High school Board exam ಕರ್ನಾಟಕದ 5, 8, 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ಬೋರ್ಡ್ ಎಕ್ಸಾಂ ನಡೆಸಬೇಕೆಂದು ಕೊನೆಗೂ ಹೈಕೋರ್ಟ್ ಸಮ್ಮತಿ ನೀಡಿದೆ. ಈ ಕುರಿತು ಇಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.
ಬೋರ್ಡ್ ಎಕ್ಸಾಂ ಯಾವಾಗಿನಿಂದ ಆರಂಭವಾಗುತ್ತದೆ? ಯಾವ ಯಾವ ವಿಷಯಗಳಿಗೆ ಮರು ಪರೀಕ್ಷೆ ನಡೆಸಬೇಕು? ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.
ಖಾಸಗಿ ಶಾಲೆಗಳ ಒಕ್ಕೂಟ ಸಂಸ್ಥೆಯ ರೂಪ್ಸಾ 5, 8, 9,11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ವಿರೋಧಿಸಿ ಕೋರ್ಟ್ ಮೊರೆಹೋಗಿತ್ತು. ಈ ಹಿಂದೆ ಹೈಕೋರ್ಟ್ ಪರೀಕ್ಷೆ ಬೇಡ ಎಂದಿತ್ತು. ನಂತರ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿ ಹೈಕೋರ್ಟ್ ವಿಭಾಗೀಯ ಪೀಠ ಅಸ್ತು ಎಂದಿತ್ತು. ನಂತರ ಮತ್ತೆ ರೂಪ್ಸಾ ಸಂಘಟನೆಯು ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.ಈ ವೇಳೆ ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರ ಮನವಿ ಅಂಗೀಕರಿಸಿ ಹೈಕೋರ್ಟ್ ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಬದಿಗೆ ಸರಿಸಿ,ಮುಖ್ಯಮ ಮೇಲ್ಮನವಿಗಳನ್ನ ತ್ವರಿತವಾಗಿ ತೀರ್ಮಾನಿಸುವಂತೆ ವಿಭಾಗೀಯ ಪೀಠಕ್ಕೆ ಸೂಚನೆ ನೀಡಿತ್ತು.
ಇದೀಗ ವಿಚಾರಣೆ ಮುಗಿಸಿದ ಹೈಕೋರ್ಟ್ ಪೀಠ ಸ್ಥಗಿತಗೊಂಡಿದ್ದ 5,8,9 ಹಾಗೂ 11ನೇ ತರಗತಿಗಳ ಬೋರ್ಡ್ ಪರೀಕ್ಷೆ ಮುಂದುವರೆಸಲು ಆದೇಶನೀಡಿದೆ.ಅಲ್ಲದ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಇದನ್ನೂ ಓದಿ 13 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ
ಈಗಾಗಲೇ ಎರಡು ಪತ್ರಿಕೆಗಳ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆದಿದ್ದು, ಉಳಿದ ಪತ್ರಿಕೆಗಳಿಗೆ ಪರೀಕ್ಷೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿಯನ್ನು ಸಹ ತ್ವರಿತವಾಗಿ ಬಿಡುಗಡೆ ಮಾಡಬೇಕಿದೆ. ಅತೀ ಶೀಘ್ರದಲ್ಲಿಯೇ ಶಿಕ್ಷಣ ಇಲಾಖೆ ವೇಳಾಪಟ್ಟಿ ಬಿಡುಗಡೆ ಮಾಡಲಿದೆ.
ಮಾರ್ಚ್ 25 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ಹಾಗಾಗಿ ಶಿಕ್ಷಣ ಇಲಾಖೆಯುವ ಎಸ್ಎಸ್.ಎಲ್.ಸಿ ಪರೀಕ್ಷೆಗಳಿಗೆ ತೊಂದರೆಯಾಗದಂತೆ ವೇಳಾಪಟ್ಟಿಯನ್ನು ತಯಾರು ಮಾಡಬೇಕಿದೆ.
High school Board exam ವಿದ್ಯಾರ್ಥಿಗಳಲ್ಲಿ ಗೊಂದಲ
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಹಳೆ ಮಾದರಿಯಂತೆ ಪರೀಕ್ಷೆಗಳನ್ನು ನಡೆಸಿ ಮುಗಿಸಿದ್ದಾರೆ. ಒಂದು ವೇಳೆ ಬೋರ್ಡ್ ಎಕ್ಸಾಂ ರದ್ದಾದರೆ ಹಳೆ ಪದ್ದತಿಯ ಪರೀಕ್ಷೆಯನ್ನೇ ಪರಿಗಣನೆಗೆ ತೆಗೆದುಕೊಳ್ಳುವದಕ್ಕಾಗಿ ಪರೀಕ್ಷೆ ನಡೆಸಿ ಮುಗಿಸಿದ್ದವು. ಆದರೆ ಈಗ ಮತ್ತೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಬೋರ್ಡ್ ಎಕ್ಸಾಂ ನಡೆಸಬೇಕಾಗುತ್ತದೆ. ಇಧರಿಂದ ವಿದ್ಯಾರ್ಥಿಗಳು ಎರಡೆರಡು ಪರೀಕ್ಷೆಗಳನ್ನು ಬರೆಯುವಂತಾಗುತ್ತದೆ.
ಇಲ್ಲಿದೆ ಹೊಸ ವೇಳಾಪಟ್ಟಿ
ಐದನೇ ತರಗತಿ, ಎಂಟನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಹೊಸ ವೇಳಾಪಟ್ಟಿ ಬಿಡುಗಡೆಯಾಗಿದೆ. ಯಾವ ಯಾವ ದಿನಾಂಕ ಯಾವ ಸಮಯದಲ್ಲಿ ಪರೀಕ್ಷೆ ಇದೆ ಎಂಬುದನ್ನು ಇಲ್ಲೇ ಚೆೆೆ ಕ್ ಮಾಡಬಹುದು. ಈ
5, 8 ಹಾಗೂ 9ನೇ ಪರಿಷ್ಕೃತ ವೇಳಾಪಟ್ಟಿ
ಸೋಮವಾರ 25-03-2024 ರಂದು ಮಧ್ಯಾಹ್ನ 2.30 ರಿಂದ4.30ರವರೆಗೆ ಐದನೇ ತರಗತಿಯ ಇವಿಎಸ್ (ಪರಿಸರ ಅಧ್ಯಯನ) ಪರೀಕ್ಷೆ ಇರಲಿದೆ.
ಅಂದು 8 ನೇ ತರಗತಿಯ ತೃತೀಯ ಭಾಷೆ ಮಧ್ಯಾಹ್ನ 2.30 ರಿಂದ 5 ರವರೆಗೆ ನಡೆಯಲಿದೆ.
9ನೇ ತರಗತಿಯ ತೃತೀಯ ಭಾಷೆ ಮಧ್ಯಾಹ್ನ 2 ರಿಂದ 5 ರವರೆಗೆ ನಡೆಯಲಿದೆ.
ಐದನೇ ತರಗತಿಯಿ ಗಣಿತ ಪರೀಕ್ಷೆಯ 26 ರಂದು ಮಂಗಳವಾರ ಬೆಳಗ್ಗೆ 10 ರಿಂದ 12 ರವರೆಗೆ ನಡೆಯಲಿದೆ.
ಅದೇ ದಿನ 8 ನೇ ತರಗತಿಯ ಗಣಿತ ಪರೀಕ್ಷೆ ಬೆಳಗ್ಗೆ 10 ರಿಂದ 12.30 ರವರೆಗೆ ನಡೆಯಲಿದೆ. ನಡೆಯಲಿದೆ.
9ನೇ ತರಗತಿಯ ಗಣಿತ ಪರೀಕ್ಷೆ 10 ರಿಂದ 1.15 ರವರೆಗೆನಡೆಯಲಿದೆ
8ನೇ ತರಗತಿಯ ವಿಜ್ಞಾನ ಪರೀತ್ರೆ ಮಧ್ಯಾಹ್ನ 2.30 ರಿಂದ 5 ಗಂಟೆಯವರೆಗೆ ನಡೆಯಲಿದೆ.
ಅದೇ ರೀತಿ ಸಮಾಜ ವಿಜ್ಞಾನ ಪರೀಕ್ಷೆ ಬೆಳಗ್ಗೆ 10 ರಿಂದ 12.30ರವರೆಗೆ ನಡೆಯಲಿದೆ
9ನೇ ತರಗತಿಯ ವಿಜ್ಞಾನ ಪರೀಕ್ಷೆ ಮಧ್ಯಾಹ್ನ 2.ರಿಂದ 5.15 ರವರೆಗೆ ನಡೆಯಲಿದೆ.
ಸಮಾಜ ವಿಜ್ಞಾನ ಪರೀಕ್ಷೆ 10 ರಿಂದ 1.15 ರವರೆಗೆ ನಡೆಯಲಿದೆ.