಿದ್ದಾರೋ ಅವರ ಜಾಬ್ ಕಾರ್ಡ್ ನಂಬರ್ ನೊಂದಿಗೆ ಅವರ ಹೆಸರು, ತಂದೆಯ ಹೆಸರು, ಸಂಪರ್ಣ ವಿಳಾಸ ಕಾಣಿಸುತ್ತದೆ.
ಇದನ್ನೂ ಓದಿ ಪಿಎಂ ಕಿಸಾನ್ 22ನೇ ಕಂತಿನ ಹಣ ಈ ದಿನ ರೈತರ ಖಾತೆಗೆ ಜಮೆ
ನಿಮ್ಮ ಹೆಸರಿನ ಜಾಬ್ ಕಾರ್ಡ್ ಹಿಂದುಗಡೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮ ಜಾಬ್ ಕಾರ್ಡ್ ಸಕ್ರೀಯವಾಗಿದೆಯೋ ಇಲ್ಲವೋ ಎಂಬುದು ಸಹಿತ ಗೊತ್ತಾಗುತ್ತದೆ. ಅಲ್ಲಿ ನಿಮ್ಮ ಹೆರರು, ವಿಳಾಸ ಕಾಣಿಸುತ್ತದೆ.
ಜಾಬ್ ಕಾರ್ಡ್ ಪಡೆಯಲು ಬೇಕಾಗುವ ಅರ್ಹತೆಗಳು
ಜಾಬ್ ಕಾರ್ಡ್ ಪಡೆಯಲು ಭಾರತದ ಗ್ರಾಮೀಣ ಕುಟುಂಬಕ್ಕೆ ಸೇರಿದವರಾಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 60 ವಯೋಮಾನದೊಳಗಿರಬೇಕು. ಸರ್ಕಾರಿ ನೌಕರರು ಅಥವಾ ನಿಯಮಿತ ಸಂಬಳ ಪಡೆಯುವವರು ನರೇಗಾ ಉದ್ಯೋಗಕ್ಕೆ ಅರ್ಹರಾಗಿರುವುದಿಲ್ಲ ವಿಕಲಚೇತನ ವ್ಯಕ್ತಿಗಳನ್ನು ಹೊರತುಪಡಿಸಲಾಗಿಲ್ಲ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಕೆಲಸದ ಆಯ್ಕೆಗಳನ್ನು ನೀಡಬಹುದು.
ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಪಡೆಯಲು ಬೇಕಾಗುವ ಅರ್ಹತೆಗಳು
ನರೇಗಾ ಜಾಬ್ ಕಾರ್ಡ್ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ 100 ದಿನಗಳ ಕೂಲಿ ಉದ್ಯೋಗವನ್ನು ಖಾತ್ರಿ ಪಡಿಸುವ ಮೂಲಕ ಅವರಿಗೆ ಅಧಿಕಾರ ನೀಡುತ್ತದೆ. ನರೇಂಗಾ ಜಾತಿ, ಧರ್ಮ, ಸಾಮಾಜಿಕ ಸ್ಥಿತಿ ಅಥಾ ಭೂ ಮಾಲೀಕತ್ವದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ವಯಸ್ಸು ಮತ್ತು ನಿವಾಸದ ಮಾನದಂಡಗಳನ್ನು ಪೂರೈಸುವ ಯಾವುದೇ ಗ್ರಾಮೀಣ ಕುಟುಂಬವು ಅರ್ಜಿ ಸಲ್ಲಿಸಬಹುದು.
ಜಾಬ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು
ನಿವಾಸದ ಪುರಾವೆ ಅಂದರೆ ಪಡಿತರ ಚೀಟಿ, ವಿದ್ಯುತ್ ಬಿಲ್ ಬೇಕು. ಕುಟುಂಬದ ಎಲ್ಲಾ ವಯಸ್ಕ ಸದಸ್ಯರ ಗುರುತಿ ಪುರಾವೆ ಅಂದರೆ ಆಧಾರ್ ಕಾರ್ಡ್ ಅಥಾ ಮತದಾರರ ಗುರುತಿನ ಚೀಟಿ ಸಲ್ಲಿಸಬೇಕು. ಎರಡು ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಸಲ್ಲಿಸಬೇಕು.





