Mini job fair : ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಗ್ರಿ, ಎಂಬಿಎ,ಎಂಬಿಬಿಎಸ್ ಪಾಸಾದ ಅಭ್ಯರ್ಥಿಗಳಿಗಾಗಿ ವಿವಿಧ ಹುದ್ದೆಗಳ ಭರ್ತಿಗೆ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಹೌದು, ಕಲಬುರಗಿ ಜಿಲ್ಲಾಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜೂನ್ 14 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಯುನೈಟೆಡ್ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಹುದ್ದೆಗೆ ಎಂಬಿಬಿಎಸ್, ಬಿಎಚ್.ಎಮ್.ಎಸ್, ಬಿಎಎಮ್ಎಸ್, ವಿದ್ಯಾರ್ಹತೆ ಹೊಂದಿರಬೇಕು. ವಯಸ್ಸು 40 ವರ್ಷ ಹೊಂದಿರಬೇಕು. ಒಂದು ವರ್ಷದ ಕೆಲಸ ಅನುಭವ ಹೊಂದಿರಬೇಕು. ನರ್ಸಿಂಗ್ ಸ್ಟಾಫ್ ಐಸಿಯು ಎಚ್.ಡಿಯು ಹುದ್ದೆಗೆ ಜಿಎನ್ಎಮ್, ಬಿಎಸ್.ಸಿ ವಿದ್ಯಾರ್ಹತೆ ಹೊಂದಿರಬೇಕು. ನರ್ಸಿಂಗ್ ಸ್ಟಾಫ್ ಕ್ಯಾಜುವಲ್ಟಿ ಹುದ್ದೆಗೆ ಜಿಎನ್ಎಮ್ ಬಿ.ಎಸ್.ಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು. ಎರಡು ವರ್ಷದ ಕೆಲಸ ಅನುಭವ ಹೊಂದಿರಬೇಕು.
mini job fair ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ
ಬಜಾಜ್ ಅಟೋದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕು. ಟೆಕ್ನಿಶಿಯನ್ ಹುದ್ದೆಗೆ ಐಟಿಐ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.
ವಿನಾಯಕ ಇಂಡಸ್ಟ್ರಿಸ್ ದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಬಿಸಿಎ, ಡಿಬಿಎ, ಎಂಬಿಎ, ವಿದ್ಯಾರ್ಹತೆ ಹೊಂದಿರಬೇಕು. ಟೆಕ್ನಿಶಿಯನ್ ಹುದ್ದೆಗೆ ಐಟಿಐ ಡಿಪ್ಲೋಮಾ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.
ಫ್ರೀಚಾರ್ಜ್ ದಲ್ಲಿ ಫೀಲ್ಟ್ ಆಫೀಸರ್ ರಿಲೇಶನ್ ಶಿಪ್ ಆಫೀಸರ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಟೀಮ್ ಲೀಡರ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.ವಯೋಮಿತಿ18 ರಿಂದ ವರ್ಷದೊಳಗಿರಬೇಕು.
ಇದನ್ನೂ ಓದಿ : ಎಷ್ಟು ಬೆಳೆ ಹಾನಿಯಾದರೆ ಎಷ್ಟು ವಿಮೆ ಹಣ ಜಮೆಯಾಗಲಿದೆ? ಇಲ್ಲಿದೆ ಮಾಹಿತಿ
ವಿ-5 ಗ್ಲೋಬಲ್ ಸರ್ವಿಸ್ (ಟಾಟಾ ವಿಸ್ಟ್ರನ್) ದಲ್ಲಿ ಅಸೆಂಬ್ಲಿ ಲೈನ್ ಆಪರೇಟರ್ ಹುದ್ದೆಗೆ ಮಹಿಳೆಯರು ಎಸ್ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಮತ್ತು ಪುರುಷರು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.
ಅವಸರ್ ದಲ್ಲಿ ಪ್ರೊಡಕ್ಷನ್ ಆಪರೇಟರ್ ಟೆಕ್ನಿಕಲ್ ಆಪರೇಟರ್ ಹುದ್ದೆಗೆ ಮಹಿಳೆಯರು ಎಸ್.ಎಸ್.ಎಲ್.ಸಿ ಪಿಯುಸಿ, ಡಿಪ್ಲೋಮಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು.
Mini job fair ಫೀಲ್ಡ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ಅನ್ನಪೂರ್ಣ ಫೈನಾನ್ಸ್ ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ, ಐಟಿಐ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 27 ವಯೋಮಾನದೊಳಗಿರಬೇಕು. ದ್ವಿಚಕ್ರ ವಾಹನ ಪರವಾನಗಿ ಹಾಗೂ ವಾಹನ ಕಡ್ಡಾಯ ಇರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ)ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472 274846,ಮೊಬೈಲ್ ಸಂಖ್ಯೆ 9620095270 ಅಥವಾ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.