High yield sugarcane variety ಸಿಓವಿಸಿ 18061 ಕಬ್ಬಿನ ತಳಿಯು ಪ್ರತಿ ಎಕರೆಗೆ 70 ಟನ್ ಕಬ್ಬು ಇಳುವರಿ ನೀಡುತ್ತದೆ. ಈ ತಳಿಯನ್ನು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಈ ತಳಿಯು ಪ್ರಸ್ತುತ ಬೆಳೆಯುತ್ತಿರುವ ಕಬ್ಬುಗಳಿಗಿಂತ ಉತ್ತಮ ಇಳುವರಿ ಕೊಡುತ್ತದೆ. ಪ್ರತಿ ಎಕರೆಗೆ 60 ರಿಂದ 70 ಟನ್ ಇಳುವರಿ ಬರಲಿದೆ. ಕೂಳೆ ಬೆಳೆಯಲ್ಲಿ ಪ್ರತಿ ಎಕರೆಗೆ 60 ಟನ್ ಇಳುವರಿ ನೀಡುತ್ತದೆ. ಇದನ್ನು ಜನವರಿ-ಫೆಬ್ರವರಿ ತಿಂಗಳಲ್ಲಿ ನಾಟಿಗೆ ಯೋಗ್ಯವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ರಾಜೇಂದ್ರ ಪ್ರಸಾದ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನವೆಂಬರ್ 11 ರಿಂದ 14 ರವರೆಗೆ ನಾಲ್ಕು ದಿನಗಳ ಕಾಲ ಹಮ್ಮಿಕೊಂಡ ಕೃಷಿ ಮೇಳದಲ್ಲಿ ಪ್ರತಿ ಎಕರೆಗೆ 70 ಟನ್ ಇಳುವರಿ ನೀಡುವ ಕಬ್ಬಿನೊಂದಿಗೆ 10 ಹೊಸ ತಳಿಗಳನ್ನು ವೀಕ್ಷಿಸಬಹುದು.
High yield sugarcane variety ಹೊಸ ತಳಿಗಳ ಪರಿಚಯ
ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಈ ವರ್ಷದ ಮೇಳದಲ್ಲಿ 10 ಹೊಸ ತಳಿಗಳ ಬೆಳೆಗಳನ್ನು ಪರಿಚಯಿಸುತ್ತಿದೆ. ಜ್ಯೋತಿ ತಳಿಯನ್ನು ಹೋಲುವ ಕೆಎಂಪಿ-220 ತಳಿ ಭತ್ತ, ಎಂಎಸ್ಎನ್-99 ತಳಿ ಭತ್ತ, ಕೆಎಂಆರ್ 316 ತಳಿ ರಾಗಿ, ಜೆಪಿಯುಪಿ 28 ತಳಿಯ ಬರಗು, ಜಿಪಿಯುಎಫ್-3 ತಳಿಯ ನವಣೆ, ಸಿಓವಿಸಿ-18061 ತಳಿಯ ಕಬ್ಬು, ಮೂರುವರೆ ವರ್ಷಕ್ಕೆ ಫಸಲು ನೀಡುವ ಹಾಗೂ ವರ್ಷದಲ್ಲಿ ಎರಡು ಬಾರಿ ಫಲ ಬಿಡುವ ಬೈರಚಂತ್ರ ಹಲಸು, ಓಟ್ಸ್ ಹೋಲುವ ಮೇವಿನ ತೋಕೆ ಗೋದಿ ಆರ್ ಓ:ತಳಿಗಳನ್ನು ಪರಿಚಯಿಸುತ್ತಿದೆ.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೃಷಿ ಬೆಳೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ 5 ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ. ಅದೇ ರೀತಿ ಉತ್ಪಾದನೆಗೆ 8, ಬೆಳೆ ಸಂರಕ್ಷಣೆ ಕುರಿತ 10, ರೇಷ್ಮೆ ಕೃಷಿಗೆ ಸಂಬಂಧಿಸಿದ 3, ಜೇನು ಕೃಷಿ ಮತ್ತು ಕೃಷಿ ಎಂಜಿನಿಯರಿಂಗ್ ಕುರಿತ ತಲಾ ಒಂದು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ.
