Insure these crops ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೆಲವು ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸಲು ಇನ್ನೂ 15 ದಿನ ಮಾತ್ರ ಉಳಿಯಿತು. ಹೌದು, ಕೊನೆಯ ದಿನಾಂಕದವರೆಗೆ ಕಾಯದೆ ರೈತರು ತಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡಿ ಇಂದೇ ಬೆಳೆ ವಿಮೆ ಮಾಡಿಸಿ. ಹಾಗಾದರೆ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸುವುದಕ್ಕಾಗುವುದಿಲ್ಲೇ? ಹೌದು, ಕೆಲವು ಜಿಲ್ಲೆಗಳಿಗೆ ಕೆಲವು ಬೆಳೆಗಳಿಗೆ ಮಾತ್ರ ಬೆಳೆ ವಿಮೆ ಮಾಡಿಸಬಹುದು.ನಿಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ
Insure these crops ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?
ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/PublicView/FindCutOff.aspx
ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ಬೆಳೆ ವಿಮೆಯ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿರುವ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ ಎಂಬ ಪಟ್ಟಿ ಕಾಣುತ್ತದೆ. ಆ ಆಧಾರದ ಮೇಲೆ ನೀವು ನಿಮ್ಮ ಜಮೀನಿನಲ್ಲಿ ಮೇಲೆ ತಿಳಿಸಿದ ಬೆಳೆಗಳನ್ನು ಬಿತ್ತಿದ್ದರೆ ಡಿಸೆಂಬರ್ 31 ರೊಳಗೆ ವಿಮೆ ಮಾಡಿಸಬಹುದು.
ಯಾವ ಬೆಳೆಗೆ ಎಷ್ಟು ವಿಮೆ ಪಾವತಿಸಬೇಕು? ಎಷ್ಟು ವಿಮೆ ಹಣ ಜಮೆಯಾಗುತ್ತದೆ?
ರೈತರು ಬೆಳೆ ವಿಮೆ ಮಾಡಿಸುವುದಕ್ಕಿಂತ ಮುಂಚೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಪಾವತಿಸಬೇಕು? ಹಾಗೂ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು
https://www.samrakshane.karnataka.gov.in/Premium/Premium_Chart.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿಯಲ್ಲಿ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಮೀನು ಎಷ್ಟು ಎಕರೆ ಮತ್ತು ಗುಂಟೆ ಇದೆ ಎಂಬುದನ್ನು ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿ ಎಕರೆಗೆ ಎಷ್ಟು ವಿಮೆ ಹಣ ನಿಮಗೆ ಜಮೆಯಾಗಬಹುದು? ಒಟ್ಟು ಎಷ್ಟು ವಿಮೆ ಹಣ ಪಾವತಿಸಲಾಗುವುದು.
ಇದನ್ನೂಓದಿ : ಮೊಬೈಲ್ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ನಿಮಗೆ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ನೀವು ಎಷ್ಟು ವಿಮೆ ಹಣ ಪಾವತಿಸುತ್ತೀರಿ ಎಂಬುದು ಫಾರ್ಮರ್ ಶೇರ್ ಕೆಳಗಡೆ ನಮೂದಿಸಲಾಗಿರುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪಾಲು ಎಷ್ಟಿರುತ್ತದೆ ಎಂಬುದನ್ನು ಅಲ್ಲಿ ನಮೂದಿಸಲಾಗಿರುತ್ತದೆ. ನೀವು ಪಾವತಿಸುವ ಹಣ ತುಂಬಾ ಕಡಿಮೆಯಿರುತ್ತದೆ. ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಾವತಿಸುತ್ತವೆ. ಹಾಗಾಗಿ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಡಿಸೆಂಬರ್ 31 ರೊಳಗಾಗಿ ಬೆಳೆ ವಿಮೆ ಮಾಡಿಸಬಹುದು.
ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನವರಾಗಿದ್ದರೆ ಪ್ರತಿ ಹೆಕ್ಟೇರಿಗೆ ಕಡಲೆ ಬೆಳೆಗೆ 29 ಸಾವಿರ, ಜೋಳಕ್ಕೆ 34 ಸಾವಿರ ಸೂರ್ಯಕಾಂತಿಗೆ 26 ಸಾವಿರ ಹಾಗಹೂ ಭತ್ತಕ್ಕೆ 86 ಸಾವಿರ ರೂಪಾಯಿಯವರೆಗೆ ಜಮೆಯಾಗಲಿದೆ. ನಿಮ್ಮ ಜಿಲ್ಲೆಗಳ ಬೆಳೆಗೆ ಎಷ್ಟೆಷ್ಟು ಹಣ ಜಮೆಯಾಗಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ.
ಬೆಳೆ ವಿಮೆ ಏಕೆ ಮಾಡಿಸಬೇಕು?
ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರಿಗೆ ಆರ್ಥಿಕ ಸಹಾಯ ನೀಡಲಾಗುವುದು. ಬೆಳೆ ವಿಮೆ ಹಣ ತುಂಬಾ ಕಡಿಮೆಯಿರುತ್ತದೆ. ಬೆಳೆ ಹಾಳಾದಾಗ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಹಣ ನೆರವಾಗಲಿದೆ. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸಬೇಕು.