Govt approves of Nano DAP ರೈತರಿಗೆ ಗುಡ್ ನ್ಯೂಸ್- ನ್ಯಾನೋ ಯೂರಿಯಾನಂತರ ಈಗ ನ್ಯಾನೋ ಡಿಎಪಿ ರೈತರಿಗೆ ಸಿಗಲಿದೆ. ಹೌದು, ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬಳಕೆ ಹೆಚ್ಚಾಗಿದ್ದರಿಂದ ರೈತರಿಗೆ ಅನುಕೂಲವಾಗಲೆಂದು ನ್ಯಾನೋ ಡಿಎಪಿ ತರುತ್ತಿದೆ. ಡಿಎಪಿಗಾಗಿ ರೈತರು ಮಾರುಕಟ್ಟೆಯಲ್ಲಿ ಗಂಟೆಗಟ್ಟಲೇ ಕಾಯಬೇಕಿಲ್ಲ, ಡಿಎಪಿ ಮನೆಗೆ ಸಾಗಿಸಲು ಪರದಾಡುವ ಅಗತ್ಯವೂ ಇಲ್ಲ. ಯಾರ ಸಹಾಯವೂ ಇಲ್ಲದೆ ಡಿಎಪಿ ದರಕ್ಕಿಂದ ಅರ್ಧ ದರದಲ್ಲಿ ನ್ಯಾಯೋ ಡಿಎಪಿ ಸಿಗುತ್ತದೆ. ಏನಿದು ನ್ಯಾನ್ಯೋ ಡಿಎಪಿ? ಇದರ ಬೆಲೆ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
2021 ರಲ್ಲಿ ಮಾರುಕಟ್ಟೆಯಲ್ಲಿ ನ್ಯಾನೋ ಯೂರಿಯಾವನ್ನು ಪರಿಚಯಿಸಲಾಗಿದೆ. ಇಫ್ಕೋ ಸಂಸ್ಥೆ ತಯಾರಿಸಿದ ಲಿಕ್ವಿಡ್ ನ್ಯಾನೋ ಯೂರಿಯಾವನ್ನುಪರಿಚಯಿಸಲಾಯಿತು. ಇದಕ್ಕೆ ರೈತರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯೂರಿಯಾ ಚೀಲಗಳ ಬದಲಾಗಿ ಲಿಕ್ವಿಡ್ ನ್ಯಾನೋ ಯೂರಿಯಾವನ್ನು ರೈತರು ಸುಲಭವಾಗಿ ಖರೀದಿಸುತ್ತಿದ್ದಾರೆ.
Govt approves of Nano DAP ನ್ಯಾನೋ ಡಿಎಪಿ ಹೇಗಿರಲಿದೆ?
ನ್ಯಾನೋ ಯೂರಿಯಾದಂತೆ ಈಗ ನ್ಯಾನೋ ಡಿಎಪಿಯನ್ನು ಕೇಂದ್ರ ಸರ್ಕಾರವು ರೈತರಿಗೆ ಪರಿಚಯಿಸಲು ಮುಂದಾಗಿದೆ. ನ್ಯಾನೋ ಡಿಎಪಿ ಸಹ ಲಿಕ್ವಿಡ್ ರೂಪದಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಅಂದರೆ ಮುಂಗಾರು ಆರಂಭವಾಗುವದರೊಳಗೆ ನ್ಯಾನೋ ಲಿಕ್ವಿಡ್ ಡಿಎಪಿ ತರಲು ಕೇಂದ್ರ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ.
ಇದನ್ನೂ ಓದಿ : ಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ
ಈ ಕುರಿತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಆತೆ ಸಚಿವ ಮನ್ ಸಖ್ ಮಾಂಡವಿಯಾ ಟ್ವಿಟ್ ಮಾಡಿದ್ದಾರೆ. ನ್ಯಾನೋ ಯೂರಿಯಾ ನಂತರ ನ್ಯಾನೋ ಡಿಎಪಿಗೂ ಅನುಮೋದನೆ ನೀಡಲಾಗಿದೆ ಎಂದು ಟ್ವಿಟ್ ನಲ್ಲಿ ತಿಳಿಸಿದ್ದಾರೆ.
