How to check Kharab land : ಖರಾಬು ಜಮೀನು ಎಂದರೇನು ಅ ಖರಾಬು ಬ ಖರಾಬು ಜಮೀನು ಎಂದರೇನು ನಿಮ್ಮ ಪಹಣಿಯಲ್ಲಿ ಬ ಖರಾಬು ಜಮೀನಿದೆಯೇ ಇಲ್ಲೇ ಚೆಕ್ ಮಾಡಿ.
ಖರಾಬು ಜಮೀನು ಎಂದರೆ ಕರ್ನಾಟಕ ಭೂ ಕಂದಾಯ ನಿಯಮ (21(2) ಅಡಿಯಲ್ಲಿ ಸಾಗುವಳಿಗೆ ಯೋಗ್ಯವಲ್ಲದ ಪಹಣಿಯಲ್ಲಿ ನಮೂದಿಸಲಾದ ಕೃಷಿಯೇತನ ಜಮೀನಿನನ್ನು ಖರಾಬು ಜಮೀನು ಎನ್ನುತ್ತಾರೆ. ಇದು ಪ್ರಮುಖವಾಗಿ ಎರಡು ವಿಧ. ಅ ಖರಾಬು (ಖಾಸಗಿ ಮಾಲಿಕತ್ವದಲ್ಲಿದ್ದು, ಕೃಷಿಗೆ ಆಯೋಗ್ಯವಾದದ್ದು) ಮತ್ತು ಖ ಖರಾಬು (ಸರ್ಕಾರದ ಸ್ವಾಮ್ಯದ ಜಮೀನನ್ನು ಆಗಿರುತ್ತದ.
How to check Kharab land ಅ ಖರಾಬು ಜಮೀನು ಎಂದರೇನು?
ಜಮೀನಿನಲ್ಲಿರುವ ಉಳುಮೆ ಮಾಡಲಿಕ್ಕೆ ಬರದ ಜಮೀನಿನ್ನು ಅ ಖರಾಜು ಜಮೀನು ಎನ್ನುವರು. ಈ ಜಮೀನಿನ ವಿಸ್ತೀರ್ಣ ಮತ್ತು ನಕಾಶೆ ಇರುತ್ತದೆ. ಆದರೆ ತೆರಿಗೆ ಇರುವುದಿಲ್ಲ.ಇದು ಖಾಸಗಿ ಜಮೀನಿನ ಒಡೆತನದಲ್ಲೇ ಇರುತ್ತದೆ. ಬಂಡೆಗಳು, ಹಳ್ಳಗಳು, ಅಥವಾ ದಾರಿಗಳಂತಹ ಕಾರಣಗಳಿಂದ ಕೃಷಿ ಮಾಡಲು ಸಾಧ್ಯವಾಗದ ಜಾಗ ಇದನ್ನು ಮಾಲಿಕರು ಸಾಗುವಳಿಗೆ ಯೋಗ್ಯವನ್ನಾಗಿ ಮಾಡಬಹುದು.ಒಂದು ವೇಳೆ ನೀವು ಅ ಖರಾಬು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರೆ ಅದಕ್ಕೆ ಬೆಳೆ ವಿಮೆ ಹಣ ಕಟ್ಟಬೇಕಾಗಿಲ್ಲ. ಅದಕ್ಕೆ ಬೆಳೆ ವಿಮೆ ಹಣವೂ ಜಮೆಯಾಗುವುದಿಲ್ಲ. ಬೆಳೆ ಸಮೀಕ್ಷೆ ಮಾಡುವುದಕ್ಕೂ ಆಗುವುದಿಲ್ಲ.
ಬ ಖರಾಬು ಜಮೀನು ಎಂದರೇನು?
