Heavy rain alert in six districts ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾದ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ. ಅದೇರೀತಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ರಾಮನಗರ ಮತ್ತು ತುಕುಮರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.
ಸೆಪ್ಟಂಬರ್ 26 ರಂದು ವಿಜಯನಗರ, ಸೆಪ್ಟಂಬರ್ 28 ರಂದು ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮಳೆಯಾಗಲಿದೆ. ಅದೇ ರೀತಿ ಸೆಪ್ಟೆಂಬರ್ 29 ರಂದು ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ವ್ಯಾಪ್ತಿಯ ಜಿಲ್ಲೆಗಳಲ್ಲಿ ನಾಲ್ಕು ದಿನ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯಲ್ಲಿಯೂ ಮಳೆಯಾಗುಲಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಸಂಜೆ ಅಥವಾ ರಾತ್ರಿ ವೇಳೆ ಜೋರು ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾದರೆ, ಹಾಸನ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮುಂದಿನ ಏಳು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಈ ದಿನ ಮಹಿಳೆಯರ ಖಾತೆಗೆ ಜಮೆ- ಯಾರಿಗೆ ಜಮೆ? ಇಲ್ಲೇ ಚೆಕ್ ಮಾಡಿ
ಕರಾವಳಿಯಲ್ಲಿ ಬಿರುಗಾಳಿಯ ವೇಗ ಗಂಟೆಗೆ 20-40 ಕಿ.ಮೀ ಇರಲಿದೆ. ಆದರೆ ಮೀನುಗಾರರಿಗೆ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲ.
ಭಾನುವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ರಾಯಚೂರಿನ ಕುರ್ಡಿ, ತುಮಕೂರಿನ ಮಧುಗಿರಿಯಲ್ಲಿ ಅತೀ ಹೆಚ್ಚು ತಲಾ 9 ಸೆಂ. ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ಸಿಂಧನೂರು, ಯಾದಗಿರಿಯ ಹುಣಸಗಿಯಲ್ಲಿ ತಲಾ 7, ಪಣಂಬೂರು, ರಾಯಚೂರಿನ ಜಾಲಹಳ್ಳ, ತಲಾ 6 , ಕಾರ್ಕಳ, ಮಾನ್ವಿ ತಲಾ 5 ಸೆಂ. ಮೀ ಮಳೆಯಾದ ವರದಿಯಾಗಿದೆ.
Heavy rain alert in six districts ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ?
ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ಕೇಳಲು ನೀವು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದು. ಹೌದು, ವರುಣಮಿತ್ರ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ವರುಣಮಿತ್ರ ಸಹಾಯವಾಣಿ 92433 45433 ನಂಬರಿಗೆ ಕರೆ ಮಾಡಿ ಮಳೆಯ ಮಾಹಿತಿ ತಿಳಿದುಕೊಳ್ಳಬಹುದು. ಈ ನಂಬರಿಗೆ ಕರೆ ಮಾಡಿ ನೀವು ನಿಮ್ಮೂರಿನಲ್ಲಿ ಗಾಳಿಯ ದಿಕ್ಕು, ವೇಗ ಹಾಗೂ ಅಂದಿನ ವಾತಾವರಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಹೌದು, ಯಾರ ಸಹಾಯವೂ ಇಲ್ಲದೆ, ನೀವು ಮನೆಯಲ್ಲಿಯೇ ಕುಳಿತು ಮಳೆಯ ಮಾಹಿತಿ ಪಡೆಯಬಹುದು. ಕೇವಲ ನೀವು ವರುಣಮಿತ್ರ ಸಹಾಯವಾಾಣಿ ನಂಬರಿಗೆ ಕರೆ ಮಾಡಿದರೆ ಸಾಕು, ಇಂದಿನ ನಾಳೆಯ ಹವಾಮಾಾ ವರದಿಯನ್ನು ಸಹ ಪಡೆದುಕೊಳ್ಳಬಹುದು.