free JCB operator training ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟ್ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗೆ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ಟ್ರೇನಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
free JCB operator training ಉಚಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನ
ಆಸಕ್ತ ಅಭ್ಯರ್ಥಿಗಳು ಏ. 10 ರೊಳಗಾಗಿ ಹೆಸರು ನೋಂದಾಯಿಸಬೇಕು. ಈ ತರಬೇತಿಯು ಸ್ವ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿದ್ದು, ಮೊದಲ ಬಂದವರಿಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಜೊತೆಗೆ ಸಾಫ್ಟ್ ಸ್ಕಿಲ್ಸ್, ಯೋಗ, ಬ್ಯಾಂಕಿಂಗ್, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಆಸಕ್ತರು ಬ್ಯಾಂಕ್ ದೇಶಾಪಾಂಡೆ ಆರ್.ಸೆಟ್ ಸಂಸ್ಥೆ ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9449782425, 9483485489 ಸಂಖ್ಯೆಗೆ ಸಂಪರ್ಕಿಸುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಶೇ. 90 ರಷ್ಟು ಸಹಾಯಧನದಲ್ಲಿ ರೈತರಿಗೆ ತಾಡಪತ್ರಿ ವಿತರಿಸಲು ಅರ್ಜಿ ಆಹ್ವಾನ
ಕೃಷಿ ಇಲಾಖೆಯಿಂದ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಟಾರ್ಪಲಿನ್ (ತಾಡಪತ್ರಿ) ಗಾಗಿ (distribution tarpaulin in subsidy) ಆಳಂದ ತಾಲೂಕಿನ ಅರ್ಹ ರೈತರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಆಳಂದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ Krishi Bhagya scheme subsidy ಕೃಷಿ ಹೊಂಡಕ್ಕೆ ಅರ್ಜಿ ಆಹ್ವಾನ
ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ, ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನಗಳ ಗುಣಮಟ್ಟ ಕಾಯ್ದುಕೊಳಲು ಅನೂಕುಲವಾಗುವಂತೆ (ತಾಡಪತ್ರಿ) ಟಾರ್ಪಲಿನಗಳನ್ನು ವಿತರಿಸಲಾಗುತ್ತಿದೆ. ಸಾಮಾನ್ಯ ರೈತರಿಗೆ ಶೇ.50 ರ ಸಹಾಯಧನದಲ್ಲಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶೇ.90 ರ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
ಅರ್ಹ ರೈತರು ತಮಗೆ ಸಂಬಂಧಪಟ್ಟ ಆಳಂದ, ಖಜೂರಿ, ಮಾ.ಹಿಪ್ಪರಗಾ, ನರೋಣಾ ಹಾಗೂ ನಿಂಬರ್ಗಾ ರೈತರ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರೈತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಜಾತಿ ಪ್ರಮಾಣ ಪತ್ರ ದಾಖಲಾತಿಯೊಂದಿಗೆ 2021ರ ಏಪ್ರಿಲ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಈಗಾಗಲೇ ಇಲಾಖೆಯಿಂದ ಕಳೆದ 3 ವರ್ಷಗಳಲ್ಲಿ ತಾಡಪತ್ರಿ ಪಡೆದ ರೈತರು ಅರ್ಜಿ ಸಲ್ಲಿಸಲು ಅರ್ಹ ಇರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.