ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ

Written by Ramlinganna

Published on:

farmer land map check : ರೈತ ಬಾಂಧವರಿಗೆ ಇಲ್ಲಿದೆ ಗುಡ್ ನ್ಯೂಸ್, ಈಗ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ತಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು, ರೈತರಿಗೆ ತಮ್ಮ ಜಮೀನಿಗೆ ಹೋಗಲು ಹಾಗೂ ಅಗತ್ಯ ಉಪಕರಣಗಳನ್ನು ಸಾಗಿಸಲು ಹಾಗೂ ವಾಹನ ಜಮೀನುವರೆಗೆ ಗಲು ಕಾಲುದಾರಿ ಮತ್ತು ಬಂಡಿದಾರಿ ಬೇಕಾಗುತ್ತದೆ. ಹಿಂದೆ ನಿಮ್ಮ ಹೊಲಕ್ಕೆ ಅಥವಾ ಜಮೀನಿಗೆ ಹೋಗಲು ಕಾಲುದಾರಿ ಇತ್ತೋ ಅದನ್ನು ಈಗ ಮುಚ್ಚುಹೋಗಿದೆಯೋ ಅಥವಾ ಅಕ್ಕಪಕ್ಕದ ಜಮೀನಿನ ಮಾಲಿಕರು ಒತ್ತುವರಿ ಮಾಡಿದ್ದಾರೆಯೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

farmer land map check  ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ

ರೈತ ಬಾಂಧವರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅವರ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://www.landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ (Revenue Maps Online) ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನಿಮ್ಮ ಜಮೀನು ಯಾವ ತಾಲೂಕಿನಲ್ಲಿದೆಯೋ ಆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.  ಆಗ ನೀವು ಆಯ್ಕೆ ಮಾಡಿದ ಹೋಬಳಿಯಲ್ಲಿರುವ ಊರುಗಳು (ಗ್ರಾಮಗಳು) ಕಾಣಿಸುತ್ತವೆ. ಅಲ್ಲಿ ನಿಮ್ಮ ಊರಿನ ಮಂದೆ ಪಿಡಿಎಫ್ ಫೈಲ್ ಬಾಕ್ಸ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನ ಮ್ಯಾಪ್ ಓಪನ್ ಆಗುತ್ತದೆ. (ಒಂದು ವೇಳೆ ಓಪನ್ ಆಗದಿದ್ದರೆ Maps Types ನಲ್ಲಿ Cadastral Maps) ಆಯ್ಕೆ ಮಾಡಿಕೊಳ್ಳಬೇಕು.  ನಂತರ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿಬೇಕು. ಆಗ ನಿಮಗೆ ನಿಮ್ಮ ಊರಿನ ಮ್ಯಾಪ್ ಕಾಣಿಸುತ್ತದೆ. ಆಗ ನಿಮ್ಮ ಊರು ಹಾಗೂ ನಿಮ್ಮ ಊರಿನ ಸುತ್ತಮುತ್ತಲಿರುವ ಜಮೀನುಗಳಿಗೆ ಹೋಗುವ ದಾರಿಗಳು ಕಾಣಿಸುತ್ತವೆ. ಕಾಲುದಾರಿ, ಬಂಡಿದಾರಿ, ಹಳ್ಳಕೊಳ್ಳಗಳ, ಮಾಹಿತಿ ಬೆಟ್ಟ ಗುಡ್ಡಗಳ ಮಾಹಿತಿಯೂ ಕಾಣಿಸುತ್ತದೆ.

ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್ ನಿಮ್ಮ ಜಮೀನಿನ ಇ ಸ್ಕೇಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ

ಮ್ಯಾಪ್ ಪಕ್ಕದಲ್ಲಿ ಮ್ಯಾಪ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ವಿವರಣೆ ನೀಡಲಾಗಿರುತ್ತದೆ. ನಿಮ್ಮ ಗ್ರಾಮದ ಗಡಿರೇಖೆ, ಸರ್ವೆ ನಂಬರ್ ಗಡಿ ರೇಖೆ, ಹಿಸ್ಸಾ ನಂಬರ್ ಗಳು ಕಾಣಿಸುತ್ತದೆ. ನಿಮ್ಮ ಜಮೀನಿಗೆ ಕಾಲುದಾರಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ. ನಿಮ್ಮ ಜಮೀನಿಗೆ ಕಾಲುದಾರಿಯೋ ಇಲ್ಲವೋ ಇದರೊಂದಿಗೆ ಬಂಡಿದಾರಿ ಯಾವ ಮಾರ್ಗದಲ್ಲಿ ಹೋಗುತ್ತಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಅಲ್ಲಿ ನೀಡಲಾಗಿರುವ ಗೆರೆಗಳ ಆಧಾರದ ಮೇಲೆ ನೀವು ನಿಮ್ಮ ಸರ್ವೆ ನಂಬರ್ ಎಲ್ಲಿದೆ ನೋಡಿಕೊಂಡು ಅಲ್ಲಿ ಕಾಲುದಾರಿ ಅಥವ ಬಂಡಿದಾರಿ ಹೇಗೆ ಹೋಗುತ್ತಿದೆ ಎಂಬುದನ್ನು ಸುಲುಭವಾಗಿ ಚೆಕ್ ಮಾಡಬಹುದು.

ಇದರೊಂದಿಗೆ ನಿಮ್ಮ ಊರಿನ ಸುತ್ತಮುತ್ತ ಕೆರೆ, ನೀರು ಹರಿಯುವ ದಿಕ್ಕು, ಬಾವಿ ಎಲ್ಲೆಲ್ಲಿ ಇತ್ತು ಎಂಬ ಮಾಹಿತಿ ಕಾಣಿಸುತ್ತದೆ. ಹಿಂದೆ ದೇವಸ್ಥಾನಗಳು ಎಲ್ಲೆಲ್ಲಿ ಇತ್ತು. ದೊಡ್ಡ ದೊಡ್ಡ ಮರಘಲು, ಈಚಲು ಮರಗಳು ಇದ್ದರೆ ಎಲ್ಲಿದ್ದವು ಎಂಬ ಮಾಹಿತಿ ಅಲ್ಲಿ ಕಾಣಿಸುತ್ತದೆ.

ಒಂದು ವೇಳೆ ನಿಮ್ಮ ಜಮೀನಿಗೆ ಕಾಲುದಾರಿ ಬಂಡಿದಾರಿ ಮ್ಯಾಪ್ ನಲ್ಲಿ ಕಾಣಿಸುತ್ತಿದ್ದ್ದರೆ ಈಗ ಮುಚ್ಚಲಾಗಿದ್ದರೆ ನೀವು ಜಮೀನು ಒತ್ತುವರಿಯಾಗಿದೆಯೆಂದು ಸಂಬಂಧಿಸಿದ ಅಧಿಕಾರಿಗಳಿಗೂ ದೂರು ನೀಡಬಹುದು. ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಅದಿಕಾರಿಗಳು ನಿಮ್ಮ ಜಮೀನಿಗೆ ಬಂದು ಸಮಸ್ಯೆಗಳನ್ನು ಬಗೆಹರಿಸುತ್ತಾರೆ.

Leave a Comment