kisan credit card ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಹೌದು, ಪಂಚಾಯತ್ ರಾಜ್ ದಿನದ ಅಂಗವಾಗಿ ಏಪ್ರೀಲ್ 24 ರಂದು ಕಿಸಾನ್ ಭಾಗೇದಾರಿ ಪ್ರಾಥಮಿಕತಾ ಹಮಾರಿ ಎಂಬ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಚಾಲನೆ ನೀಡುವರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಈವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ ಪಡೆಯದವರು ಮೇ 1 ರೊಳಗಾಗಿ ಅರ್ಜಿಸಲ್ಲಿಸಿ ರೈತಸ್ನೇಹಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಪ್ರತಿಯೊಬ್ಬ ರೈತರಿಗೂ ಕಿಸಾನ್ ಕ್ರೇಡಿಟ್ ಕಾರ್ಡ್ ಒದಗಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೇಡಿಟ್ ಕಾರ್ಡ್ ಒದಗಿಸಲು ಏಪ್ರೀಲ್ 24 ರಿಂದ ಮೇ 1 ರವರೆಗೆ ಒಂದು ವಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆಸಾಲ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಕುಕ್ಕಟೋದ್ಯಮಕ್ಕೆ ಸಾಲ ಸೌಲಭ್ಯ ಪಡೆಯಬಹುದು. ಅರ್ಹ ರೈತರು ಗ್ರಾಮ ಪಂಚಾಯತಗಳಲ್ಲಿ ಅರ್ಜಿ ಪಡೆದು ಮೇ 1 ರೊಳಗಾಗಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು.
ರೈತರಿಗೆ ಕಿಸಾನ್ ಕ್ರೇಡಿಟ್ ಕಾರ್ಡ್ ವಿತರಿಸಲು ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಒಂದು ವಾರ ಅಭಿಯಾನ ನಡೆಯಲಿದೆ. ಇದಕ್ಕಾಗಿ ಏಪ್ರೀಲ್ 24 ರಂದು ವಿಶೇಷ ಗ್ರಾಮ ಸಭೆ ನಡೆಯಲಿದೆ. ಪ್ರತಿ ವರ್ಷ ಏಪ್ರೀಲ್ 24 ರಂದು ರಾಷ್ಟ್ರವ್ಯಾಪಿ ಪಂಚಾಯತ್ ರಾಜ್ ದಿವಸ್ ಆಚರಿಸಲಾಗುತ್ತದೆ. ಈ ದಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಗ್ರಾಮ ಸಭೆ ನಡೆಸಲಾಗುತ್ತದೆ. ಈ ಬಾರಿ ಪಂಚಾಯತ್ ರಾಜ್ ದಿವಸ್ ಅಂಗವಾಗಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ವಿಶೇಷ ಅಭಿಯಾನ ನಡೆಸಲಾಗುತ್ತಿದೆ.
ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿ ಕಿಸಾನ್ ಕಾರ್ಡ್ ಪಡೆಯದೇ ಇರುವ ಎಲ್ಲಾ ಅರ್ಹ ರೈತರಿಗೆ ಕ್ರೇಡಿಟ್ ಕಾರ್ಡ್ ಲಭ್ಯವಾಗುವಂತೆ ಜಿಲ್ಲಾ ಪಂಚಾಯತಿ ಸಿಇಓ, ಬ್ಯಾಂಕ್ ಅಧಿಕಾರಿಗಳು, ನಬಾರ್ಡ್ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮತ್ತು ಅಭಿಯಾನ ಯಶಸ್ವಿಗೊಳಿಸಲು ನಿರ್ಧಷ್ಟ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಂತೆ ಅಭಿಯಾನ ಹಮ್ಮಿಕೊಳ್ಳಲು ಇಲಾಖೆ ಸೂಚನೆ ನೀಡಿದೆ.
kisan credit card ಕಿಸಾನ್ ಕ್ರೇಡಿಟ್ ಕಾರ್ಡ್ ದಿಂದ 3 ಲಕ್ಷ ಸಾಲ
ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆದ ರೈತರಿಗೆ 3 ಲಕ್ಷ ರೂಪಾಯಿಯವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ. ವಾರ್ಷಿಕ ಶೇ. 4 ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ರೈತರು ತಮ್ಮ ಹೊಲಗಳಿಗೆ ಬಿತ್ತನೆ ಮಾಡಲು ಬೀಜ, ರಸಗೊಬ್ಬರ ಖರೀದಿ, ಕೃಷಿ ಚಟುವಟಿಕೆ ಸೇರಿದಂತೆ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆಗೆ ಶೇ. 4 ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
ಯಾವ ರೈತರು ಕೆಸಿಸಿ ಪಡೆಯಲು ಅರ್ಹರು?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಯ ಲಾಭ ಪಡೆಯುತ್ತಿರುವ ಎಲ್ಲಾ ರೈತರು ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. 18 ವರ್ಷದಿಂದ 75 ವರ್ಷದೊಳಗಿನ ರೈತರು ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಈ ರೈತರ ಹೆಸರಿನ ಮೇಲೆ ಜಮೀನು ಇರಬೇಕು. ಬೇರೆಯವರ ಜಮೀನಿನಲ್ಲಿ ರೈತರು ಸಾಗುವಳಿ ಮಾಡುತ್ತಿದ್ದರೆ ಹೊಲಗಳ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದ ಪತ್ರ ಪಡೆದಿರಬೇಕು. ಅರ್ಜಿದಾರರಿಗೆ ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಫೋಟೋ, ಬ್ಯಾಂಕ್ ಪಾಸ್ ಬುಕ್ ಇರಬೇಕು. ಅರ್ಜಿದಾರರು ಬೇರೆ ಯಾವುದೇ ಬ್ಯಾಂಕಿನಲ್ಲಿಸಾಲಗಾರರಾಗಿಲ್ಲವೆಂದು ಅಫಿಡಿವೇಟ್ ಪಡೆದಿರಬೇಕು.ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ15 ದಿನದಲ್ಲಿ ಕಿಸಾನ್ ಕ್ರೇಡಿಟ್ ಕಾರ್ಡ್ ನೀಡಲಾಗುವುದು.
ಕಿಸಾನ್ ಕ್ರೇಡಿಟ್ ಕಾರ್ಡ್ ಅರ್ಜಿ ಬೇಕಾದರೆ ಈ https://www.pmkisan.gov.in/Documents/Kcc.pdf
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ನಲ್ಲಿಅಪ್ಲೋಡ್ ಮಾಡಲಾದ ಅರ್ಜಿ ಓಪನ್ ಆಗುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಂಡು ಆಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಕೊಡಬಹುದು. ಅಧವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿನಲ್ಲಿ ಅರ್ಜಿ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಗ್ರಾಮ ಪಂಚಾಯತಿ, ರಾಷ್ಟ್ರಿಕೃತ, ಗ್ರಾಮೀಣ, ಪ್ರಾಥಮಿಕ ಕೃಷಿ ಪತ್ತಿನ ಅಥವಾ ಖಾಸಗಿ ಬ್ಯಾಂಕ್ ಗಳನ್ನು ಸಂಪರ್ಕಿಸಬಹುದು.