How to double money every ten years ಕಿಸಾನ್ ವಿಕಾಸ ಪತ್ರ ಯೋಜನೆಯಡಿ ಒಮ್ಮೆ ಹಣ ಹೂಡಿಕೆ ಮಾಡಿದರೆ 10 ವರ್ಷದಲ್ಲಿ ಡಬಲ್ ಆಗಲಿದೆ. ಹೌದು ಅಂಚೆ ಇಲಾಖೆಯ ಈ ಯೋಜನೆಯಡಿ ಹಣ ಹೂಡಿಕೆ ಮಾಡಿ 10 ವರ್ಷ 4 ತಿಂಗಳಲ್ಲಿ ಡಬಲ್ ಹಣ ಪಡೆಯಬಹುದು. ರೈತರು ಈ .ಯೋಜನೆಯಡಿ ತಮ್ಮ ಮಕ್ಕಳ ಹೆಸರಿನ ಮೇಲೆ ಹಣ ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಬಹುದು. ಉದಾಹರಣೆಗೆ ಒಮ್ಮೆ 1000 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಸಾಕು, 10 ವರ್ಷದ ನಂತರ 10,000 ರೂಪಾಯಿ ಹಣ ಪಡೆಯಬಹುದು. ಇದಕ್ಕಾಗಿ ಇಂತಿಷ್ಟೇ ಹಣ ಹೂಡಿಕೆ ಮಾಡಬೇಕೆಂಬ ನಿಯಮವಿಲ್ಲ. ಕನಿಷ್ಟ 1 ಸಾವಿರ ರೂಪಾಯಿ ಹಣ ಹೂಡಿಕೆ ಮಾಡಬಹುದು.
ಕಿಸಾನ್ ವಿಕಾಸ ಪತ್ರ ಯೋಜನೆಯಡಿ ಎಲ್ಲಿ ಹಣ ಹೂಡಿಕೆ ಮಾಡಬೇಕು?
ಕಿಸಾನ್ ವಿಕಾಸ್ ಪತ್ರ ಯೋಜನೆ ಭಾರತೀಯ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಹಣ ಹೂಡಿಕೆ ಮಾಡಬಹುದು. ಬಂಡವಾಳ ಹೂಡಿಕೆ ಮಾಡುವವರು 1 ಸಾವಿರ, 2 ಸಾವಿರ, 3, ಸಾವಿರ, ನಾಲ್ಕು ಸಾವಿರ ಐದು ಸಾವಿರ ಹೀಗೆ ಹಣ ಹೂಡಿಕೆ ಮಾಡಬಹುದು.
How to double money every ten years ಯಾರು ಕಿಸಾನ್ ವಿಕಾಸ ಪತ್ರದಲ್ಲಿ ಹಣ ಹೂಡಿಕೆ ಮಾಡಬಹುದು?
ದೇಶದ ನಾಗರಿಕರೆಲ್ಲರೂ ಈ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು. ಇಬ್ಬರು ವಯಸ್ಕರು ಜಂಟಿಯಾಗಿಯೂ ಹಣ ಹೂಡಿಕೆ ಮಾಡಬಹುದು. ಕಿಸಾನ್ ವಿಕಾಸ್ ಯೋಜನೆಯಡಿ ಹಣ ಹೂಡಿಕೆ ಮಾಡಿದರೆ ನಂತರ ಯಾವುದೇ ಹತ್ತಿರದ ಅಂಚೆ ಕಚೇರಿಗೆ ವರ್ಗಾಯಿಸಬಹುದು. ಈ ಯೋಜನೆಯಡಿ ಹಣ ಹೂಡಿಕೆ ಮಾಡಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಿಸಾನ್ ವಿಕಾಸ ಪತ್ರ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು.
ಇದನ್ನೂ ಓದಿ ಈ ರೈತರಿಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ
ಹೂಡಿಕೆದಾರರಿಗೆ ಸಿಗಲಿದೆ ಶೇ. 6.9 ಬಡ್ಡಿ
ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ವಾರ್ಷಿಕವಾಗಿ ಶೇ. 6.9 ರಷ್ಟು ಬಡ್ಡಿ ಸಿಗುತ್ತದೆ. ಕನಿಷ್ಟ 1 ಸಾವಿರ ರೂಪಾಯಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಹಣ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.
ಅವಧಿಗೆ ಮುನ್ನ ಹಿಂತೆಗೆಯಬಹುದು
ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಹಣ ಹೂಡಿಕೆ ಮಾಡಿದ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಅವಧಿಗೆ ಮುನ್ನ ಹೂಡಿಕೆ ಹಿಂತೆಗೆದುಕೊಳ್ಳಬಹುದು. ಹೂಡಿಕೆ ಮಾಡಿದ ವ್ಯಕ್ತಿ ಎರಡುವರೆ ವರ್ಷಗಳ ನಂತರ ಯಾವಾಗ ಬೇಕಾದರೂ ಆಗ ಹಿಂತೆಗೆದುಕೊಳ್ಳಬಹುದು.
ಪಾಲಕರು ತಮ್ಮ ಮಕ್ಕಳ ಹೆಸರಿನ ಮೇಲೂ ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು. ರೈತರು ತಮಗೆ ಅನುಕೂಲವಾದಾಗ ಹಣ ಹೂಡಿಕೆ ಮಾಡಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಒಮ್ಮೆ ಹೂಡಿಕೆ ಮಾಡಿದರೆ ಸಾಕು. ಪ್ರತಿವರ್ಷ ಹಣ ಕಟ್ಟುವ ಅವಶ್ಯಕತೆಯಿಲ್ಲ.
ಅಂಚೆ ಇಲಾಖೆಯ ಮೂಲಕ ಕಿಸಾನ್ ವಿಕಾಸ ಪತ್ರದೊಂದಿಗೆ ಇನ್ನೂ ಹಲವಾರು ಸೇವಿಂಗ್ಸ್ ಸ್ಕೀಮ್ ಗಳಿವೆ. ಇತರ ಉಳಿತಾಯ ಯೋಜನೆಯಗಳನ್ನು ನೋಡಲು ಈ https://www.indiapost.gov.in/Financial/pages/content/post-office-saving-schemes.aspx
ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು.