ದನಕಾಯುವವರಿಗೆ ತಿಂಗಳಿಗೆ 10 ಸಾವಿರ ರುಪಾಯಿ ನೀಡುವ ಯೋಜನೆ ಮಾಹಿತಿ ಇಲ್ಲಿದೆ

Written by Ramlinganna

Published on:

Ganv Gwala scheme benefit : ದನ ಕಾಯುವವರಿಗೆ ಮಾಸಿಕ ಹತ್ತು ಸಾವಿರ ರೂಪಾಯಿ ಗೌರವ ಧನ ನೀಡುವ ವಿನೂತನ ಯೋಜನೆ ಆರಂಭಿಸಲಾಗಿದೆ.

ಹೌದು, ರೈತ ಮಿತ್ರರೇ ಈ ಯೋಜನೆ ಅಡಿಯಲ್ಲಿ ಪ್ರತಿ 70 ದನಗಳಿಗೆ ಒಬ್ಬ ದನಗಾಹಿರ ನೇಮಿಕಿ ದನಗಾಹಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹಣ ನೀಡಲಾಗುವುದು. ಹಾಗಾದರೆ ಈ ಯೋಜನೆ ಎಲ್ಲಿ ಆರಂಭವಾಗಿದೆ ಈ ಯೋಜನೆಯ ಸೌಲಭ್ಯ ದನಗಾಹಿಗಳಿಗೆ ಹೇಗೆ ಸಿಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜಸ್ಥಾನ ಸರ್ಕಾರವು ದನಗಾಹಿಗಳಿಗೆ (ಗೋ ಪಾಲಕರು) ಮಾಸಿಕ 10 ಸಾವಿರ ರೂಪಾಯಿ ಗೌರವಧನ ನೀಡುವ ವಿನೂತನ ಯೋಜನೆ ಆರಂಭಿಸಿದೆ. ಪ್ರತಿ 70 ದನಗಳಿಗೆ ಒಬ್ಬರಂತೆ ದನಗಾಹಿಗಳನ್ನು ನೇಮಕ ಮಾಡಿಕೊಳ್ಳಲಿದ್ದು, ಈ ಹಣವನ್ನು ಸರ್ಕಾರ ನೇರವಾಗಿ ನೀಡದೆ ದಾನಿಗಳು ಮತ್ತು ಸಾರ್ವಜನಿಕರ ನೆರವಿನಿಂದ ಭರಿಸಲಾಗುತ್ತದೆ.

ಈ ಯೋಜನೆ ಯಾವ ಉದ್ದೇಶಕ್ಕಾಗಿ ಆರಂಭಿಸಲಾಗುತ್ತಿದೆ?

ಗ್ರಾಮೀಣ ಮಟ್ಟದಲ್ಲಿ ಗೋಪಾಲಕರನ್ನು ಉತ್ತೇಜಿಸುವುದು ಮತ್ತು ನಿರುದ್ಯೋಗ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿ 70 ದನಗಳಿಗೆ ಒಬ್ಬ ದನಗಾಹಿ, ದನಗಳ ಸಂಖ್ಯೆ ಹೆಚ್ಚಿದರೆ 2-3 ಜನರನ್ನು ನಿಯೋಜಿಸಲಾಗುತ್ತದೆ. ಗೌರವಧನ ಪ್ರತಿ ತಿಂಗಳಿಗೆ 10,000 ರೂಪಾಯಿ ದಾನಿಗಳ ನೆರವಿನಿಂದ ನೀಡಲಾಗುವುದು.

ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಈವರೆಗೂ ಜನರು ತಾವೇ ಕೆಲವರನ್ನು ದನ ಕಾಯಲು ನೇಮಿಸುತ್ತಿದ್ದರು.ಆಧರೆ ಇದೇ ಮೊದಲ ಬಾರಿಗೆ ಸರ್ಕಾರವೇ ಇವರ ನೇಮಕಕ್ಕೆ ಮುಂದಾಗಿದೆ. ಈ ಯೋಜನೆಗೆ ಗಾವ್ ಗ್ವಾಲಾ ಯೋಜನೆ ಎಂದು ಹೆಸರಿಡಲಾಗಿದೆ.

ಯೋಜನೆ ಹೀಗಿದೆ ?

ಇದರನ್ವಯ ಹಳ್ಳಿಗಳಲ್ಲಿನ ಪ್ರತಿ 70 ದನಗಳಿಗೆ ಒಬ್ಬ ದನಗಾಹಿಯನ್ನು ನೇಮಿಸಲಾಗುತ್ತದೆ. ದನಗಳ ಸಂಖ್ಯೆ ಇದಕ್ಕಿಂತ ಹೆಚ್ಚಾದರೆ 2 ಅಥವಾ 3 ದನಗಾಹಿಗಳನ್ನು ನಿಯೋಜಿಸಲಾಗುತ್ತದೆ ಇವರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಗೌರವಧನ ನಿಗದಿಪಡಿಸಲಾಗಿದೆ. ಆದರೆ ಈ ಹಣವನ್ನು ಸರ್ಕಾರ ನೇರವಾಗಿ ಭರಿಸುವುದಿಲಲ್. ದಾನಿಗಳು  ಮತ್ತು ಸಾರ್ವಜನಿಕರಿಂದ ನೆರವು ಪಡೆದು ಭರಿಸಲಾಗುತ್ತದೆ.

Ganv Gwala scheme benefit : ಏನಿದು ಗಾವ್ ಗ್ವಾಲ ಯೋಜನೆ ?

ಈ ಯೋಜನೆಯ ಪ್ರಾಥಮಿಕ ಉದ್ದೇಶವೆಂದರೆ, ಗ್ರಾಮೀಣ ಮಟ್ಟದಲ್ಲಿ ಸಂಘಟಿತ ಗೋಪಾಲನೆಯ ಪ್ರಾಚೀನ ಪದ್ಧತಿಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಅದರ ಪಾತ್ರವನ್ನು ಬಲಪಡಿಸುವುದು. ಯೋಜನೆಯ ಜಾರಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ನಿವಾರಣೆ ಆಗುವ ವಿಶ್ವಾಸವಿದೆ. ಅಂತೆಯೇ ಉತ್ತಮ ಸಂಬಳದ ಕಾರಣ ಜನರ ಜೀವನಮಟ್ಟ ಸುಧಾರಿಸುವ ನಿರೀಕ್ಷೆಯಿದೆ.

ರೈತನ ಮಗಳಿಗೆ 11 ಚಿನ್ನ

ಗುಲ್ಬರ್ಗ ವಿಶ್ವವಿದ್ಯಾಲಯ ಜ್ಞಾನಗಂಗೆಯ 34ನೇ ಘಟಿಕೋತ್ಸವದಲ್ಲಿ ರೈತನ ಮಗಳು ಚನ್ನಮ್ಮ 11 ಚಿನ್ನದ ಪದಕ ಬಾಚಿಕೊಂಡು ಚಿನ್ನಮ್ಮಳಾದರೆ, ಕೂಲಿಕಾರನ ಮಗ ರಾಹುಲ್ 9 ಚಿನ್ನದ ಪದಕಗಳ ಬೇಟೆಯಾಡಿ ಗಮನ ಸೆಳೆದಿದ್ದಾರೆ.

ಆಳಂದದ ಚನ್ನಮ್ಮ ಬಿರಾದಾರ್, ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ವಿದ್ಯಾರ್ಥಿ, ಆಳಂದದ ಜಂಬಗಾ (ಆರ್) ಗ್ರಾಮದ ಸಣ್ಣ ರೈತ ಸದಾಶಿ ಬಿರಾದಾರ್ ಪುತ್ರಿ, ಕನ್ನಡ ವಿಭಾಗದಲ್ಲಿ 11 ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾಳೆ. ಇವರ ತಂದೆ ಸದಾಶಿವ ತಾಯಿ ಸಂಗಮ್ಮ 3 ಜಮೀನಿನಲ್ಲೇ ರೈತನಾಗಿ ಕುಟುಂಬ ನಿಭಾಯಿಸುತ್ತಿದ್ದಾರೆ. ಐವರು ಪುತ್ರಿಯರು, ಒಬ್ಬ ಪುತ್ರನ ದೊಡ್ಡ ಕುಟುಂಬ, ಕುಟುಂಬದಲ್ಲಿ ಸ್ನಾತಕೋತ್ತರ ಪದವಿ ಓದಿದವರಲ್ಲಿ ಚಿನ್ನಮ್ಮಳೇ ಮೊದಲಿಗಳು.

ಬೀದರ್ ಜಿಲ್ಲೆಯ ಮರಕುಂದಾ ಗ್ರಾಮದ ರಾಹುಲ್, ಪ್ರಾಣಿ ಶಾಸ್ತ್ರ ವಿಭಾಗದಲ್ಲಿ 9 ಚಿನ್ನ  ಬಾಚಿದ್ದಾನೆ. ತಂದೆ ವಿಜಯಕುಮಾರ ಶ್ರಮಿಕ, ಕೂಲಿನಾಲಿ, ಮಾಡಿಯೇ ಕುಟುಂಬ ಹೊರಬೇಕು. ರಾಹುಲ್ ಸದ್ಯ ಖಾಸಗಿ ಕಾಲೇಜಲ್ಲಿ ಉಪನ್ಯಾಸಕ ಕೆಲಸದಲ್ಲಿದ್ದಾರೆ. ನೆಟ್ ಪರೀಕ್ಷೆ ಬರೆದು ಪಿಹೆಚ್ ಡಿ ಮುಗಿಸಿ ಉಪನ್ಯಾಸಕನಾಗುವ ಕನಸು ಹೊತ್ತಿದ್ದಾರೆ.

Leave a Comment