How to check online Loan waive ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 1 ಲಕ್ಷ ರೂಪಾಯಿಯವರೆಗೆ ಸಾಲಮನ್ನಾ ಘೋಷಣೆ ಮಾಡಿದ್ದರು. ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ ಕೆಲವು ರೈತರ ಸಾಲಮನ್ನಾ ಆಗಿದೆ. ಆದರೆ ಇನ್ನೂ ಕೆಲವು ರೈತರ ಸಾಲಮನ್ನಾ ಆಗಿಲ್ಲ. ಅದಕ್ಕೆ ರೇಷನ್ ಕಾರ್ಡ್, ಅಥವಾ ಜಮೀನಿನ ಪಹಣಿ ಅಥವಾ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದರಿಂದ ರೈತರ ಹೆಸರು ಹಸಿರು ಪಟ್ಟಿಯಲ್ಲಿ ಇಲ್ಲದ್ದಕ್ಕೆ ಮನ್ನಾ ಆಗಿರುವುದಿಲ್ಲ.
ರೈತರ ಸಾಲದ ಹಣವನ್ನು ಸರ್ಕಾರವು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಕೆಲವು ರೈತರ ಸಾಲಮನ್ನಾ ಒಂದನೇ ಕಂತಿನಲ್ಲಿ ಮನ್ನಾ ಆಗಿದ್ದರೆ ಇನ್ನೂ ಕೆಲವು ರೈತರು ಸಾಲ ಎರಡನೇ ಕಂತಿನಲ್ಲಿ ಮನ್ನಾ ಆಗಿದೆ. ಇನ್ನೂ ಕೆಲವು ರೈತರ ಸಾಲದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದರೂ ಸಹ ಒಂದು ಕಂತಿನಲ್ಲಿ ಬಂದರೆ ಎರಡನೇ ಕಂತಿನಲ್ಲಿ ಕೆಲವು ಕಾರಣಗಳಿಂದ ತಿರಸ್ಕೃತಗೊಂಡಿದೆ. ಇದನ್ನು ರೈತರು ತಿಳಿದುಕೊಳ್ಳಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.
How to check online Loan waive ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಿ
ಹೌದು, ಸರ್ಕಾರದ ಮಾಹಿತಿ ಕಣಜ ತಂತ್ರಾಂಶ ಇಂತಹದೊಂದು ಸೌಲಭ್ಯವನ್ನು ರೈತರಿಗೆ ನೀಡಿದೆ. ರೈತರು ತಮ್ಮ ಮೊಬೈಲ್ ನಲ್ಲಿ ಸಾಲಮನ್ನಾ ಆಗಿದೆಯೋ…. ಆಗದಿದ್ದರೆ ಕಾರಣವೇನು ಎಂಬುದನ್ನು ನೋಡಲು ಸರ್ಕಾರದ ಮಾಹಿತಿ ಕಣಜ ತಂತ್ರಾಂಶದಲ್ಲಿ ನೋಡಬಹುದು.
ವಾಣಿಜ್ಯ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದಿದ್ದರೆ ಈ
https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ಮಾದರಿ ಕಾಲಂನಲ್ಲಿ ರೈತ ಆಯ್ಕೆ ಮಾಡಿಕೊಳ್ಳಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಗ್ರಾಮದ ರೈತರ ಫಲಾನುಭವಿಗಳ ಪಟ್ಟಿ ಓಪನ್ ಆಗುತ್ತದೆ.
ಅಲ್ಲಿ ನಿಮ್ಮ ಹೆಸರು ಅಲ್ಪಾಬೇಟಿಕ್ ಆರ್ಡರ್ ವೈಸ್ ಇರುತ್ತದೆ. ಅಂದರೆ A to Z ಪ್ರಕಾರ ಹೆಸರುಗಳಿರುತ್ತವೆ. ಗ್ರಾಮ, ರೈತನ ಹೆಸರು, ಬ್ಯಾಂಕು, ಶಾಖೆ, ಸಾಲದ ಖಾತೆ, ಸಾಲದ ಪ್ರಕಾರ, ಎಷ್ಟು ಸಾಲ ಪಡೆದಿದ್ದೀರಿ, ನಿಮ್ಮ ಹೆಸರು ಹಸಿರುಪಟ್ಟಿಯಲ್ಲಿದೆಯೇ… ಇಲ್ಲದಿದ್ದರೆ ಕಾರಣ, ಸಾಲಮನ್ನಾದ ಹಣ ಎಷ್ಟು ಬಿಡುಗಡೆಯಾಗಿದೆ…. ಅಥವಾ ಬಿಡುಗಡೆಯಾಗಿಲ್ಲವೋ… ಸಾಲಮನ್ನಾ ವಿತರಣೆ ಪೂರ್ಣಗೊಂಡಿದೆಯೇ… ನಿಮ್ ಪಡಿತರ ಚೀಟಿ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೋಡಬಹುದು.
ಒಂದು ವೇಳೆ ನೀವು ಸಹಕಾರಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಈ
https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮಾದರಿ ಕೆಳಗಡೆ ರೈತ ಆಯ್ಕೆ ಮಾಡಿಕೊಂಡು ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಗ್ರಾಮದ ರೈತರ ಫಲಾನುಭವಿಗಳ ಪಟ್ಟಿ ಓಪನ್ ಆಗುತ್ತದೆ.
ಇದನ್ನೂ ಓದಿ ಮೊಬೈಲ್ ನಲ್ಲೇ ಜಮೀನಿನ ಸ್ಕೆಚ್ ನಕ್ಷೆ ಹೀಗೆ ಪಡೆಯಿರಿ
ಅಲ್ಲಿ ನಿಮ್ಮ ಹೆಸರು ಅಲ್ಪಾಬೇಟಿಕ್ ಆರ್ಡರ್ ವೈಸ್ ಇರುತ್ತದೆ. ಅಂದರೆ A to Z ಪ್ರಕಾರ ಹೆಸರುಗಳಿರುತ್ತವೆ. ಗ್ರಾಮ, ರೈತನ ಹೆಸರು, ಬ್ಯಾಂಕು, ಶಾಖೆ, ಸಾಲದ ಖಾತೆ, ಸಾಲದ ಪ್ರಕಾರ, ಎಷ್ಟು ಸಾಲ ಪಡೆದಿದ್ದೀರಿ, ನಿಮ್ಮ ಹೆಸರು ಹಸಿರುಪಟ್ಟಿಯಲ್ಲಿದೆಯೇ… ಇಲ್ಲದಿದ್ದರೆ ಕಾರಣ, ಸಾಲಮನ್ನಾದ ಹಣ ಎಷ್ಟು ಬಿಡುಗಡೆಯಾಗಿದೆ…. ಅಥವಾ ಬಿಡುಗಡೆಯಾಗಿಲ್ಲವೋ… ಸಾಲಮನ್ನಾ ವಿತರಣೆ ಪೂರ್ಣಗೊಂಡಿದೆಯೇ… ನಿಮ್ ಪಡಿತರ ಚೀಟಿ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೋಡಬಹುದು.