rain alert in 14 district ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಶನಿವಾರ ಮತ್ತು 10 ಜಿಲ್ಲೆಗಳಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವದರಿಂದ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹೌದು, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತಮಳೆಯಾಗುವ ಸಾಧ್ಯತೆಯಿರುವುದರಿಂದ ಶನಿವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಳ್ಳಾರಿ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಮುನ್ಸೂಚನೆ ಇರುವದರಿಂದ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅದೇ ರೀತಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು, ಮೈಸುರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು, ವಿಜಯಗರ, ತುಮಕೂರು, ರಾಮನಗರ ಜಿಲ್ಲೆಯ ಕೆಲವುಕಡೆ ಮಳೆಯಾಗಲಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
rain alert in 14 district ಐದು ದಿನ ಮೊದಲೇ ಮಳೆಯ ಮೂನ್ಸೂಚನೆ ನೀಡುತ್ತದೆ ಮೇಘದೂತ್ ಆ್ಯಪ್
ಮಳೆಯಾಗುವ ಐದು ದಿನ ಮೊದಲೆ ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದರ ಕುರಿತು ಮಾಹಿತಿ ನೀಡುತ್ತದೆ ಮೇಘದೂತ್ ಆ್ಯಪ್. ಅದು ಹೇಗೆ ಅಂದುಕೊಂಡಿದ್ದೀರಾ ? ಇಲ್ಲಿದೆ ನೋಡಿ ಮಾಹಿತಿ.
ಮೇಘದೂತ್ ಆ್ಯಪ್ ನಿಮ್ಮ ಮೊಬೈಲ್ ನಲ್ಲಿ ಇನಸ್ಲಾಟ್ ಮಾಡಿಕೊಳ್ಳಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳಿ. ಇದು ರೈತರಿಗೆ ಐದು ದಿನ ಮೊದಲೇ ಮಳೆಯ ಮಾಹಿತಿಯನ್ನು ನೀಡುತ್ತದೆ.
ಐದು ನಿಮಿಷ ಮೊದಲೇ ಸಿಡಿಲಿನ ಮಾಹಿತಿ ನೀಡುತ್ತದೆ ದಾಮಿನಿ ಆ್ಯಪ್
ಸಾರ್ವಜನಿಕರಿಗೆ ಸಿಡಿಲು ಬೀಳುವ ಮೊದಲೇ ಐದು ನಿಮಿಷ ಮೊದಲೇ ಸಿಡಿಲಿನ ಮಾಹಿತಿ ನೀಡುತ್ತದೆ. ಹೌದು ದಾಮಿನಿ ಆ್ಯಪ್ ಸಿಡಿಲಿನ ಮಾಹಿತಿ ನೀಡುತ್ತದೆ. . ಈ ಆ್ಯಪ್ ಹೇಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ ಇಲ್ಲಿದೆ ಮಾಹಿತಿ.
ದಾಮಿನಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ದಾಮಿನಿ ಆ್ಯಪ್ ನ್ನು ನಿಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಲು ಈ
https://play.google.com/store/apps/details?id=com.lightening.live.damini
ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಜಿಪಿಎಸ್ ಆನ್ ಇದ್ದರೆ ಸಿಡಿಲಿನ ಸ್ಥಳ ಗುರುತಿಸಲು ಸುಲಭವಾಗುತ್ತದೆ. ಇದಕ್ಕೆ ನಾನು ಒಪ್ಪುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಂಡು ಜಿಪಿಎಸ್ ನ್ನು ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು.
ನಿಮಗೆ ಒಂದು ಸರ್ಕಲ್ ಕಾಣಿಸುತ್ತದೆ. ಅಲ್ಲಿಎಷ್ಟು ನಿಮಿಷದೊಳಗೆ ನೀವು ಇರುವ ಸುತ್ತಮತ್ತಲಿನ ಪ್ರದೇಶದ ಎಲ್ಲೆಲ್ಲಿ ಸಿಡಿಲು ಬೀಳುವ ಸಾಧ್ಯತೆ ಎಂಬುದು ಕಾಣಿಸುತ್ತದೆ.. ಆ ಆಧಾರದ ಮೇಲೆ 7 ನಿಮಿಷದೊಳಗೆ ಎಲ್ಲೆಲ್ಲಿ 14 ನಿಮಿಷದೊಳಗೆ ಎಲ್ಲೆಲ್ಲಿ ಹಾಗೂ 21 ನಿಮಿಷದೊಳಗೆ ಎಲ್ಲೆಲ್ಲಿ ಸಿಡಿಲು ಬೀಳುತ್ತವೆ ಎಂಬ ಮಾಹಿತಿ ಕಾಣಿಸುತ್ತದೆ.
ವರುಣಮಿತ್ರ ಸಹಾಯವಾಣಿ (Varunmitra Helpline Number)
ಸಾರ್ವಜನಿಕರಿಗೆ ಮಳೆಯ ಮಾಹಿತಿ ನೀಡಲು ಆರಂಭವಾಗಿದೆ. ವರುಣಮುತ್ರ ಸಹಾಯವಾಣಿ. ಹೌದು, ವರುಣಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಿದರೆ ಸಾಕು, ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿಯನ್ನು ಪಡೆಯಬಹುದು. ವರುಣಮಿತ್ರ ಸಹಾಯವಾಣಿ ನಂಬರ್ 92433 45433 ನಂಬರಿಗೆ ಕರೆ ಮಾಡಿ ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಪಡೆಯಿರಿ.ು ಇದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.