ಇದು ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದ್ದು, ಇದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಿಟ್ಟಿರಲಾಗಿರುತ್ತದೆ. ಇದನ್ನು ಬಿ ಖರಾಬು ಜಮೀನು ಎನ್ನುವರು. ಕೆರೆ, ಕುಂಟೆ, ರಸ್ತೆ, ಬಂಡಿದಾರಿ, ಕಾಲುದಾರಿ, ಹಳ್ಳ, ಸ್ಮಶಾನ ಅಥವಾ ಸಾರ್ವಜನಿಕ ರಸ್ತೆಗಳಂತಹ ಸಾರ್ವಜನಿಕ ಉದ್ದೇಶದ ಜಮೀನು, ಇವುಗಳನ್ನು ಜಾರಿಗೂ ಮುಂಜೂರು ಮಾಡಲು ಸಾಧ್ಯವಿಲ್ಲ.
ಪೋಡಿ, ಖರಾಬು ಜಮೀನುಗಳನ್ನು ಪೋಡಿ ಪ್ರಕ್ರಿಯೆ ಮೂಲಕ ಭೂ ದಾಖಲೆಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ.
ನಿಮ್ಮ ಪಹಣಿಯಲ್ಲಿ ಅ ಮತ್ತು ಬ ಖರಾಬು ಜಮೀನು ಎಷ್ಟಿದೆ ಹೀಗೆ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿಯಲ್ಲಿ ಅಂದರೆ ನಿಮ್ಮ ಸರ್ವೆ ನಂಬರಿನಲ್ಲಿ ಎಷ್ಚು ಜಮೀನು ಬಿ ಖರಾಬು ಇದೆ ಎಂಬುದನ್ನು ಚೆಕ್ ಮಾಡಲು ಈ
https://www.landrecords.karnataka.gov.in/service2/RTC.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನೀವು ಯಾವ ಸರ್ವೆ ನಂಬರಿನಲ್ಲಿ ಬಿ ಖರಾಬು ಜಮೀನು ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ನಮೂದಿಸಬೇಕು. ಇದಾದ ನಂತರ ನೀವು Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಅದರ ಕೆಳಗಡೆ View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಪಹಣಿ ಓಪನ್ ಆಗುತ್ತದೆ. ಅಲ್ಲಿ ನೀವು ಖೇತವಾರು ಕೆಳಗಡೆ ಬಿ ಖರಾಬ್ ಜಮೀನು ಎಷ್ಟಿದೆ ಎಂಬ ಮಾಹಿತಿ ಇರುತ್ತದೆ. ಈ ಆಧಾರದ ಮೇಲೆ ನೀವು ಅ ಖರಾಬು ಹಾಗೂ ಬಿ ಖರಾಬು ಜಮೀನಿನ ಮಾಹಿತಿ ಪಡೆದುಕೊಳ್ಳಬಹುದು.
ಅ ಖರಾಬು ಹಾಗೂ ಬ ಖರಾಬು ಜಮೀನಿನ ನಿಯಮಗಳು
ಬ ಖರಾದು ಜಮೀನಿನನ್ನು ಒತ್ತುವರಿ ಮಾಡಿದರೆ ತೆರವುಗೊಳಿಸಲು ಸರ್ಕಾರಕ್ಕೆ ಅಧಿಕಾರವಿದೆ. ಆದರೆ ಅ ಖರಾಬು ಜಮೀನಿನ ಮೇಲೆ ಪಹಣಿ ಹೊಂದಿದವರಿಗೆ ಹಕ್ಕಿರುತ್ತದೆ.
ಇದನ್ನೂ ಓದಿ ಪಿಎಂ ಕಿಸಾನ್ 22ನೇ ಕಂತಿನ ಹಣ ಈ ದಿನ ರೈತರ ಖಾತೆಗೆ ಜಮೆ
ಬ ಖರಾಬು ಜಮೀನಿನ್ನು ಒತ್ತವರಿ ಮಾಡುವುದು ಕಾನೂನುಬಾಹಿರ ಅಂತಹ ಜಮೀನುಗಳನ್ನು ಯಾವುದೇ ಕಾರಣಕ್ಕೂ ಮಂಜೂರು ಮಾಡಲಾಗುವುದಿಲ್ಲ ಎಂದು ತಿಳಿಸಿದೆ.





