ಈ ಬೆಳೆಗಳಿಗೆ ವಿಮೆ ಮಾಡಿಸಿದರೆ ಮಾತ್ರ ನಿಮಗೆ ಹಣ ಜಮೆ

Written by Ramlinganna

Updated on:

if insured these crops  ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಕೆಲವು ಬೆಳೆಗಳಿಗೆ ವಿಮೆ ಮಾಡಿಸಿದರೆ ಮಾತ್ರ ರೈತರ ಖಾತೆಗೆ ಹಣ ಜಮಯಾಗುವುದು.

ಹೌದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಎಲ್ಲಾ ಬೆಳೆಗಳಿಗೆ ವಿಮೆ ಹಣ ಜಮೆಯಾಗುವುದಿಲ್ಲ. ಅದು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಬೆಳೆ ವಿಮೆ ಭಿನ್ನವಾಗಿರುತ್ತದೆ.ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕೆಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?

ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು  ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಫಾರ್ಮರ್ಸ್ crop you can insure ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮಊರು ಆಯ್ಕೆ ಮಾಡಿಕೊಂಡು Display ಮೇಲೆ ಕ್ಲಿಕ್ ಮಾಡಿದರೆ ಸಾಕು, ಯಾವ ಯಾವ ಬೆಳಗಳಿಗೆ ವಿಮೆ ಮಾಡಿಸಬಹುದು ಎಂಬುದರ ಪಟ್ಟಿ ಕಾಣಿಸುತ್ತದೆ.

if insured these crops  ಪ್ರತಿ ಹೆಕ್ಟೇರಿಗೆ ಯಾವ ಬೆಳೆಗೆ ಎಷ್ಟುವಿಮಾ ಹಣ ನಿಗದಿಪಡಿಸಲಾಗಿದೆ?

ಮುಸುಕಿನ ಜೋಳ ನೀರಾವರಿ ಬೆಳೆಗೆ ಗರಿಷ್ಠ 64500 ರೂಪಾಯಿ ವಿಮಾ ಮೊತ್ತ ನಿಗದಿ ಮಾಡಲಾಗಿದೆ. ರೈತರು 1290 ರೂಪಾಯಿ ಪಾವತಿಸಬೇಕು. ಜೋಳ ನೀರಾವರಿ ಬೆಳೆಗೆ ಗರಿಷ್ಠ 45250 ರೂಪಾಯಿ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ರೈತರು 905 ರೂಪಾಯಿ ಪಾವತಿಸಬೇಕು.  ತೊಗರಿ ಬೆಳೆಗೆ ಗರಿಷ್ಠ 48000 ರೂಪಾಯಿ ನಿಗದಿ ಪಡಿಸಲಾಗಿದೆ.ಯ ರೈತರು 960 ರೂಪಾಯಿ ಪಾವತಿಸಬೇಕು. ಹೆಸರು ಹಾಗೂ ಉದ್ದು ಬೆಳೆಗೆ ಗರಿಷ್ಠ 33250 ರೂಪಾಯಿ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ರೈತರು 665 ರೂಪಾಯಿ ಪಾವತಿಸಬೇಕು.

ಇದನ್ನೂ ಓದಿ : ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆ – ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

ಶೇಂಗಾ (ನೆಲಗಡಲೆ) ನೀರಾವರಿ ಬೆಳೆಗೆ ಗರಿಷ್ಠ 65750 ರೂಪಾಯಿ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ರೈತರು 1315 ಪಾವತಿಸಬೇಕು. ಅದೇ ರೀತಿ ಹತ್ತಿ ಬೆಳೆಗೆ ಗರಿಷ್ಠ 73750 ರೂಪಾಯಿ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ರೈತರು 2488 ರೂಪಾಯಿ ಪಾವತಿಸಬೇಕು. ಭತ್ತ ಬೆಳೆಗೆ ಗರಿಷ್ಠ 95250 ರೂಪಾಯಿ ವಿಮಾ ಮೊತ್ತ ನಿಗದಿ ಪಡಿಸಲಾಗಿದೆ. ರೈತರು 1865 ರೂಪಾಯಿ ಪಾವತಿಸಬೇಕು. ಸೂರ್ಯಕಾಂತಿಬೆಳೆಗೆ ಗರಿಷ್ಠ 40750 ರೂಪಾಯಿ ನಿಗದಿ ಪಡಿಸಲಾಗಿದೆ. ಅಧಕ್ಕೆ ರೈತರು 975 ರೂಪಾಯಿ ಪಾವತಿಸಬೇಕು.

ಕಲಬುರಗಿ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?

ಕಲಬುರಗಿ ಜಿಲ್ಲೆಯ ರೈತರು ತೊಗರಿ, ನೆಲಗಡಲೆ (ಶೇಂಗಾ), ಮುಸುಕಿನ ಜೋಳ, ಈರುಳ್ಳಿ, ಉದ್ದು, ಎಳ್ಳು, ಕೆಂಪು ಮೆಣಸಿನ ಕಾಯಿ, ಟೊಮ್ಯಾಟೋ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು, ಸೋಯಾ ಅವರೆ ಬೆಳೆಗಳಿಗೆ ವಿಮೆ ಮಾಡಿಸಬಹುದು.

ಕಲಬುರಗಿ ಜಿಲ್ಲೆಯ ರೈತರಿಗಾಗಿ ತಾಲೂಕುವಾರು ವಿಮಾ ಪ್ರತಿನಿಧಿಗಳ ಮೊಬೈಲ್ ನಂಬರ್

ಬೆಳೆ ವಿಮೆ ಕುರಿತಂತೆ ಹೆಚ್ಚಿನ ಮಾಹಿತಿಗೆ ಯುನಿವರ್ಸಲ್ ಸೋಂಪೋ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಸಹಾಯವಾಣಿ ಸಂಖ್ಯೆ 1800 200 5142 ಗೆ ಸಂಪರ್ಕಿಸಬೇಕು.

ಕಲಬುರಗಿ ಜಿಲ್ಲೆಯವರು 8867508750, 8976889340, ಅಫಜಲ್ಪುರ- 9902356434, ಆಳಂದ – 9702944943, ಚಿಂಚೋಳಿ – 8095384057, ಕಮಲಾಪುರ – 729754689, ಯಡ್ರಾಮಿ 9880222988, ಚಿತ್ತಾಪುರ – 7996369510, ಜೇವರ್ಗಿ – 9845661193, ಸೇಡಂ 7204579007 ಹಾಗೂ ಕಾಳಗಿ 9000481448 ಗೆ ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ ಜಿಲ್ಲೆ ಸೇರಿದಂತೆ ಇನ್ನಿತರ ತಾಲೂಕು ರೈತರು  ತಮ್ಮ ಜಿಲ್ಲೆಯಲ್ಲಿ ಯಾವ ವಿಮಾ ಕಂಪನಿಗೆ ನಿಯೋಜಿಸಲಾಗಿದೆ. ಹಾಗೂ ಆ ವಿಮಾ ಕಂಪನಿಯ ಉಚಿತ ಸಹಾಯವಾಣಿ ಹಾಗೂ ತಾಲೂಕಿನ ವಿಮಾ ಸಿಬ್ಬಂದಿ ನಂಬರ್ ಪಡೆದುಕೊಂಡರೆ ಬೆಳೆ ಹಾನಿ ವರದಿಗಾಗಿ ಕರೆ ಮಾಡಬೇಕಾಗುತ್ತದೆ.

Leave a Comment