PM kisan Mandhan Yojane ಯಡಿ ರೈತರಿಗೆ ಸಿಗಲಿದೆ 3 ಸಾವಿರ Pension

Written by By: janajagran

Updated on:

PM kisan Mandhan yojane : ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯೂ ಒಂದಾಗಿದೆ.  ರೈತರ ಬದುಕು ಸುರಕ್ಷಿತವಾಗಿರಲೆಂಬ ಉದ್ದೇಶದಿಂದ ಆರಂಭಿಸಿಲಾದ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ ರೈತರೂ ಸಹ ಸರ್ಕಾರಿ ನೌಕರರಂತೆ ಪಿಂಚಣಿ ಪಡೆಯಬಹುದು.

ಕಷ್ಟಪಟ್ಟು ಕೆಲಸ ಮಾಡಿದರೂ ರೈತರಿಗೆ ಅಗತ್ಯದಷ್ಟು ಸಂಪಾದನೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಭದ್ರತೆಯ ಯೋಜನೆ ಅತ್ಯಗತ್ಯ. ರೈತರ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಿಂದೆ. ರೈತರು ತನ್ನ 60 ವರ್ಷದ ನಂತರ ಪ್ರತಿ ತಿಂಗಳಿಗೆ 3 ಸಾವಿರ ರೂಪಾಯಿ ಪ್ರತಿವರ್ಷ 36 ಸಾವಿರ ರೂಪಾಯಿ ಪಿಂಚಣಿ ಪಡೆಯುವದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

PM kisan Mandhan yojane ಪಿಎಂ ಕಿಸಾನ್ ಮಾನ್ ಧನ್ ಯೋಜನೆಗೆ ಅರ್ಹತೆ?

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ ಪಿಂಚಣಿ ಪಡೆಯಲು ಎಲ್ಲಾ ರೈತರು ಅರ್ಹರಾಗಿರುತ್ತಾರೆ. ಎರಡು ಎಕರೆ ಜಮೀನು ಹೊಂದಿರುವ ರೈತರೆಲ್ಲರೂ ಈ ಯೋಜನೆಯ ಲಾಭ ಪಡೆಯಬಹುದು. 18 ರಿಂದ 40 ವಯೋಮಾನದ ರೈತರು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ 55 ರೂಪಾಯಿಯಿಂದ 200 ರೂಪಾಯಿ ಪ್ರಿಮಿಯಂ ಕಟ್ಟಬೇಕು. ವಯೋಮಾನಕ್ಕೆ ಅನುಗುಣವಾಗಿ ಪ್ರಿಮಿಯಂ ಮೊತ್ತ ಕಟ್ಟಬೇಕಾಗುತ್ತದೆ.  ರೈತರು ಕಟ್ಟಿದ ಹಣದಷ್ಟೇ ಹಣವನ್ನು ಸರ್ಕಾರವೂ ಕೂಡ ಕಟ್ಟುತ್ತದೆ. ರೈತ 60 ವರ್ಷದ ನಂತರ ಪಿಂಚಣಿ ಪಡೆಯುತ್ತಾರೆ. ಒಂದು ವೇಳೆ ರೈತ ಮೃತಪಟ್ಟರೆ ಶೇ. 50 ರಷ್ಟು ಪಿಂಚಣಿಯನ್ನು ರೈತನ ಪತ್ನಿ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಮಾತ್ರವಲ್ಲದೆ ಆತನ ಪತ್ನಿಯೂ ಸಹ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಂಡು ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು.

ಇದನ್ನೂ ಓದಿ :ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್  ಮಾಡಿ

ನಿರಂತರವಾಗಿ 5 ವರ್ಷ ಹಣ ಪಾವತಿಸಿದ ರೈತರು, ಬೇಡವೆನ್ನಿಸಿದರೆ ಯೋಜನೆಯಿಂದ ಹೊರಬರಬಹುದು. ಉಳಿತಾಯ ಯೋಜನೆಗೆ ಸಮನಾದ ಬಡ್ಡಿಯನ್ನು ಸೇರಿಸಿ ಒಟ್ಟು ಹಣವನ್ನು ವಾಪಸ್ಸು ನೀಡಲಾಗುವುದು. ಈ ಯೋಜನೆಗೆ ಸೇರಲಿಚ್ಚಿಸುವ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿ.ಎಸ್.ಸಿ)ಅರ್ಜಿ ಸಲ್ಲಿಸಬಹುದು.

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ ವಯಸ್ಸಿಗನುಗುಣವಾಗು ರೈತರು ಪಾವತಿಸುವ ಹಣದ ಪಟ್ಟಿ ಇಲ್ಲಿದೆ.

PM kisan Mandhan yojane ಪಿಎಂ ಕಿಸಾನ್ ಮಾನ್ ಧನ್ ಯೋಜನೆ ರೈತರ ವಂತಿಕೆ

ರೈತರ ಪ್ರವೇಶ ವಯಸ್ಸು ವಯೋನಿವೃತ್ತಿ ಮಾಸಿಕ ವಂತಿಕೆ ಕೇಂದ್ರ ಸರ್ಕಾರದ ವಂತಿಕೆ ಒಟ್ಟು ಮಾಸಿಕ ವಂತಿಕೆ
18 60 55 55 110
19 60 58 58 116
20 60 61 61 122
21 60 64 64 128
22 60 68 68 136
23 60 72 72 144
24 60 76 76 152
25 60 80 80 160
26 60 85 85 170
27 60 90 90 180
28 60 95 95 190
29 60 100 100 200
30 60 105 105 210
31 60 110 110 220
32 60 120 120 240
33 60 130 130 260
34 60 140 140 280
35 60 150 150 300
36 60 160 160 320
37 60 170 170 340
38 60 180 180 360
39 60 190 190 380
40 60 200 200 400

 

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯು ರೈತ ಸಮುದಾಯಕ್ಕೆ ಉಪಯುಕ್ತವಾಗಿದ್ದರಿಂದ ಈ ಯೋಜನೆ ಲಾಭ ಪಡೆಯಬಹುದು.  ರೈತರು ತಮ್ಮ ಹತ್ತಿರದ ಸಿಎಸ್.ಸಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಬಹುದು.

Leave a Comment