Grampanchayat whatsapp number : ಗ್ರಾಮ ಪಂಚಾಯತಿಯ ಎಲ್ಲಾ ಸೇವೆಗಳು ಇನ್ನೂ ಮುಂದೆ ವ್ಯಾಟ್ಸ್ ಆ್ಯಪ್ ನಲ್ಲೇ ಸಿಗಲಿದೆ. ಹೌದು, ನಿಮ್ಮ ಮೊಬೈಲ್ ನಲ್ಲೇ ಸೇವೆಗಳು ಸಿಗಲಿವೆ? ಏನೇನು ಮಾಹಿತಿ ಸಿಗಲಿವೆ? ಇಲ್ಲಿದೆ ಮಾಹಿತಿ..
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಎಲ್ಲಾ ಬಗೆಯ ಸೇವೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಟೇಟಸ್ ಪರಿಶೀಲನೆ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಎಲ್ಲಾ ಕುಂದು ಕೊರತೆಗಳನ್ನು ದಾಖಲಿಸಿ ಪರಿಹಾರವನ್ನು ಇನ್ಮುಂದೆ ತಮ್ಮ ಮೊಬೈಲ್ ವ್ಯಾಟ್ಸ್ ಆ್ಯಪ್ ಚಾಟ್ ಮೂಲಕ ಪಡೆಯಬಹುದು.
ಜನಜಾಗರಣ ಯೂಟೂಬ್ ಚಾನಲಿಗೆ subscribe ಆಗಲು ಇಲ್ಲಿ ಕ್ಲಿಕ್ ಮಾಡಿ
Grampanchayat whatsapp number ಇಲ್ಲಿದೆ
ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿರುವ ಮಹತ್ವದ ಪಂಚಮಿತ್ರ ಎಂಬ
ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ ನ್ನು 8277506000
ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ತಮಗೆ ಅವಶ್ಯಕತೆ ಇರುವ ಗ್ರಾಮ ಪಂಚಾಯತ್ ಗಳಲ್ಲಿ ಲಭ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಲು, ವಿವಿಧ ಮಾಹಿತಿ, ವಿವರಗಳನ್ನು ಪಡೆಯಲು ಹಲವಾರು ವೆಬ್ಸೈಟ್ ಮತ್ತು ಪೋರ್ಟಲ್ ಗಳಿಗೆ ಭೇಟಿ ನೀಡಬೇಕಿತ್ತು. ಅಲ್ಲದೆ, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ ವಿವರಣೆ ಪಡೆಯಲು ಯಾವುದೇ ನಿರ್ಧಿಷ್ಟವಾದ ವೆಬ್ಸೈಟ್ ಅಥವಾ ಪೋರ್ಟಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಪಂಚಮಿತ್ರ ಎಂಬ ವಿನೂತನ ವ್ಯಾಟ್ಸ್ ಆ್ಯಪ್ ಚಾಟ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ.
Grampanchayat whatsapp number ದಿಂದ ಯಾವ ಯಾವ ಸೌಲಭ್ಯ ಸಿಗಲಿದೆ?
ಪಂಚಮಿತ್ರದ ವ್ಯಾಟ್ಸ್ ಆ್ಯಪ್ ನಂಬರ್ 8277506000
ಮೂಲಕವೇ ಇನ್ನೂ ಮುಂದೆ ಸಾರ್ವಜನಿಕರು ಗ್ರಾಮ ಪಂಚಾಯತ್ಗಳಲ್ಲಿ ಲಭ್ಯವಿರುವ ಕಟ್ಟಡ ನಿರ್ಮಾಣ ಲೈಸನ್ಸ್, ಹೊಸ ನೀರು ಸರಬರಾಜು ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ವ್ಯಾಪಾರ ಪರವಾನಗಿ ಸೇರಿದಂತೆ ಇತರೆ ಎಲ್ಲಾ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು. ಬಳಿಕ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಬಹುದು.
ಇದನ್ನೂ ಓದಿ : ಪಂಚಮಿತ್ರದಲ್ಲಿ ಅಡಗಿದೆ ಗ್ರಾಮ ಪಂಚಾಯತಿಯ ಸರ್ವ ಮಾಹಿತಿ. ಮೊಬೈಲ್ ನಲ್ಲೇ ಚೆಕ್ ಮಾಡಿ
ಅದೇ ರೀತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು, ರಸ್ತೆ ಸೇತುವೆ ದುರಸ್ತಿ, ತ್ಯಾಜ್ಯ ನಿರ್ವಹಣೆ ಸಮಸ್ಯೆ, ಎಂಜಿಎನ್ಆರ್.ಇಜಿಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿಸಿದ 78 ವರ್ಗಗಳ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದು.ಅಲ್ಲದೆ ಚುನಾಯಿತ ಜನಪ್ರತಿನಿಧಿಗಳ ವಿವರಗಳು, ಅಧಿಕಾರಿ, ಸಿಬ್ಬಂದಿ ವಿವರಗಳು, ಪೂರ್ಣಗೊಂಡ ಗ್ರಾಮ ಪಂಚಾಯತಿ ಸಭೆಗಳ ನಡುವಾಳಿಗಳು, ಗ್ರಾಮ ಪಂಚಾಯತಿಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಟೆಂಡರ್ ಗಳು ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು, ಆರ್.ಟಿ.ಐ ದಾಖಲೆಗಳು ಲಭ್ಯವಾಗಲಿದೆಎಂದರು.
ಸ್ವಾಧೀನ ಪ್ರಮಾಣ ಪತ್ರ, ರಸ್ತೆ ಅಗೆಯುವುದಕ್ಕಾಗಿ ಅನುಮತಿ, ಕೃಷಿ ಕೈಗಾರಿಕಾ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ನರೇಗಾ ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಹೊಸ ಅಥವಾ ಅಸ್ತಿತ್ವದಲ್ಲಿರುವ ದೂರ ಸಂಪರ್ಕ ಮೂಲ ಸೌಕರ್ಯ, ಗೋಪುರಕ್ಕೆ ಅನುಮತಿ ಓವರ್ ಗ್ರೌಂಡ್ ಕೇಬಲ್ ಮೂಲ ಸೌಕರ್ಯ, ಭೂಗತ ಕೇಬಲ್ ಮೂಲ ಸೌಕರ್ಯ ಗಳ ಅನುಮಿತಿ, 9 / 11ಎ, ನಮೂನೆ 11 ಬಿ ಸೇರಿ ಎಲ್ಲಾ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು.
ವ್ಯಾಟ್ಸ್ ಆ್ಯಪ್ ನಲ್ಲಿ ಚಾಟ್ ಹೇಗೆ ಮಾಡಬೇಕು?
ನಿಮ್ಮಮೊಬೈಲ್ ನಲ್ಲಿ ಇಲಾಖೆಯ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ 8277506000 ಅನ್ನು ಸೇವ್ ಮಾಡಿಕೊಂಡು ಚಾಟ್ ಆರಂಭಿಸಿದರೆ ಮೊದಲಿಗೆ ಭಾಷೆಯ ಆಯ್ಕೆ ನಂತರ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ತಾನಾಗಿಯೇ ಕೆಲ ಆಯ್ಕೆಗಳು ಆರಂಭವಾಗುತ್ತಾ ಸಾಗುತ್ತದೆ. ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಹಾಗೂ ಗ್ರಾಮ ಆಯ್ಕೆ ಮಾಡಿಕಂಡು ನೀವು ಬಯಸುವ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು ಅಲ್ಲಿನ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು.