union budget 2023 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಇನ್ನುಮುಂದೆ 2 ಲಕ್ಷ ರೂಪಾಯಿಯವರೆಗೆ ನಗದು ರೂಪದಲ್ಲಿ ಸಾಲ ನೀಡಲು ಅವಕಾಶ ನೀಡಲಾಗಿದೆ. ಅದೇ ರೀತಿ ನಗದು ರೂಪದಲ್ಲಿ ಮರುಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕೃಷಿಕರಿಗೆ ನೀಡುವ ಸಾಲದ ಯೋಜನೆಯ ಕ್ರೇಡಿಟ್ ಗುರಿಯನ್ನು 20 ಲಕ್ಷ ಕೋಟಿ ರೂಪಾಯಿವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಕೃಷಿಕರು ಆದ್ಯತೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು 1 ಕೋಟಿ ರೂಪಾಯಿ ರೈತರಿಗೆ ನೆರವು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ
ಇದರೊಂದಿಗೆ ಕೃಷಿಕರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪಿಎಂ ಮತ್ಸ್ಯಸಂಪದ ಯೋಜನೆ ಅಡಿಯಲ್ಲಿ ಉಪ ಯೋಜನೆಗಳನ್ನು ಘೋಷಣೆ ಮಾಡಲಾಗುವುದು. ಇದಕ್ಕಾಗಿ 6 ಸಾವಿರ ಕೋಟಿ ರೂಪಾಯಿ ಮೀಸಲು ಇಡಲಾಗುವುದು ಎಂದು ಹೇಳಿದ್ದಾರೆ.
union budget 2023 ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಪ್ರೋತ್ಸಾಹ
ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರವು ದೇಖೋ ಅಪ್ನಾ ದೇಶ್ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಎಂಎಸ್.ಎಂಇಗಳಿಗೆ ಪರಿಷ್ಕೃತ ಸಾಲ ಖಾತ್ರಿ ಯೋಜನೆಯನ್ನು ಏಪ್ರೀಲ್ 1 ರಿಂದ ಪ್ರಾರಂಭಿಸಲಾಗುವುದು. ಒಂದು ಜಿಲ್ಲೆ ಒಂದು ಉತ್ಪನ್ನ ವಸ್ತುಗಳು ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲಾಗುವುದು.
ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರಾ ಮೇಲ್ದಂಡೆಗೆ 5300 ಕೋಟಿ
ಬರಪೀಡಿತ ಪ್ರದೇಶಗಳಿಗೆ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿಗಳ ಕೇಂದ್ರ ನೆರವು ನೀಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ
ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ ನೀಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಳ
ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಲಾಗುವುದು. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು.
ಕೃಷಿ ವೇಗವರ್ಧಕ ನಿಧಿ ಸ್ಥಾಪನೆ
ಯುವ ಉದ್ಯಮಿಗಳು ಕೃಷಿ ಸ್ಟಾರ್ಟ್ ಆ್ಯಪ್ಗಳನ್ನು ಆರಂಭಿಸಲು ಉತ್ತೇಜಕ ಕ್ರಮವಾಗಿ ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಯಾವುದು ಅಗ್ಗ, ಯಾವುದು ತುಟ್ಟಿ
ಟಿವಿ, ಪ್ಯಾನಲ್ ಬಿಡಿ ಭಾಗಗಳ ಮೇಲೆ ಕಸ್ಟಮ್ ಸುಂಕವನ್ನು 2.5 ರಷ್ಟು ಕಡಿತ
ಫೋನ್, ಲ್ಯಾಪ್ ಟಾಪ್ ಹಾಗೂ ಡಿಎಸ್ಎಲ್ಆರ್ ಕ್ಯಾಮರಾಗಳ ಲೆನ್ಸ್
ಲಿಥಿಯಂ ಐಯಾನ್ ಬ್ಯಾಟರಿಗಳು
ಮೊಬೈಲ್ ಫೋನ್ ತಯಾರಿಕೆಗೆ ಬೇಕಾಗುವ ಕೆಲವು ಬಿಡುಭಾಗಗಳ ಆಮದು ಮೇಲಿನ ಕಸ್ಟಮ್ ಸುಂಕ ಕಡಿತ
ಯಾವುದು ದುಬಾರಿ
ಸಿಗರೇಟ್ ಮೇಲೆ ತೆರಿಗೆ ಶೇ. 15 ರಷ್ಟು ಏರಿಕೆ
ಚಿನ್ನ ಮತ್ತು ಪ್ಲಾಟಿನಂನಿಂದ ತಯಾರಿಸಿದ ವಸ್ತುಗಳು
ಬೆಳ್ಳಿಯಿಂದ ತಯಾರಿಸಿದ ವಸ್ತುಗಳು
ತಾಮ್ರದ ಚೂರುಅಡುಗೆ ವಿದ್ಯುತ್ ಚಿಮಣಿ ಮೇಲಿನ ಕಸ್ಟಮ್ ಸುಂಕ ಶೇ. 7.5 ರಿಂದ ಶೇ. 15 ರವರೆಗೆ ಏರಿಕೆ
ಆದಾಯ ತೆರಿಗೆ
ಆದಾಯ ತೆರಿಗೆಯಲ್ಲಿ ಬದಲಾವಣೆ ಮಾಡಲಾಗಿದೆ. 7 ಲಕ್ಷ ವರೆಗಿನ ಆದಾಯದ ಮೇಲಿನ ರಿಯಾಯಿತಿಯನ್ನು ವಿಸ್ತರಿಸಲಾಗಿದೆ. ಆದಾಯ ತೆರಿಗೆಯಲ್ಲಿ ಐದು ಸ್ಲ್ಯಾಬ್ ಗಳನ್ನು ಮಾಡಿದ್ದಾರೆ.
3 ಲಕ್ಷ ದವರೆಗೆ ಆದಾಯಕ್ಕೆ ತೆರಿಗೆ ಶೂನ್ಯ
3ರಿಂದ 6 ಲಕ್ಷ ವರೆಗೆ ಶೇ. 5 ರಷ್ಟು ತೆರಿಗೆ
6 ರಿಂದ 9 ಲಕ್ಷವರೆಗೆ ಶೇ. 10ರಷ್ಟು ತೆರಿಗೆ
9ರಿಂದ 12 ಲಕ್ಷವರೆಗೆ ಶೇ. 15 ರಷ್ಟು ತೆರಿಗೆ
12 ರಿಂದ 15 ಲಕ್ಷವರೆಗೆ ಶೇ. 20 ರಷ್ಟು ತೆರಿಗೆ
15 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದವರಿಗೆ ಶೇ. 30 ರಷ್ಟು ತೆರಿಗೆ ಇರಲಿದೆ