ನಿಮ್ಮ ಜಮೀನನ ಪಟ್ಟಾ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

Land patta document ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಖಾತಾ / ಪಟ್ಟಾ ಪುಸ್ತಕದ ಪ್ರತಿಯನ್ನು ಕೇವಲ ಒಂದೇ ನಿಮಿಷದಲ್ಲಿ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ

ಹೌದು, ಕಂದಾಯ ಇಲಾಖೆಯು ರೈತರಿದೆ ಜಮೀನಿಗೆ ಸಂಬಂಧಸಿದಿ ಎಲ್ಲಾ ದಾಖಲೆಗಳನ್ನು ಸುಲಭವಾಗಿ ಪಡೆದುಕೊಳ್ಳಲು ಈ ವ್ವವಸ್ಧೆ ಮಾಡಿದೆ. ಅಂದರೆ, ಜಮೀನಿಗೆ ಸಂಬಂಧಿಸಿದ ಪಹಣಿ,(ಆರ್.ಟಿ.ಸಿ), ಮುಟೇಶನ್, ಪೌತಿ ಖಾತೆ, ಮೋಜಿನಿ, ಹಳೆಯ ಪಹಣಿ, ಪೋಡಿ ಸೇರಿದಂತೆ ಇನ್ನಿತರ ದಾಖಲೆಗಳಿಗಾಗಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿದೆ. ಏಕೆಂದರೆ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಲು ಹಾಗೂ ಜಮೀನಿನ ದಾಖಲೆ ಕುರಿತಂತೆ ಆಗಾಗ ಬದಲಾವಣೆಯಾಗುವ ಮಾಹಿತಿಗಳನ್ನು ನೋಡಲು ಈಗ ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ.

ಕಂದಾಯ, ತಹಶೀಲ್ದಾರ ಕಚೇರಿಗಳಲ್ಲಿಯೂ ಸರಿದಿಯಲ್ಲಿ ನಿಂತು ದಾಖಲೆ ಪಡೆಯಬೇಕಿಲ್ಲ.ಮನೆಯಿಂದಲೇ ತಮ್ಮ ಬಳಿ ಇರುವ ಮೊಬೈಲ್ ನಲ್ಲೇ ದಾಖಲೆಗಳನ್ನು ವೀಕ್ಷಿಸಬಹುದು. ಇತ್ತೀಚೆಗೆ ಸರ್ಕಾರವು ರೈತರು ಅನುಕೂಲವಾಗಲೆಂದು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಜಮೀನಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಿದೆ.

Land patta document ಜಮೀನಿನ ಖಾತಾ / ಪಟ್ಟಾ ಪ್ರತಿ ಪುಸ್ತಕ ಪಡೆಯುವುದು ಹೇಗೆ?

ಜಮೀನಿಗೆ ಸಂಬಂಧಿಸಿದ ಖಾತಾ ಪ್ರತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ವೀಕ್ಷಿಸಲು ಈ

https://landrecords.karnataka.gov.in/service64/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ. ಭೂಮಿ ಖಾತಾ ಎಕ್ಸಟ್ರ್ಯಾಕ್ಟ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಖಾತಾ ಪ್ರತಿಯನ್ನು ಹೇಗೆ ವೀಕ್ಷಿಸಬಹುದು ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.  Search by Khata Number ಹಾಗೂ search by Survey Number ಹೀಗೆ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನಿಮಗೆ ಖಾತಾ ನಂಬರ್ ಗೊತ್ತಿಲ್ಲದಿದ್ದರೆ ನೀವು ಸರ್ಚ್ ಬೈ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.  ಆಗ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ.

ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ನಿಮ್ಮ ಗ್ರಾಮ ಸೆಲೆಕ್ಟ್ ಮಾಡಿಕೊಂಡು ಸರ್ವೆ ನಂಬರ್ ನಮೂದಿಸಿಬೇಕು. ನಂತರ Go ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್  ಹಾಗೂ ಹಿಸ್ಸಾನ ನಂಬರ್ ನಲ್ಲಿ ಸ್ಟಾರ್ * ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂಓದಿ  ನಿಮ್ಮ ಜಮೀನಿನ ಒರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಆಗ ನೀವು ನಮೂದಿಸಿ ಸರ್ವೆ ನಂಬರ್ ಅಕ್ಕಪಕ್ಕದ ಹಿಸ್ಸಾ ನಂಬರ್ ನೊಂದಿಗೆ ಪಟ್ಟಿ ಕಾಣಿಸುತ್ತದೆ. ನಿಮ್ಮ ಜಮೀನಿನ ಸುತ್ತಮುತ್ತಲಿರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ನೀವು ಅದರ ಮುಂದೆ ಖಾತಾ ನಂಬರ್ ಗಳು ಸಹ ಕಾಣಿಸುತ್ತವೆ. ನಿಮ್ಮ ಹೆಸರಿನ ಹಿಂದುಗಡೆ ಸರ್ವೆ ನಂಬರ್ ಹಾಗೂ Select ಕಾಣಿಸುತ್ತದೆ. ಅದರ ಮೇಲೆಕ್ಲಿಕ್ ಮಾಡಬೇಕು.  ಆಗ ಖಾತಾ ಡಿಟೇಲ್ಸ್ ಕೆಳಗಡೆ ನಿಮ್ಮ ಖಾತಾ ನಂಬರ್ ಅದರ ಕೆಳಗಡೆ Preview ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಸರ್ವೆನಂಬರ್ ಹಾಗೂ ನಿಮ್ಮ ಹೆಸರು ತಂದೆಯ ಹೆಸರು ಕಾಣಿಸುತ್ತದೆ. ಅದರ ಎದುರುಗಡೆ ನಿಮಗೆಷ್ಟು ಜಮೀನಿದೆ ಎಂಬುದನ್ನು ತೋರಿಸಲಾಗುವುದು.  ನಿಮ್ಮ ಜಮೀನಿನ ಆಕಾರ, ಕರ ಸೇರಿದಂತೆ ಇನ್ನಿತರ ಮಾಹಿತಿ ಕಾಣಿಸುತ್ತದೆ. ಇದೇ ನಿಮ್ಮ ಖಾತಾ ಪುಸ್ತಕ.

ಈ ಖಾತಾ ಪುಸ್ತಕವನ್ನು ನೀವು ಪ್ರಿಂಟ್ ತೆಗೆದುಕೊಳ್ಳಬೇಕಾದರೆ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ ಕೇಂದ್ರಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಪಡೆಯಬಹುದು.

Leave a Comment