Free vaccine for sheep goats ಕೊಪ್ಪಳ ಜಿಲ್ಲೆಯ ಎಲ್ಲಾ ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಉಚಿತ ಕರಳು ಬೇನೆ ಲಸಿಕಾ ಕಾರ್ಯಕ್ರಮವನ್ನು ಜೂನ್ 5 ರಿಂದ ಆರಂಭಿಸಲಾಗಿದೆ.
ಕರಳು ಬೇನೆ ರೋಗವನ್ನು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿಯಂತೆ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಮೊದಲನೇ ಸುತ್ತಿನ ಲಿಸಕೆ ಕಾರ್ಯಕ್ರಮವು ಜೂನ್ ಮಾಹೆಯಲ್ಲಿ ಕಾರ್ಯಾರಂಭಗೊAಡಿದ್ದು, ಎರಡನೇ ಸುತ್ತಿನ ಲಸಿಕೆ ಕಾರ್ಯಕ್ರಮವು ಡಿಸೆಂಬರ್-2021 ನೇ ಮಾಹೆಯಲ್ಲಿ ಜರುಗಲಿದೆ. ಪ್ರಯುಕ್ತ 2021-22ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಕರಳು ಬೇನೆ (ಇ.ಟಿ) ಲಸಿಕೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಉಚಿತವಾಗಿ ಹಾಕಲಾಗುತ್ತಿದೆ.
Free vaccine for sheep goats ಉಚಿತ ಕರುಳು ಬೇನೆ ಲಸಿಕೆ
ಕರಳು ಬೇನೆ ರೋಗವು ಸಾಮಾನ್ಯವಾಗಿ ಕುರಿ-ಮೇಕೆಗಳಲ್ಲಿ ಕಂಡುಬರುತ್ತದೆ. ಈ ರೋಗವು ಕ್ಲಾಸ್ಟಾçಡಿಯಂ ಪರ್ಫ್ರುಂಜೇನ್ಸ್ ಎಂಬ ನಂಜುಕಾರಕ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದರಿಂದ ಕುರಿ ಮಂಕಾಗುವಿಕೆ, ಮೇವಿನತ್ತ ನಿರಾಸಕ್ತಿ, ಭೇದಿ, ಸುತ್ತಿ-ಸುತ್ತಿ ಬಿದ್ದು ಹಠಾತ ಸಾವನ್ನಪ್ಪುವುದು. ರೋಗಾಣು ಕುರಿ-ಮೇಕೆಗಳ ಕರುಳಿನಲ್ಲಿ ವೃದ್ಧಿ ಹೊಂದಿ ವಿಷ ವಸ್ತುವನ್ನು ಉತ್ಪಾದಿಸಿ ನಂಜು ಉಂಟು ಮಾಡುತ್ತದೆ.
ಇದನ್ನೂ ಓದಿ: ವನ್ಯ ಪ್ರಾಣಿಗಳಿಂದ ಹಸು, ಎತ್ತು, ಎಮ್ಮೆ ಸತ್ತರೆ 10 ಸಾವಿರದಿಂದ 75 ಸಾವಿರಕ್ಕೆ ಪರಿಹಾರ ಹಣ ಹೆಚ್ಚಳ
ರೋಗ ಕಾಣಿಸಿಕೊಂಡಲ್ಲಿ ಕುರಿ-ಮೇಕೆ ಮರಿಗಳಲ್ಲಿ ಹೆಚ್ಚಿನ ಸಾವಿನ ಪ್ರಮಾಣ ಕಂಡುಬರುತ್ತದೆ. ಆದ್ದರಿಂದ, ಜಿಲ್ಲೆಯ ಎಲ್ಲಾ ಕುರಿ-ಮೇಕೆ ಸಾಕಾಣಿಕೆದಾರ ಹಾಗೂ ರೈತರ ಕುರಿ-ಮೇಕೆಗಳಿಗೆ ಕರಳು ಬೇನೆ ಲಸಿಕೆಯನ್ನು ಹಾಕಿಸಿ, ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರು(ಆಡಳಿತ) ಡಾ.ಹೆಚ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ರೈತರಿಗೆ ಅರ್ಜಿ
ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮ ದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಒಂದು ಮಿಶ್ರ ತಳಿ ಹಸು ಅಥವಾ ಸುಧಾರಿತ ತಳಿ ಎಮ್ಮೆ ಘಟಕ ಮತ್ತು ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್. ನಾಗರಾಜ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಕುರಿ, ಮೇಕೆ, ಹಸರು ಅಥವಾ ಸುಧಾರತಿ ತಳಿ ಎಮ್ಮೆ ಘಟಕ ಸ್ಥಾಪನೆಗೆ 60 ಸಾವಿರ ರೂಪಾಯಿ ಇದ್ದು, ಇದರಲ್ಲಿ 54 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ರೈತರು ವಂತಿಕೆ ಅಥವಾ ಬ್ಯಾಂಕ್ ನಿಂದ ಸಾಲ ಪಡೆದು ಪಾವತಿಸಬಹುದು.
ಕಲಬುರಗಿ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ
2022-23ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವುದಕ್ಕಾಗಿ ಉಳಿಕೆ ಅನುದಾನದಡಿಯಲ್ಲಿ ಒಂದು ಮಿಶ್ರ ತಳಿ ಹಸು, ಸುಧಾರಿತ ಎಮ್ಮೆ, ಅಥವಾ 10 ಕುರಿ ಒಂದು ಹೋತ (10+1) ಕುರಿ ಮೇಕೆ ಘಟಕ ಸ್ಥಆಪನಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಅರ್ಹ ರೈತರ ಡಿಸೆಂಬರ್ 30 ರೊಳಗಾಗಿ ಸಂಬಂಧಪಟ್ಟ ತಾಲೂಕಿನ ಪಶು ವೈದ್ಯ ಸೇವಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರ ಗ್ರಾಮೀಣ ರೈತರು 9448636136, ಆಳಂದ ತಾಲೂಕಿನ ರೈತರು 944861345ಗೆ ಸಂಪರ್ಕಿಸಬಹುದು. ಅದೇ ರೀತಿ ಜೇವರ್ಗಿ ತಾಲೂಕಿನ ರೈತರು 9972555636 ಗೆ ಕರೆ ಮಾಡಬಹುದು. ಅಫಜಲ್ಪೂರ ತಾಲೂಕಿನ ರೈತರು 9449123571ಗೆ ಚಿತ್ತಾಪುರ ತಾಲೂಕಿನ ರೈತರು 9611732647 ಗೆ ಸಂಪರ್ಕಿಸಬಹುದು. ಇದರೊಂದಿಗೆ ಚಿಂಚೋಳಿ ತಾಲೂಕಿನ ರೈತರು 9880220932 ಹಾಗೂ ಸೇಡಂ ತಾಲೂಕಿನ ರೈತರು 9449618724 ಗೆ ಸಂಪರ್ಕಿಸಲು ಕೋರಲಾಗಿದೆ.