ಗೃಹಲಕ್ಷ್ಮೀ ಹಣ ನಿಮ್ಮ ಖಾತೆಗೆ ಜಮೆಯಾಗುತ್ತಿಲ್ಲವೇ? ಇಲ್ಲಿ ಸಂಪರ್ಕಿಸಿ

Written by Ramlinganna

Updated on:

gruhalakshmi amount not received ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿಲ್ಲವೇ? ಯಾರಿಗೆ ಸಂಪರ್ಕಿಸಬೇಕೆಂಬ ಚಿಂತೆಲ್ಲಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ತಮ್ಮ ಖಾತೆಗೆ ಯೋಜನೆಯ ಹಣ ಜಮೆಯಾಗುತ್ತಿಲ್ಲವಾದಲ್ಲಿ ಕೂಡಲೇ ಅಂಗನವಾಡಿ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ಕೊಪ್ಪಳ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಗೃಹಲಕ್ಷ್ಮೀ ಯೋಜನೆಯಡಿ ಹೆಸರು ನೋಂದಣಿಯಾದ ಫಲಾನುಭವಿಗಳಿಗೆ ಈಗಾಗಲೇ ಆಗಸ್ಟ್  ತಿಂಗಳ 2 ಸಾವಿರ ರೂಪಾಯಿ ಸಹಾಯಧನ ಪಾವತಿಸಲಾಗಿದೆ. ಆದರೆ ಕೊಪ್ಪಳ ತಾಲೂಕಿನಲ್ಲಿ 6438 ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಸೀಡಿಂಗ್, ಇಕೆವೈಸಿ ಮತ್ತು ಎನ್ಪಿಸಿಟಿ ಮ್ಯಾಪಿಂಗ್ ಮಡಿಸದ ಫಲಾನುಭವಿಗಳಿಗೆ ಸಹಾಯಧನ ಪಾವತಿ ಆಗಿಲ್ಲ.

ಈ ಸಹಾಯಧನ ಪಡೆಯದಿರುವ ಫಲಾನುಭವಿಗಳು ತಕ್ಷಣಣವೇ ಅರ್ಜಿಯೊಂದಿಗೆ ಸಲ್ಲಿಸಿದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಸೀಡಿಂಗ್, ಇಕೆವೈಸಿ ಮತ್ತು ಎನ್.ಪಿ.ಸಿಟಿ  ಮ್ಯಾಪಿಂಗ್ ಮಾಡಿಸದ ಮಾಹಿತಿಯನ್ನು ತಮ್ಮ ಸಮೀಪದ ಅಂಗನವಾಡಿ ಕೇಂದ್ರದ ಕಾರ್ಯಕರ್ತರಿಗೆ ಮಾಹಿತಿ ಒದಗಿಸಿದ್ದಲ್ಲಿ ಸಹಾಯಧನ ಪಾವತಿಸಲು ಕ್ರಮ ವಹಿಸಲಾಗುವುದು.

gruhalakshmi amount not received ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದರೂ  ಹಣ ಜಮೆಯಾಗುತ್ತಿಲ್ಲ?

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದರೂ ಕೆಲವರಿಗೆಯೋಜನೆ ಹಣ ಜಮೆಯಾಗುತ್ತಿಲ್ಲ. ಏಕೆಂದರೆ ಅರ್ಜಿ ಸಲ್ಲಿಸುವಾಗ ನೀವು ನಮೂದಿಸಿದ ಹೆಸರು ಪತಿಯ ಹೆಸರು ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೋಲಿಕೆಯಾಗುತ್ತಿರಲಿಕ್ಕಿಲ್ಲ. ಹಾಗಾಗಿ ನಿಮಗೆ  ಆಗಸ್ಟ್ ತಿಂಗಳಲ್ಲಿ ಹಣ ಜಮೆಯಾಗಿರಿಲಿಕ್ಕಿಲ್ಲ.

ಎಲ್ಲಾ ದಾಖಲೆಗಳಲ್ಲಿ ಹೆಸರು ಒಂದೇ ಆಗಿದ್ದರೂ ಗೃಹಲಕ್ಷ್ಮೀ ಯೋಜನೆ ಹಣ ಏಕ ಜಮೆಯಾಗುತ್ತಿಲ್ಲ?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರು ತಮ್ಮ ಎಲ್ಲಾ ದಾಖಲೆಗಳಲ್ಲಿ ಹೆಸರು ಒಂದೇ ರೀತಿಯಾಗಿದ್ದರೂ ಸಹ ಕೆಲವರಿಗೆ ಹಣ ಜಮೆಯಾಗಿಲ್ಲ. ಏಕೆಂದರೆ ಅವರು ಯೋಜನೆಗೆ ಅರ್ಹತೆ ಪಡೆದಿರಲಿಕ್ಕಿಲ್ಲ.

ಇದನ್ನೂ ಓದಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ದಾಖಲಾದ್ರೆ ಮಾತ್ರ ಬರ ಪರಿಹಾರ ಜಮೆ ನಿಮ್ಮ ಫ್ರೂಟ್ಸ್ ಐಡಿ ಇಲ್ಲೇ ಚೆಕ್ ಮಾಡಿ

ಅಂದರೆ ಆ ಮಹಿಳೆಯ ಅಥವಾ ಅವರ ಪತಿ ಸರ್ಕಾರಿ ನೌಕರರಾಗಿರಬಹುದು. ತೆರಿಗೆ ಪಾವತಿಸುವವರಾಗಿರಬಹುದು. ಅಥವಾ ಟಿಡಿಎಸ್ ಪಡೆಯುತ್ತಿರುವವರಾಗಿದ್ದರೆ ಅವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುವುದಿಲ್ಲ.

ರೇಶನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರೆಂದು ನಮೂದಿಸಲಾಗಿದೆಯೇ? ಇಲ್ಲೇ ಚೆಕ್ ಮಾಡಿ

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರು ತಾವು ರೇಶನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರೆಂದು ನಮೂದಿಸಲಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೇಶನ್ ಕಾರ್ಡ್ ಚೆಕ್ ಮಾಡುವ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಿಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು.  ಆಗ ಪಡಿತರ ಚೀಟಿ ಹೊಂದಿರುವವರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಆರ್. ಸಿ ನಂಬರ್ ನಂತರ ಮಹಿಳೆಯ ಹೆಸರು ಇರಬೇಕು. ಇದರೊಂದಿಗೆ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರಬೇಕು. ಅವರು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆದಿರುತ್ತಾರೆ.

Leave a Comment