ಬೆಂಕಿರೋಗ ನಿರೋಧಕ ಕೆಂಪಕ್ಕಿ ಭತ್ತ
ಕೆಎಂಪಿ-220 ಭತ್ತವು ಹೊಸ ತಳಿಯಾಗಿದ್ದು 125 ರಿಂದ 130 ದಿನಗಳಲ್ಲಿ ಕೊಯ್ಲು ಮಾಡಬಹುದು. ಎಕರೆಗೆ 25 ಕ್ವಿಂಟಾಲ್ ಧಾನ್ಯ ಹಾಗೂ 32 ಕ್ವಿಂಟಾಲ್ ಮೇವು ಬರಲಿದೆ. ಆಗಸ್ಟ್ ಮೊದಲ ವಾರದೊಳಗೆ ನಾಟಿ ಮಾಡಲು ಸೂಕ್ತವಾಗಿದೆ. ಅಕ್ಕಿ ಕೆಂಪಾಗಿರಲಿದ್ದು, ಉದ್ದ ಮತ್ತು ದಪ್ಪವಾಗಿರುತ್ತದೆ. ಈ ತಳಿಯು ಬೆಂಕಿರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
ಎಂಎಸ್ಎನ್ 99 ತಳಿ ಭತ್ತದ ಅಕ್ಕಿ ಮಧ್ಯಮ ಹಾಗೂ ಸಣ್ಣದಾಗಿದ್ದು, ಊಟಕ್ಕೆ ರುಚಿಕರವಾಗಿರಲಿದೆ. ಈ ತಳಿಯು ಮೂರು ತಿಂಗಳಲ್ಲಿ ಕಟಾವಿಗೆ ಬರಲಿದೆ. ಪ್ರತಿ ಎಕರೆಗೆ 27 ಕ್ವಿಂಟಾಲ್ ಭತ್ತದ ಧಾನ್ಯ ಹಾಗೂ 30 ಕ್ವಿಂಟಾಲ್ ಮೇವು ಬರಲಿದೆ. ಮುಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಸೂಕ್ತವಾಗಿದೆ. ಬೆಳೆಯ ಎತ್ತರ 110 ಸೆಂಮೀ ಉದ್ದವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
65 ಲಕ್ಷ ಮೌಲ್ಯದ ಹಳ್ಳಿಕಾರ ಎತ್ತುಗಳ ಪ್ರದರ್ಶನ
65 ಲಕ್ಷ ರೂಪಾಯಿ ಮೌಲ್ಯದ ಎತ್ತುಗಳು, ಮಂಡ್ಯ ಮಳ್ಳವಳ್ಳಿಯ ಹಳ್ಳಿಕಾರ್ ಎತ್ತುಗಳು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದೆ. ಈ ಎತ್ತುಗಳು ದಷ್ಟಪುಟ್ಟವಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅದೇ ರೀತಿ ರಾಮನಗರದ 50 50 ಲಕ್ಷ ರೂಪಾಯಿ ಮೌಲ್ಯದ ಎತ್ತುಗಳನ್ನು ನೋಡಬಹುದು.
3 ಲಕ್ಷ ರೂಪಾಯಿ ಮೌಲ್ಯದ ಓತ
ದೊಡ್ಡಬಳ್ಳಾಪುರ ಜಮುನಾ ಪ್ಯಾರಿ ಹೆಸರಿನ ಓತವೂ ಮೇಳದ ಆಕರ್ಷಣೆಯಾಗಿದೆ. ಈ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ.
ರೇಷ್ಮೆ ಗೂಡು ಬಿಡಿಸುವ ಯಂತ್ರ
ಇದೇ ಮೊದಲ ಬಾರಿಗೆ ವಿವಿ ವಿದ್ಯಾರ್ಥಿಗಳು ಸಂಶೋಧಿಸಿರುವ ರೇಷ್ಮೆ ಗೂಡು ಬಿಡಿಸುವ ಯಂತ್ರವನ್ನು ಪ್ರದರ್ಶಿಸಲಾಗಿದೆ. ಈ ಯಂತ್ರವು ಚಂದ್ರಿಕೆಯಿಂದ ರೇಷ್ಮೆ ಗೂಡು ಬಿಡಿಸಲಿದೆ. ಸುಮಾರು 7 ರಿಂದ 8 ಸಾವಿರ ರೂಪಾಯಿ ವೆಚ್ಚ ತಗಲಬಹುದು. ವಿದ್ಯಾರ್ಥಿಗಳು ಮೇಳದಲ್ಲಿ ಪ್ರಾತ್ಯಕ್ಷಿಕೆ ಮಾಡಲಿದ್ದಾರೆ
ಮೊಬೈಲ್ ನಲ್ಲೇ ವೀಕ್ಷಿಸಿ ಕೃಷಿಮೇಳ
ಮೊಬೈಲ್ ನಲ್ಲೇ ಕೃಷಿ ಮೇಳವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ವೆಬ್ ಪೇಜ್, ವೆಬ್ ಸೈಟ್, ಯೂಟ್ಯೂಬ್, ಫೇಸ್ ಬುಕ್ ಮತ್ತು ಜೂಮ್ ಮೂಲಕ ಬೆಳಗ್ಗೆ 10 ರಿಂದ ಸಾಯಂಕಾಲ 4 ರವರೆಗೆ ನೇರಪ್ರಸಾರ ವೀಕ್ಷಿಸಬಹುದು.
ವೆಬ್ ಸೈಟ್ : https://www.uasbangalore.edu.in
ಯೂಟೂಬ್ https://www.youtube.com/c/UASBangaloreGKVK
ಫೇಸ್ ಬುಕ್ https://www.facebook.com/sis/uasb/ ಈ ಮೇಲಿನ ಯಾವುದಾದರೊಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ನವೆಂಬರ್ 11 ರಿಂದ ನೇರವಾಗಿ ಮೊಬೈಲ್ ನಲ್ಲಿಯೇ ಕೃಷಿಮೇಳದಲ್ಲಿ ನಡೆಯುವ ಚಟುವಟಿಕೆ ವೀಕ್ಷಿಸಬಹುದು.