ನ್ಯಾನೋ ಡಿಎಪಿ ಬೆಲೆ ಎಷ್ಟು? (Nano DAP price)
ಒಂದು ಚೀಲದ ಡಿಎಪಿ ಬೆಲೆ 1350 ರೂಪಾಯಿ ಇದೆ. ಆದರೆ ಅದೇ ಈಗ ನ್ಯಾನೋ ಡಿಎಪಿ ಲಿಕ್ವಿಡ್ 500 ಎಂ.ಎಲ್ ಅಂದರೆ ಅರ್ಧ ಲೀಟರ್ ನಲ್ಲಿ ಬರುತ್ತಿದೆ. ಇದರ ಬೆಲೆಯನ್ನು 600 ರೂಪಾಯಿ ನಿಗದಿಪಡಿಸಲಾಗಿದೆ. 500 ಮಿ. ಲೀಟರ್ ದ್ರವರೂಪದ ಡಿಎಪಿ ಒಂದು ಚೀಲದ ಸಮ ಎಂದು ಟ್ವಿಟ್ ಮಾಡಿದ್ದಾರೆ.
ಭಾರತ ದೇಶದಲ್ಲಿ ಯೂರಿಯಾ ನಂತರಅತೀ ಹೆಚ್ಚು ಬಳಕೆಯಾಗುವ ಗೊಬ್ಬರ ಡಿಎಪಿ ಆಗಿದೆ. ಹಾಗಾಗಿ ಇಫ್ಕೋ ಕಂಪನಿಯೂ ಈ ನ್ಯಾನೋ ಲಿಕ್ಟಿಡ್ ಡಿಎಪಿಯನ್ನು ತಯಾರಿಸುತ್ತಿದೆ.
ನ್ಯಾನೋ ಯೂರಿಯಾ ಎಂದರೇನು? What is Nano Urea)
ನ್ಯಾನೋ ಯೂರಿಯಾದ ದ್ರಾವಣ ರೂಪದ ಯೂರಿಯಾವಾಗಿದೆ. ಕೃಷಿಯಲ್ಲಿ ಸಸಿಗಳ ಪೋಷಣೆಗೆ ಅವಶ್ಯಕತವಾದ ಪೋಷಕಾಂಶಳ ತಲುಪಿಸಲು ಇಫ್ಕೋ ಸಂಸ್ಥೆಯು ಈ ಮಾದರಿ ಯೂರಿಯಾವನ್ನು ಪರಿಚಯಿಸಿದೆ. ನ್ಯಾನೋ ಯೂರಿಯಾ ಬಳಕೆಯು ಪರಿಸರ, ಜಾಗತಿಕ ತಾಪಮಾನ, ಉತ್ತಮ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟದ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ.
ನ್ಯಾನೋ ಯೂರಿಯಾ ಹೇಗೆ ಕೆಲಸ ಮಾಡುತ್ತದೆ (How to work Nano urea)
ಯೂರಿಯಾದಂತೆ ಇದು ಮಣ್ಣಿನಲ್ಲಿ ಉಳಿಯದೆ ಸಂಪೂರ್ಣವಾಗಿ ಬಳಕೆಯಾಗುತ್ತದೆ. ಯೂರಿಯಾ ಗೊಬ್ಬರವೂ ಶೇ. 46 ಸಾರಜನಕವನ್ನು ಒಳಗೊಂಡಿರುತ್ತದೆ.
ನ್ಯಾನೋ ಯೂರಿಯಾವನ್ನು ಕೀಟನಾಶಕಗಳು ಮತ್ತುಶಿಲೀಂಧ್ರನಾಶಕಗಳ ಜತೆಗೆ ಸುಲಭವಾಗಿ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು. ಮಳೆ ಕಡಿಮೆಯಾಗಿ ಮಣ್ಣಿನಲ್ಲಿ ತೇವಾಂಶ ಕೊರತೆ ಇದ್ದ ಸಂದರ್ಭದಲ್ಲಿ ನ್ಯಾನೋ ಯೂರಿಯಾ ಬಳಸಬಹುದು.
ರಸಗೊಬ್ಬರ ಮತ್ತು ಕ್ರಿಮಿನಾಶಕಗಳು ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಇಫ್ಕೋ ನ್ಯಾನೋ ಯೂರಿಯಾ ಮಣ್ಣು ಮತ್ತು ಭೂಮಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ.