call this toll free number ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ನಂತರ ತಮ್ಮ ಬೆಳೆ ಹಾಳಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಿದರೆ ಮಾತ್ರ ವಿಮೆ ಹಣ ಜಮೆಯಾಗುತ್ತದೆ. ಹಾಗಾದರೆ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನುನಿಯೋಜಿಸಲಾಗಿದೆ ಹಾಗೂ ಬೆಳೆ ವಿಮೆ ಕಟ್ಟಿದ ನಂತರ ರೈತರೇನು ಮಾಡಬೇಕು? ಯಾವಾಗ ವಿಮಾ ಕಂಪನಿಗೆ ತಿಳಿಸಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಮುಂಗಾರು ಹಂಗಾಮಿನ ಬೆಳೆಗಳಿಗೆ ಪ್ರಸಕ್ತ ಸಾಲಿಗೆ ಬೆಳೆ ವಿಮೆ ಮಾಡಿಸಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಕೆಲವು ಬೆಳೆಗಳಿಗೆ ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
call this toll free number ಬೆಳೆ ಹಾಳಾದಾಗ ಯಾವಾಗ ಯಾರಿಗೆ ತಿಳಿಸಬೇಕು?
ಯಾರು ಬೆಳೆವಿಮೆ ಮಾಡಿಸಿದ್ದಾರೋ ಅಂಥಹ ರೈತರ ಬೆಳೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರು ಮಳೆಯಿಂದ ಬೆಳೆ ಹಾಳಾಗಿದ್ದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ಮಾಹಿತಿ ನೀಡಬೇಕಾಗುತ್ತದೆ. ಹೌದು, ರೈತರು 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಲೇಬೇಕು.
ಇದನ್ನೂ ಓದಿ : ಗೃಹಜ್ಯೋತಿಗೆ ನಿಮ್ಮಅರ್ಜಿ ಸ್ವೀಕೃತವಾಗಿದೆಯೇ? ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ
ಆಗ ನಿಮ್ಮ ಜಿಲ್ಲೆಗೆ ನಿಯೋಜಿಸಿದ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಹಾಳಾಗಿರುವ ಕುರಿತು ಪರಿಶೀಲನೆ ಮಾಡುತ್ತಾರೆ. ನಂತರ ಬೆಳೆ ಹಾಳಾಗಿರುವ ಕುರಿತು ವಿಮಾ ಕಂಪನಿಗೆ ವರದಿ ಸಲ್ಲಿಸುತ್ತಾರೆ. ನಂತರ ನಿಮ್ಮ ಬೆಳೆ ಯಾವ ಹಂತದಲ್ಲಿ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಎಂಬುದರ ಕುರಿತು ವರದಿ ಸಲ್ಲಿಸಿದ ನಂತರ ನಿಮಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.
ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ? ತಿಳಿಯುವುದು ಹೇಗೆ?
ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಿರುತ್ತಾರೆ ಎಂಬುದೇ ಗೊತ್ತಿರುವುದಿಲ್ಲ. ಹಾಗಾಗಿ ರೈತರು ತಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನುಚೆಕ್ ಮಾಲು ಈ
https://samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ಸ್ ಕೆಳಗಡೆ Know Your Insurance co. ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಇಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾಗೂ ತರಕಾರಿ ಮತ್ತು ಇನ್ನಿತರ ಬೆಳೆಗಳಿಗೆ ಬೇರೆ ಬೇರೆ ವಿಮಾ ಕಂಪನಿಯನ್ನು ನಿಯೋಜಿಸಲಾಗಿರುತ್ತದೆ. ಅಲ್ಲಿ ನಿಮ್ಮ ಜಿಲ್ಲೆಗೆ ಯಾವ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಬರೆದಿಟ್ಟುಕೊಳ್ಳೇಕು
ಯಾವ್ಯಾವ ವಿಮಾ ಕಂಪನಿಗೆ ಯಾವುದು ಉಚಿತ ಸಹಾಯವಾಣಿಯಿದೆ?
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 425 0505 ಇದೆ. ಯುನಿವರ್ಸಲ್ ಸ್ಯಾಂಪೋ ಉಚಿತ ಸಹಾಯವಾಣಿ 1800 200 5142, ಎಸ್.ಬಿ.ಐ ಉಚಿತ ಸಹಾಯವಾಣಿ 1800 180 1551, ಹೆಚ್.ಡಿ.ಎಫ್.ಸಿ ಅರ್ಗೋ ಉಚಿತ ಸಹಾಯವಾಣಿ 1800 266 0700 ಅದೇ ರೀತಿ ಫೂಚರ್ ಜನರಲ್ ಇನ್ಸುರೆನ್ ಉಚಿತ ಸಹಾಯವಾಣಿ 1800 266 4141 ಆಗಿದೆ. ಐಸಿಐಸಿ ಲ್ಯಾಂಬೋರ್ಡ್ ಉಚಿತ ಸಹಾಯವಾಣಿ 1800103 7712 ಆಗಿದೆ. ಬಜಾಜ್ ಅಲಾಯನ್ಸ್ ಗೆ 1800 209 5959 ಉಚಿತ ಸಹಾಯವಾಣಿಯಾಗಿದೆ.
ರೈತರು ತಮ್ಮ ಜಿಲ್ಲೆಯ ಉಚಿತ ಸಹಾಯವಾಣಿಯನ್ನು ತಮ್ಮ ಮೊಬೈಲ್ ನಲ್ಲಿ ಪೀಡ್ ಮಾಡಿಕೊಳ್ಳಬೇಕು. ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾಳಾದಾಗ ನಿಮ್ಮಜಿಲ್ಲೆಯ ಉಚಿತ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ತಾಲೂಕಿನ ಸಿಬ್ಬಂದಿ ನಂಬರ್ ಪಡೆದು ದೂರು ನೀಡಬೇಕು. ಆಗ ವಿಮಾ ಸಿಬ್ಬಂದಿ ನಿಮ್ಮ ಜಮೀನಿಗೆ ಬಂದು ಪರಿಶೀಲನೆ ಮಾಡುತ್ತಾರೆ.ಇದಕ್ಕಿಂತ ಮುಂಚಿತವಾಗಿ ನೀವು ಬೆಳೆ ಸಮೀಕ್ಷೆ ಮಾಡಿರಬೇಕು. ಬೆಳೆ ಸಮೀಕ್ಷೆಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದು.