Fruits id check : ರೈತರು ಈಗ ತಮ್ಮ ಫ್ರೂಟ್ಸ್ ಐಡಿಯನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಿದರೆ ಮಾತ್ರ ರೈತರಿಗೆ ಪಿಎಂ ಕಿಸಾನ್ ಹಣ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಹಣ ಜಮೆಯಾಗುತ್ತದೆ. ಹಾಗಾದರೆ ಫ್ರೂಟ್ಸ್ ರೈತರ ಐಡಿಯನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡುವುದು ಹೇಗೆ ಇದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರೈತರು ತಮ್ಮ ಫ್ರೂಟ್ಸ್ ಐಡಿಯನ್ನು ಕೇಂದ್ರ ಸರ್ಕಾರದ ಐಡಿಗೆ ಲಿಂಕ್ ಎಲ್ಲಿ ಮಾಡಿಸಬೇಕು ?
ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಅಧವಾ ಪಶು ಇಲಾಖೆಯಲ್ಲಿ ರೈತರು ಫ್ರೂಟ್ಸೇ ಐಡಿಗೆ ಲಿಂಕ್ ಮಾಡಬಹುದು.
Fruits id check ಫ್ರೂಟ್ಸ್ ಐಡಿಗೆ ಲಿಂಕ್ ಮಾಡಿಸಲು ಯಾವ ಯಾವ ದಾಖಲೆ ಬೇಕು ?
ಫ್ರೂಟ್ಸ್ ಐಡಿಗೆ ಕೇಂದ್ರ ಸರ್ಕಾರದ ಐಡಿಗೆ ಲಿಂಕ್ ಮಾಡಿಸಲು ಆಧಾರ್ ಕಾರ್ಡ್ ಇರಬೇಕು. ಮೊಬೈಲ್ ನಂಬರ್ ಇರಬೇಕು. ಜಮೀನಿನ ವಿವರ ಇರಬೇಕು.
ಫ್ರೂಟ್ಸ್ ಐಡಿಗೆ ಲಿಂಕ್ ಹೇಗೆ ಮಾಡಲಾಗುವುದು ?
ಫ್ರೂಟ್ಸ್ ಐಡಿಗೆ ಲಿಂಕ್ ಮಾಡಿಸಲು ರೈತರು ಇಕೆವೈಸಿ ಮಾಡಿಸಬೇಕು. ರೈತರ ಒಪ್ಪಿಗೆ ಬೇಕು. ಎಲ್ಲಾ ಜಮೀನುಗಳು ಫ್ರೂಟ್ಸ್ ಐಡಿಗೆ ಲಿಂಕ್ ಆಗಿರುವ ಬಗ್ಗೆ ಒಫ್ಪಿಗೆ ನೀಡಬೇಕು.
ಫ್ರೂಟ್ಸ್ ಐಡಿಗೆ ಲಿಂಕ್ ಆದರೆ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ?
ಫ್ರೂಟ್ಸ್ ಐಡಿಗೆ ಕೇಂದ್ರ ಸರ್ಕಾರದ ಐಡಿ ಲಿಂಕ್ ಆದರೆ ಪಿಎಂ ಕಿಸಾನ್ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಬೆಳೆ ವಿಮೆ ಪಾವತಿಸಿದ್ದರೆ ಬೆಳೆ ಹಾನಿಯಾದ ನಂತರ ವಿಮೆ ಹಣ ರೈತರ ಖಾತೆಗೆ ಜಮೆಯಾಗುತ್ತದೆ. ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರು ಎಂಸ್ಪಿ ಹಣ ರೈತರ ಖಾತೆಗೆ ಜಮೆಯಾಗುತ್ತದೆ.
ಹಣ ಹೇಗೆ ಜಮೆಯಾಗುತ್ತದೆ ?
ರೈತರಿಗೆ ಸರ್ಕಾರದ ಸಬ್ಸಿಡಿ ಹಣವು ನೇರವಾಗಿ ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳು ಅಥವಾ ಕೃಷಿ ತೋಟಗಾರಿಕೆ, ಕಂದಾಯ ಇಲಾಖೆ ಅಥವಾ ಪಶು ಇಲಾಖೆಯನ್ನು ಸಂಪರ್ಕಿಸಬಹುದು.
ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ
ವಿಶೇಷ ಸೂಚನೆ – ರೈತರು ತಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಹೊಂದಿರಬೇಕು.ಏಕೆಂದರೆ ಅದೇ ಮೊಬೈಲಿಗೆ ಓಟಿಪಿ ಬರುತ್ತದೆ.
ಏನಿದು ಸೆಂಟ್ರಲ್ ಐಡಿ ?
ಸೆಂಟ್ರಲ್ ಫಾರ್ಮರ್ ಐಡಿ ಅಂದ್ರೆ ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ರೈತರ ಮಾಹಿತಿಯನ್ನು ಒಂದು ಕಡೆ ಸೇರಿಸಿ ಮಾಡುವ ಒಂದು ಯುನಿಕ್ ಐಡೆಂಟಿಫಿಕೇಶನ್ ನಂಬರ್. ಇದರಿಂದ ರೈತರು ತಮ್ಮ ಜಮೀನುಗಳ ವಿವರ, ಬೆಳೆದ ಬೆಳೆಗಳು, ಪಡೆದ ಸಬ್ಸಿಡಿಗಳು ಎಲ್ಲವನ್ನು ಆನ್ಲೈನ್ ನಲ್ಲೇ ನೋಂದಾಯಿಸಬಹುದು. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಗ್ರಿ ಸ್ಟಾಕ್ ಘಟಕದ ಅಡಿಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದರಿಂದ ರೈತರಿಗೆ ಸಿಗುವ ಸೌಲಭ್ಯಗಳು ಪಾರದರ್ಶಕತೆ ಹೆಚ್ಚುತ್ತದೆ. ಇದರಿಂದ ರೈತರಿಗೆ ಸರಿಯಾದ ಸಮಯಕ್ಕೆ ನೆರವು ಸಿಗುತ್ತದೆ.
ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಪ್ಡೇಟ್ ಮಾಡಬೇಕು. ನಂತರ ಇಕೆವೈಸಿ ಅಪ್ಡೇಟ್ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ಇಕೆವೈಸಿ ಮಾಡಿಕೊಳ್ಳಬೇಕು. ನಿಮ್ಮ ಡೇಟಾ ಬಳಸಲು ಒಪ್ಪಿಗೆ ನೀಡಿ ಇ ಸೈನ್ ಮೂಲಕ ಫಾರ್ಮರ್ ಕನ್ಸೆಂಟ್ ಮಾಡಬೇಕು. ನಿಮ್ಮ ಜಮೀನಿನ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದು





