farmers land podi map : ರೈತರು ಮೊಬೈಲ್ ನಲ್ಲಿಯೇ ತಮ್ಮಜಮೀನಿನ ಪೋಡಿ ನಕ್ಷೆ ಪಡೆಯುವುದು ಹೇಗೆ? ಪೋಡಿ ನಕ್ಷೆಯ ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲೇ ಪಡೆಯಬಹುದು. ಜಮೀನಿನ ಸರ್ವೆ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಮಾಲಿಕರ ಹೆಸರುಗಳಿದ್ದರೆ ಆ ಜಮೀನನ್ನು ವಿಭಜಿಸಿ ಪ್ರತಿಯೊಬ್ಬ ಮಾಲಿಕರಿಗೂ ಪ್ರತ್ಯೇಕ ಹಿಸ್ಸಾ ಸಂಖ್ಯೆ, ಪ್ರತ್ಯೇಕ ಪಹಣಿ ನೀಡುವುದನ್ನು ಪೋಡಿ ಎನ್ನುವರು.
ಪೋಡಿ ಏಕೆ ಬೇಕು?
ಅವಿಭಕ್ತ ಕುಟುಂಬಗಳಲ್ಲಿ ಜಮೀನು ವಿಭಜನೆಯಾಗಿದ್ದರೆ ಜಮೀನು ಖಾತೆಗಳು ಜಂಟಿಯಾಗಿರುತ್ತವೆ. ಸಹೋದರ ನಡುವಿನ ವ್ಯಾಜ್ಯಗಳು, ಸೂಕ್ತ ದಾಖಲೆ ಕೊರತೆ, ಅಥವಾ ಪ್ರತ್ಯೇಕ ಪಹಣಿ ಇಲ್ಲದಂತೆ ಬಹಳ ಸಮಸ್ಯೆಗಳಾಗುತ್ತವೆ. ಇದು ಜಮೀನು ಮಾರಾಟ ಮಾಡುವಾಗ, ಸಾಲ ಪಡೆಯುವಾಗ ಅಥವಾ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಮಸ್ಯೆಯಾಗುತ್ತದೆ.
farmers land podi map ಪೋಡಿ ನಕ್ಷೆಯನ್ನು ಆನ್ಲೈನ್ ನಲ್ಲಿ ಪಡೆಯುವುದು ಹೇಗೆ?
ರಾಜ್ಯ ಸರ್ಕಾರವು ರೈತರಿಗೆ ತಮ್ಮ ಜಮೀನಿನ ದಾಖಲೆಗಳನ್ನು ವೀಕ್ಷಿಸಲು ಹಾಗೂ ಪಡೆಯಲು ಆನ್ಲೈನ್ ವ್ಯವಸ್ಥೆ ಮಾಡಿದೆ. ಹೌದು, ರೈತರು ಜಮೀನಿನ ದಾಖಲೆ ಪಡೆಯಲು ಹಾಗೂ ವೀಕ್ಷಿಸಲು ಮೊಬೈಲ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ದಾಖಲೆಗಳನ್ನು ಪಡೆಯಬಹುದು.
ಮೊಬೈಲ್ ಮೂಲಕ ಜಮೀನಿನ ಪೋಡಿ ನಕ್ಷೆ ಪಡೆಯಲು ಈ
https://bhoomojini.karnataka.gov.in/Service27
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೋಜಿನಿ ಆನ್ಲೈನ್
ಎಂಬ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ಹಾಕಬೇಕು.ನಂತರ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಸಂಖ್ಯೆ ಬರುತ್ತದೆ. ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು.ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ
ಅಲ್ಲಿ ಸಹಾಯಕ್ಕಾಗಿ ವೀಜಿಯೋ ವೀಕ್ಷಿಸಿ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಬಳಕೆದಾರರ ಮಾರ್ಗದರ್ಶಿಯನ್ನು ನೋಡಿ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ಅರ್ಜಿ ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿ ಸಿಗುತ್ತದೆ ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಬೇಕು.ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ನಂತರ ಪೋಡಿ ನಕ್ಷೆಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಚೆಕ್ ಮಾಡಬಹುದು.
ಪೋಡಿಯ ಪ್ರಕಾರಗಳು?
ಪೋಡಿಯಲ್ಲಿ ಮುಖ್ಯವಾಗಿ ಮೂರು ಪ್ರಕಾರಗಳಿರುತ್ತವೆ. ತತ್ಕಾಲ್ ಪೋಡಿ, ದರಖಾಸ್ತು ಪೋಡಿ, ಆಲಿನೇಶನ್ ಪೋಡಿ ಹಾಗೂ ಮುಟೇಶನ್ ಪೋಡಿ.
ಪೋಡಿ ನಕ್ಷೆ ರೈತರಿಗೇಕೆ ಮಹತ್ವ?
ಪೋಡಿ ನಕ್ಷೆಯಿದ್ದರೆ ಮಾತ್ರ ರೈತರು ತಮ್ಮ ಜಮೀನನ್ನು ಮಾರಾಟ ಮಾಡಬುದು. ಅಥವಾ ಖರೀದಿ ಮಾಡಬಹುದು. ಬ್ಯಾಂಕುಗಳಿಂದ ಸಾಲ ಪಡೆಯಬಹುದು. ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು. ಅಂದರೆ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ ಸೇರಿದಂತೆ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು. ಕಾನೂನು ವಿವಾದಗಳಲ್ಲಿ ಪುರಾವೆಯಾಗಿ ಜಮೀನಿನ ಪೋಡಿ ನಕ್ಷೆ ಬೇಕಾಗುತ್ತದೆ. ಈಗ ಪೋಡಿ ನಕ್ಷೆ ಡಿಜಿಟಲ್ ರೂಪದಲ್ಲಿ ಸಿಗುತ್ತಿದೆ. ಹಾಗಾಗಿ ಒಮ್ಮೆ ಪಡೆದರೆ ಸಾಕು ಮತ್ತೆ ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ.
ಹೆಚ್ಚಿನ ಮಾಹಿತಿಗಾಗಿ ಈ ನಂಬರುಗಳಿಗೆ ಸಂಪರ್ಕಿಸಿ
ಜಮೀನಿನ ಪೋಡಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹೆಚ್ಚಿನ ಮಾಹಿತಿಗಾಗಿ 8277864065, 8277864067 ಗೆ ಸಂಪರ್ಕಿಸಬಹುದು.
ಜಮೀನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈಗ ರೈತರು ಆನ್ಲೈನ್ ನಲ್ಲೇ ಪಡೆಯಬಹುದು. ರೈತರಿಗೆ ಸಮಸ್ಯೆಯಾಗಬಾರದೆಂದು ರಾಜ್ಯ ಸರ್ಕಾರವು ಆನ್ಲೈನ್ ವ್ಯವಸ್ಥೆಯನ್ನು ಮಾಡಿದೆ. ರೈತರು ಸಹ ಇದರ ಪ್ರಯೋಜನ ಪಡೆಯುತ್ತಿದ್ದಾರೆ.





