ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಎಕರೆ ಜಮೀನಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

farmer neighbours land check : ರೈತರು ಈಗ ತಮ್ಮ ಹೆಸರಿಗಷ್ಟೇ ಅಲ್ಲ, ತಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತ ಮಿತ್ರರೇ ಕೇವಲ ಒಂದೇ ನಿಮಿ ಷದಲ್ಲಿ ರೈತರು ತಮ್ಮ ಜಮೀನಿನ ಅಕ್ಕಪಕ್ಕದ ರೈತರಿಗಿರುವ ಜಮೀನಿನ ಮಾಹಿತಿಯನ್ನು ಪಡೆಯಬಹುದು. ಅ ಷ್ಟೇ, ಆ ಜಮೀನು ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಯನ್ನು ಸಹ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಮಾಹಿತಿ.

farmer neighbours land check ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಎಕರೆ ಜಮೀನಿದೆ ? ಹೀಗೆ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅಕ್ಕಪಕ್ಕದ ರೈತರ ಹೆಸರಿಗಿರುವ ಜಮೀನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Bhoomi Online Land Records View ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು  ನಿಮ್ಮ (District) ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು (Taluka) ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ (Hobli) ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಊರು (village) ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು ನಂತರ Go ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ surnoc ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿಯೂ ಸಹ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ.  ಇದಾದ ನಂತರ ನೀವು ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಂದರೆ ನಿಮ್ಮ ಜಮೀನಿನ ಪಹಣಿ  ಕಾಣಿಸುತ್ತದೆ. ಅಲ್ಲಿ ನೀವು ನಮೂದಿಸಿ ಸರ್ವೆ ನಂಬರ್ ಅಕ್ಕಪಕ್ಕದ ಮಾಲಿಕರ ಹೆಸರು ಕಾಣಿಸುತ್ತದೆ.

ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯೂಕಾಣಿಸುತ್ತದೆ. ಇದರೊಂದಿಗೆ ಆ ಜಮೀನಿನ ಮಾಲಿಕರೊಂದಿಗೆ ಯಾವ ಯಾವ ರೈತರ ಹೆಸರು ಜಂಟಿಯಾಗಿದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಆ ಜಮೀನಿಗೆ ಮೊಟೇಶನ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇಲ್ಲಿ ಕಾಣಿಸುತ್ತದೆ. ಇದರೊಂದಿಗೆ ಮುಟೇಶನ್ ನಂಬರ್ ಯಾವ ವರ್ಷದಲ್ಲಿ ಮುಟೇಶನ್ ಆಗಿದೆ ಎಂಬ ಮಾಹಿತಿ ಕಾಣಿಸಲಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಅಥವಾ ಹಿಂಗಾರು ಹಂಗಾಮಿಗೆ ಯಾವ ರೈತರು ಯಾವ ಬೆಳೆ ಹಾಕಿದ್ದರು ಎಂಬ ಮಾಹಿತಿಯೂ ರೈತರಿಗೆ ಕಾಣಿಸಲಿದೆ.

ಒಂದು ವೇಳೆ ಜಮೀನಿನ ಮಾಲಿಕರು ಅಂದರೆ ಅದೇ ರೈತರಾಗಲಿ ಅಥವಾ ಅಕ್ಕಪಕ್ಕದ ರೈತರಾಗಲಿ ಸಾಲ ಪಡೆದಿದ್ದಾರೆಯೇ ಒಂದು ವೇಳೆ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಬೆಳೆ ಸಾಲ ಪಡೆದಿದ್ದಾರೆ ಎಷ್ಟು ಬೆಳೆ ಸಾಲ ಪುಡೆದಿದ್ದಾರೆ ಯಾವ ಬ್ಯಾಂಕಿನಿಂದ ಬೆಳೆ ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ರೈತರಿಗೆ ಕಾಣಿಸುತ್ತದೆ.

ಇದನ್ನೂ ಓದಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವ ಪಾಠದಿಂದ ಯಾವ ಪ್ರಶ್ನೆ ಬರಲಿದೆ? ಇಲ್ಲಿದೆ ಮಾಹಿತಿ

ಮೇಲೆ ತಿಳಿಸಿದ ಮಾಹಿತಿಯಂತೆ ಸುಲಭವಾಗಿ ನೀವು ನಿಮ್ಮ ಎಲ್ಲಾ ಸರ್ವೆ ನಂಬರ್ ಅಕ್ಕಪಕ್ಕದ ರೈತರ ಹೆಸರು,ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದೆಲ್ಲಾ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಪಡೆಯಬಹುದು.

ಇದಕ್ಕಾಗಿ ರೈತರಿಗೆ ಹೆಚ್ಚು ಜ್ಞಾನದ ಅವಶ್ಯಕತೆಯೂ ಇಲ್ಲ. ಕೇವಲ ಮೊಬೈಲ್ ಬಳಕೆ ಮಾಡುವುದು ಬಂದರೆ ಸಾಕು, ಮೇಲೆ ತಿಳಿಸಿದ ಮಾಹಿತಿಯನ್ನು ಒಂದೊಂದಾಗಿ ಅತೀ ಸುಲಭವಾಗಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ಮೊಬೈಲ್ ನಲ್ಲಿ ಪಡೆಯಬಹುದು.

Leave a Comment