High yielding Red gram varieties ತೊಗರಿ ಕರ್ನಾಟಕ ರಾಜ್ಯದ ಬಹುಮುಖ್ಯ ಬೆಳೆಯಾಗಿದೆ. ದ್ವಿದಳ ಧಾನ್ಯದ ಬೆಳೆ ಇದು ನಿಮ್ಮ ದಿನನಿತ್ಯದ ಆಹಾರದ ಅವಿಭಾಜ್ಯ ಅಂಗವಾಗಿದೆ. ತೊಗರಿಯನ್ನು ಬೇಳೆಗಾಗಿ ಅಲ್ಲದೆ, ಹಸಿರು ತರಕಾರಿಯಾಗಿಯೂ ಸಹ ಉಪಯೋಗಿಸಬಹುದು. ಇದನ್ನು ಪೂರ್ಣ ಬೆಳೆಯಾಗಿ ಬೆಳೆಯಬಹುದು ಅಥವಾ ಅಂರಾಗಿ, ನೆಲಗಡಲೆ, ಜೋಳ, ಮುಸುಕಿನ ಜೋಳ ಬೆಳಗಳೊಂದಿಗೆ ಮಿಶ್ರ ಬೆಳೆಯಾಗಿ ಬಳೆಯಬಹುದು. ಈಗಾಗಲೇ ಮುಂಗಾರು ಆರಂಭವಾಗಿದ್ದರಿಂದ ರೈತರಿಗೆ ಅನುಕೂಲವಾಗಲೆಂದು ಹೆಚ್ಚು ಇಳುವರಿ ಕೊಡುವ ತಳಿಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ತೊಗರಿ ಬೆಳೆಯ ತಳಿಗಳು (High yielding Red gram varieties )
ಹೆಚ್.ವೈ-3 ಸಿ, ಟಿಟಿಬಿ7, ಬಿ.ಆರ್.ಜಿ 1, ಬಿ.ಆರ್.ಜಿ 2, ಐಸಿಪಿ 7035, ಬಿ.ಆರ್.ಜಿ 4, ಬಿ.ಆರ್.ಜಿ 3, ಬಿ.ಆರ್.ಜಿ. 5, ಜಿ.ಆರ್.ಜಿ 811 ಇನ್ನಿತರ ತಳಿಗಿವೆ.
ಬಿ.ಆರ್.ಜಿ 1 (BRG-1): ಇದು 180 ರಿಂದ 190 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಸಹ 5-6 ಪ್ರತಿ ಎಕರೆಗೆ ಇಳುವರಿ ಕೊಡುತ್ತದೆ. ಬೇಳೆ ಮತ್ತು ತರಕಾರಿಗೆ ಸೂಕ್ತವಾಗಿದೆ.
ಬಿ ಆರ್.ಜಿ. 2 (BRG-2): ಈ ತಳಿಯು 150-170 ದಿನಗಳಲ್ಲಿ ಕಟಾವಿಗೆ ಬರುತ್ತದೆ. 5 ರಿಂದ 6 ಕ್ವಿಂಟಾಲ್ ಪ್ರತಿ ಎಕರೆಗೆ ಇಳುವರಿ ಕೊಡುತ್ತದೆ.
ಬಿ.ಆರ್.ಜಿ 3 (BRG-3): ಇದು ಮೇ ಮತ್ತು ಜುಲೈ ತಿಂಗಳವರೆಗೆ ಬಿತ್ತಬಹುದು 160-170 ದಿನಗಳವರೆಗೆ ಕಟಾವಿಗೆ ಬರುತ್ತದೆ. ಪ್ರತಿ ಎಕರೆಗೆ 5 ರಿಂದ 6 ಕ್ವಿಂಟಾಲ್ ಇಳುವರಿ ನೀಡುತ್ತದೆ. ಸೊರಗಿ, ರೋಗ ಮತ್ತು ಬಂಜೆ ರೋಗ ನಿರೋಧಕ ತಳಿಯಾಗಿದೆ.
ಬಿ.ಆರ್.ಜಿ 4(BRG-4): ಈ ತಳಿಯು 140 ರಿಂದ 145 ದಿನಗಳವರೆಗೆ ಕಟಾವಿಗೆ ಬರುತ್ತದೆ.5-6 ಕ್ವಿಂಟಾಲ್ ಪ್ರತಿ ಎಕರೆಗೆ ಇಳುವರಿ ಕೊಡುತ್ತದೆ.
ಬಿ.ಆರ್.ಜಿ 5 (BRG-5): ಇದು 170 ರಿಂದ 180 ದಿನಗಳಲ್ಲಿ ಕಟಾವಿಗೆ ಬರುತತ್ದೆ. ಸೊರಗು ರೋಗ ನಿರೋಧಕ ತಳಿಯಾಗಿದೆ.
ಹೆಚ್.ವೈ 3 ಸಿ: ಈ ತಳಿಯನ್ನು ಮೇ ತಿಂಗಳಿಂದ ಜುಲೈ ತಿಂಗಳವರೆಗೆ ಬಿತ್ತಬಹುದು. 170 ರಿಂದ 180 ದಿನಗಳ ಕಾಲವಧಿಯಲ್ಲಿ ಕಟಾವಿಗೆ ಬರುತ್ತದೆ. ಪ್ರತಿ ಎಕರೆಗೆ 5-6 ಎಕರೆಯರೆಗೆ ಇಳುವರಿ ಕೊಡುತ್ತದೆ. ಬೇಳೆ ಮತ್ತು ಹಸಿರು ತರಕಾರಿಗೆ ಈ ತಳಿ ಸೂಕ್ತವಾಗಿದೆ.
ಟಿಟಿಬಿ 7: ಈ ತಳಿಯುವ 180-210 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು 5-6 ಕ್ವಿಂಟಾಲ್ ವರೆಗೆ ಇಳುವರಿ ಕೊಡುತ್ತದೆ.
ಇದನ್ನೂ ಓದಿ : ರೈತರಿಗೆ ಸಂತಸದ ಸುದ್ದಿ: ಹೆಚ್ಚು ಇಳುವರಿ ಕೊಡುವ ಶೇಂಗಾ (High yielding Groundnut varieties) ತಳಿಗಳ ಮಾಹಿತಿ ಇಲ್ಲಿದೆ
ತಳಿಗಳ ಅವಧಿಯು ಬಿತ್ತನೆ ಸಮಯದ ಮೇಲೆ ಅವಲಂಬನೆಯಾಗುತ್ತದೆ. ಮುಂಚಿತವಾಗಿ ಬಿತ್ತಿದ ತೊಗರಿ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುತ್ತದೆ. ಈ ಸಸಿಗಳಲ್ಲಿ ಹೆಚ್ಚಿನ ಕವಲುಗಳು ಮತ್ತು ಕಾಯಿಗಳನ್ನು ಬಿಟ್ಟು ಅಧಿಕ ಇಳುವರಿ ಕೊಡುತ್ತದೆ.
ಬೀಜೋಪಚಾರ (Seed treatment)
ಬಿತ್ತನೆಗೆ ಮುಂಚೆ ಎಕರೆಗೆ 24 ಗ್ರಾಂ ಸೋಡಿಯಂ ಮಾಲಿಬ್ಡೇಟ್ ನ್ನು ಮಡಕೆ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ತೆಗೆದುಕೊಂಡು 60 ಮಿ.ಲೀ. ಬೆಲ್ಲದ ದ್ರಾವಣದಲ್ಲಿ ಕರಗಿಸಿದ ಮಿಶ್ರಣದಲ್ಲಿ ಎಕರೆಗೆ ಬೇಕಾದ ಬಿತ್ತನೆ ಬೀಜವನ್ನು ಬೆರೆಸಿ ನೆರಳಿನಲ್ಲಿ ಒಣಗಿಸಿದ ನಂತರ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಜೀವಾಣುಗಳನ್ನು ಲೇಪನ ಮಾಡಿ ಬಿತ್ತಬೇಕು.
ತೊಗರಿಯಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳು (intercrop)
ಪೂರ್ಣ ಬೆಳೆಯಾಗಿ ಮೇ –ಜೂನ್ ತಿಂಗಳಲ್ಲಿ ಬಿತ್ತನೆ ಮಾಡುವ ತೊಗರಿ ಬೆಳೆ ಜೊತೆಯಲ್ಲಿ ಮಿಶ್ರ ಬೆಳೆಯಾಗಿ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಅಲಸಂಧೆ, ಹೆಸರು, ಉದ್ದು, ಸೋಯಾ ಮತ್ತು ಅವರೆ ಬೆಳೆಗಳನ್ನು ಬೆಳೆಯಬಹುದು.
ರೈತರು ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದಲ್ಲಿ ಹೆಚ್ಚು ಇಳುವರಿ ನಿರೀಕ್ಷಿಸಬಹುದು.