Gruhalakshmi scheme amount ಅಕ್ಟೋಬರ್ 30 ರೊಳಗೆ ಅರ್ಹತೆ ಪಡೆದ ಮಹಿಳೆಯರಿಗೆ ಅಂದರೆ ನೋಂದಣಿ ಮಾಡಿದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಲಿದೆ.
ಹೌದು, ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ನೋಂದಣಿ ಮಾಡಿಸಿದ ಮತ್ತು ಅರ್ಹತೆ ಪಡೆದ ಮಹಿಳೆಯರಿಗೆ ಜಮೆಯಾಗಲಿದೆ. ಕಳೆದ ತಿಂಗಳು ಯಾವ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಿಲ್ಲವೋ ಅಂತಹವರಿಗೂ ಈ ತಿಂಗಳ ಹಣ ಎರಡೂ ತಿಂಗಳ ಸೇರಿ ಒಟ್ಟು 4 ಸಾವಿರ ರೂಪಾಯಿ ಹಣ ಜಮೆಯಾಗಲಿದೆ.
ಈ ಕುರಿತು ಕೊಪ್ಪಳ ಆಹಾರ ಇಲಾಖೆಯ ಅಧಿಕಾರಿಗಳು ತಡವಾಗಿ ನೋಂದಣಿಯಾದ ಮಹಿಳೆಯರಿಗೂ ದಾಖಲೆಗಳು ಸರಿಯಿದ್ದರೆ ಎರಡನೇ ಕಂತಿನ ಹಣ ವಾರದೊಳಗೆ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಕುಟುಂಬದ ಮಹಿಳಾ ಮಖ್ಯಸ್ಥರಿಗೆ ಪ್ರತಿ ತಿಂಗಳು ಅವರ ಖಾತೆಗೆ ಎರಡು ಸಾವಿರ ರೂಪಾಯಿ ಜಮೆ ಮಾಡಿ ಆರ್ಥಿಕ ಸಹಾಯ ಕಲ್ಪಿಸುವುದು ಗೃಹಲಕ್ಷ್ಮೀ ಯೋಜನೆಯ ಉದ್ದೇಶವಲಾಗಿದೆ. ಪಡಿತರ ಚೀಟಿಗಳ ಮಾಹಿತಿ ಆಧಾರದ ಮೇಲೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ.
ನಿಮ್ಮ ಕುಟುಂಬದಲ್ಲಿ ಯಾರ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮೆಯಾಗಲಿದೆ?
ಗೃಹಲಕ್ಷ್ಮೀ ಯೋಜನೆಯ ಹಣ ಯಾರ ಖಾತೆಗೆ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಈ ಪಡಿತರ ಚೀಟಿ ( e- Ration card) ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಿ ಪಟ್ಟಿ (Show village list) ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಊರು ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿದಾಗ ಪಡಿತರ ಚೀಟಿ ಹೊಂದಿರುವವರ ಪಟ್ಟಿ ಕಾಣಿಸುತ್ತದೆ. ಅಲ್ಲಿ ರೇಶನ್ ಕಾರ್ಡ್ ನಂಬರ್ ನಂತರ ಮಹಿಳೆಯ ಹೆಸರಿದ್ದರೆ ಅವರ ಖಾತೆಗೆ ಹಣ ಜಮೆಯಾಗಲಿದೆ. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಹೊಂದಿರಬೇಕು.
ಇಕೆವೈಸಿ ಸಮಸ್ಯೆಯಿದ್ದರೆ ಅರ್ಹತೆ ಹೊಂದಿದ್ದರೂ ಹಣ ಜಮೆಯಾಗಲ್ಲ
ಪಡಿತರ ಚೀಟಿಯಲ್ಲಿ, ಆಧಾರ್ ಕಾರ್ಡ್, ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ವ್ಯತ್ಯಾಸ ಹೊಂದಿದ್ದರೆ ನಿಮಗೆ ಎಲ್ಲಾ ಅರ್ಹತೆ ಹೊಂದಿದ್ದರೂ ನಿಮಗೆ ಹಣ ಜಮೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇಕೆವೈಸಿ ಆಗದೆ ಈ ಯೋಜನೆಯಿಂದ ಇನ್ನೂ ಹಲವಾರು ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ.
ಇದನ್ನೂ ಓದಿ : ಹಿಂಗಾರು ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆ- ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮೂರಿನ ಬೆಳೆಗಳ ಲಿಸ್ಟ್
ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಹಣ ಜಮೆಯಾಗಲಿದೆ. ಇದರೊಂದಿಗೆ ಆದಾಯ ತೆರಿಗೆ ಪಾವತಿಸುವವರು, ಜಿಎಸ್.ಟಿ ರಿಟರ್ನ್ಸ್ ಸಲ್ಲಿಸುವವರಿಗೆ ಯೋಜನೆ ಅನ್ವಯಿಸುವುದಿಲ್ಲ. ಮಹಿಳೆಯ ಪತಿ ಆದಾಯ ತೆರಿಗೆ ಪಾವತಿಸುವವರಾಗಿದ್ದರೂ ಮನೆಯೊಡತಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಿರುವುದಿಲ್ಲ.
Gruhalakshmi scheme amount ನಿಮಗೇ ಜಮೆಯಾಗಿಲ್ಲವೇ? ಇಲ್ಲಿ ತಿಳಿಸಿ
ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಿಲ್ಲವೇ? ಕೆಳಗಡೆ comment ಮಾಡಿದರೆ ನಿಮಗೇಕೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಯಾಗಿಲ್ಲ? ಎಂಬುದನ್ನು ತಿಳಿಸಲಾಗುವುದು. ನಿಮ್ಮ ಹೆಸರು, ಮೇಲ್ ಐಡಿ ಬರೆದು ಮೆಸೆಜ್ ಮಾಡಿ ಐ ಆ್ಯಮ್ ನಾಟ್ ಓ ರೋಬೋಟ್ ಮೇಲೆ ಬಾಕ್ಸ್ ಆಯ್ಕೆ ಮಾಡಿದರೆ ನಿಮ್ಮ ಮೆಸೆಜ್ ನಮಗೆ ಬರುತ್ತದೆ. ಆಗ ನಿಮಗೇಕೆ ಹಣ ಜಮೆಯಾಗಿಲ್ಲವೆಂಬುದನ್ನು ತಿಳಿಸುತ್ತೇವೆ.