Election voter id Aadhar link ಮೊಬೈಲ್ ನಲ್ಲಿ ಹೀಗೆ ಮಾಡಿ

Written by By: janajagran

Published on:

Aadhar Voter id link ಲೋಕಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಹಾಗಾಗಿ ಸಾರ್ಜನಿಕರು ತಮ್ಮ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಲಿಂಕನ್ನು ಮೊಬೈಲ್ ನಲ್ಲೇ ಮಾಡಬಹುದು. ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಸಾರ್ವಜನಿಕರು ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು. ಹೌದು, ಪ್ಯಾನ್ ಆಧಾರ್ ಕಾರ್ಡ್ ಲಿಂಕ್, ಬ್ಯಾಂಕ್ ಆಧಾರ್ ಕಾರ್ಡ್ ಲಿಂಕ್, ರೇಷನ್ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಆಯಿತು.

ಈಗ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆಧಾರ್ ವೋಟರ್ ಕಾರ್ಡ್ ಲಿಂಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಲಿಂಕ್ ಮಾಡಬಹುದು.  ಲಿಂಕ್ ಮಾಡುವುದು ಹೇಗೆ ಲಿಂಕ್ ಆಗಿರುವುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರವು ಆಧಾರ್ ಕಾರ್ಡಿಗೆ ಮತದಾರರ ಗುರುತು ಚೀಟಿ ಜೋಡಿಸುವ ಮಹತ್ವದ ಚುನಾವಣೆ ಮಸೂದೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಲಿಂಕ್ ಮಾಡುವುದು ಕಡ್ಡಾಯವಲ್ಲವೆಂದು ಸರ್ಕಾರ ಸ್ಪಷ್ಟನೆ ನೀಡಿದೆ.

Aadhar Voter id link ಮಾಡುವುದು ಹೇಗೆ?

ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು  ಈ

https://voterportal.eci.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ Create an account ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆಯಲ್ಪಡುತ್ತದೆ. Select if you are overseas Elector ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಈ ಮೇಲ್ ಐಡಿ ಅಥವಾ ಮೊಬೈಲ್ ನಂಬರ್ ನಮೂದಿಸಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲಿಗೆ ಬರುವ ಓಟಿಪಿ ನಮೂದಿಸಿ ವೆರಿಫೈ ಮೇಲೆ ಕ್ಲಿಕ್ ಮಾಡಬೇಕು.  ನಂತರ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು.

ಕೆಳಗಡೆ ಕೇಳಲಾಗಿರುವ ಮಾಹಿತಿ ನಮೂದಿಸಿ Terms service ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ನಂತರ ವೋಟರ್ ಪೋರ್ಟಲ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ರಾಜ್ಯ ಆಯ್ಕೆ ಮಾಡಿಕೊಂಡು  ಸರ್ಚ್ ಇನ್ ಎಲೆಕ್ಟ್ರೋಲ್ ರೋಲ್ ಮೇಲೆ ಕ್ಲಿಕ್ ಮಾಡಬೇಕು.

ವೋಟರ್ ಐಡಿ ನಮೂದಿಸಿ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಬೇಕು. ಆಗ ಚುನಾವಣಾ ಗುರುತಿನ ಚೀಟಿಯಲ್ಲಿರುವ ಮಾಹಿತಿ ಕಾಣುತತ್ದೆ. ನಿಮ್ಮ ಹೆಸರು, ತಂದೆಯ ಸರು, ವಯಸ್ಸು, ಜಿಲ್ಲಾ, ಸೇರಿದಂತೆ ಎಲ್ಲಾ ಮಾಹಿತಿ ಇರುತ್ತದೆ.

ಇದನ್ನೂ ಓದಿನಿಮ್ಮ Survey Numberನಲ್ಲಿ ಯಾವ ರೈತರ ಹೆಸರಿದೆ? Mobileನಲ್ಲೇ ಚೆಕ್ ಮಾಡಿ

ಅಡ್ವಾನ್ಸ್ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಹೆಸರು, ತಂದೆಯ ಹೆಸರು, ಜಿಲ್ಲೆ, ತಾಲೂಕು, ಜನ್ಮದಿನಾಂಕ ನಮೂದಿಸಬೇಕು. ನಂತರ ಫೀಡ್ ಆಧಾರ್ ನಂಬರ್ ಕ್ಲಿಕ್ ಮಾಡಬೇಕು.

ಸ್ಕ್ರೀನ್ ಮೇಲೆ ಬರುವ ಪಾಪ್ ಅಪ್ ಪೇಜ್ ನಲ್ಲಿ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ನೋಂದಾಯಿತ ಮೊಬೈಲ್ ನಂಬರ್ , ಈ ಮೇಲೆ ವಿಳಾಸ ಭರ್ತಿ ಮಾಡಿ ಸಬ್ಮಿಟ್ ಬಟನ್ ಒತ್ತಬೇಕು.  ನಂತರ ನಿಮ್ಮ ಅರ್ಜಿ ಯಶಸ್ವಿಯಾಗಿ ನೋಂದಾವಣೆಗೊಂಡಿದೆ ಎಂದು ಸಂದೇಶ ಬರುತ್ತದೆ.

ಮೇಲೆ ತಿಳಿಸಿದ ಮಾಹಿತಿಗಳ ಪ್ರಕಾರ ಸಾರ್ವಜನಿಕರು ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಕಾರ್ಡ್ ನ್ನು ಮೊಬೈಲ್ ನಲ್ಲೇ ಲಿಂಕ್ ಮಾಡಬಹುದು. ಇದಕ್ಕೆ ಯಾರ ಸಹಾಯವೂ ಬೇಕಿಲ್ಲ.

Leave a Comment