ಐದು ದಿನ ಮುಂಚೆ ಮಳೆ ಮಾಹಿತಿ ಬೇಕೆ? ಇಲ್ಲಿದೆ ಮಾಹಿತಿ

Written by Ramlinganna

Updated on:

Five days advance weather report ರೈತರು, ಸಾಮಾನ್ಯ ಜನರು ಈಗ ಮನೆಯಲ್ಲಿಯೇ ಕುಳಿತು ಐದು ದಿನಗಳ ಮೊದಲೇ ಮಳೆಯ ಮಾಹಿತಿ ಪಡೆಯಬಹುದು. ಹೌದು, ಮೇಘದೂತ್ ಆ್ಯಪ್ ಸಹಾಯದಿಂದ ರೈತರು ಐದು ದಿನ ಮುಂಚೆ ಮಳೆ ಮಾಹಿತಿ ಪಡೆಯಬಹುದು.

ರೈತರಿಗೆ ಸರಿಯಾದ ಸಮಯಕ್ಕೆ ಮಳೆಯ ಮಾಹಿತಿ ಸಿಗದೆ ಬೆಳೆ ಬಿತ್ತನೆಯಾಗಲಿ, ಕಟಾವು ಆಗಲಿ ಇನ್ನಿತರ ಕೃಷಿ ಚಟುವಟಿಕೆಗೆ ಸಮಸ್ಯೆಯಾಗುತ್ತಿರುತ್ತದೆ. ಕೆಲವು ಸಲ ಮಳೆಯ ಮುನ್ಸೂಚನೆ ಗೊತ್ತಾಗದೆ ಹಾನಿಯೂ ಅನುಭವಿಸುತ್ತಿರುತ್ತಾರೆ. ರೈತರಿಗೆ  ಹಾನಿಯಾಗಬಾರದು ಹಾಗೂ ಕೃಷಿ ಚಟುವಟಿಕೆಗೆ ತೊಂದರೆಯಾಗಬಾರದೆಂದು  ಸರ್ಕಾರವು ಮೇಘಧೂತ್ ಎಂಬ ಆ್ಯಪ್ ನ್ನು ಸಿದ್ದಪಡಿಸಿದೆ.

ಈ ಮೇಘದೂತ್ ಆ್ಯಪ್ ರೈತರಿಗೆ ಐದು ದಿನಗಳ ಮುಂಚಿತವಾಗಿ ಯಾವಾಗ ಮಳೆಯಾಗುತ್ತದೆ ಹವಾಮಾನದ ಸ್ಥಿತಿಗತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಮೊಬೈಲ್ ನಲ್ಲೇ ನೀಡುತ್ತದೆ. ಇದಕ್ಕಾಗಿ ರೈತರು ಮೇಘದೂತ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡರೆ ಸಾಕು, ಯಾರಿಗೂ ಕರೆ ಮಾಡಬೇಕಿಲ್ಲ, ಯಾವ ದಿನಪತ್ರಿಕೆಯೂ ಓದಬೇಕಿಲ್ಲ. ಮೊಬೈಲ್ ನಲ್ಲೇ ಮಳೆಯ ಮುನ್ಸೂಚನೆಯನ್ನು ಪಡೆಯಬಹುದು.

ಮೇಘದೂತ್ ಆ್ಯಪ್ ನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಸಂಶೋಧನಾ ಮಂಡಳಿ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ. ಇದು ವಿಶೇಷವಾಗಿ ರೈತರಿಗೆ ಹೆಚ್ಚು ಉಪಯೋಗಕಾರಿಯಾಗಿದೆ ಎಂದೇ ಹೇಳಬಹುದು.

 Five days advance weather report ಮೇಘದೂತ್ ಆ್ಯಪ್ ಏನೇನು ಮಾಹಿತಿ ನೀಡುತ್ತದೆ?

ಮೇಘದೂತ್ ಆ್ಯಪ್ ರೈತರಿಗೆ ಐದು ದಿನಗಳ ಮುಂಚಿತವಾಗಿ ಮಳೆಯ ಮುನ್ಸೂಚನೆ ನೀಡುತ್ತದೆ. ಆ ಭಾಗದಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದ ವರದಿ ನೀಡುತ್ತದೆ. ಗಾಳಿಯು ಯಾವ ದಿಕ್ಕೆ ಬೀಸುತ್ತಿದೆ. ಮಳೆಯಾದರೆ ಮಳೆಯ ಪ್ರಮಾಣ ಎಷ್ಟಿರುತ್ತದೆ ಎಂಬ ಮಾಹಿತಿಯನ್ನು ಪ್ರತಿನಿತ್ಯ ರೈತರಿಗೆ ನೀಡುತ್ತದೆ.

ಮೇಘದೂತ್ ಆ್ಯಪ್ ಯಾವ ಟಾವ ಭಾಷೆಗಳಲ್ಲಿ ಲಭ್ಯವಿದೆ?

ಮೇಘದೂತ್ ಆ್ಯಪ್ ಕನ್ನಡ, ಹಿಂದಿ, ತಮಿಳು, ತೆಲಗು, ಮಲಯಾಳಂ, ಮರಾಠಿ, ಪಂಜಾಬಿ, ಬಂಗಾಲಿ, ಓಡಿಯಾ ಸೇರಿದಂತೆ ದೇಶದ 12 ಭಾಷೆಗಳಲ್ಲಿಲಭ್ಯವಿದೆ. ರೈತರು ಕನ್ನಡದಲ್ಲಿಮಾಹಿತಿ ನೋಡಬೇಕಾದರೆ ಅಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ಹಿಂದಿಯಲ್ಲಿ ಮಾಹಿತಿ ಪಡೆಯಬೇಕಾದರೆ ಹಿಂದೆ ಭಾಷೆ ಆಯ್ಕೆ ಮಾಡಿಕೊಳ್ಳಬಹುದು.

ಮೇಘದೂತ್ ಆ್ಯಪ್ ನ್ನು ಹೀಗೆ ಡೌನ್ಲೋಡ್ ಮಾಡಿಕೊಳ್ಳಬಹುದು?

ರೈತರು ತಮ್ಮ ಮೊಬೈಲ್ ನಲ್ಲೇ ಮೇಘದೂತ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಈ

https://play.google.com/store/apps/details?id=com.aas.meghdoot&hl=en_IN&gl=US

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ರೈತರಿಗೆ ಮತ್ತೊಂದು ಪೆಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು.ಆಗ ಮೊಬೈಲ್ ನಲ್ಲಿ ಮೇಘದೂತ್ ಆ್ಯಪ್ ಇನ್ಸಟಾಲ್ ಆಗುತ್ತದೆ. ಓಪನ್ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಭಾಷೆಯಲ್ಲಿ ಮಾಹಿತಿ ನೋಡಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.  ಭಾಷೆ ಆಯ್ಕೆ ಮಾಡಿಕೊಂಡ ನಂತರ ಮುಂದೆ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಯಾವ ಮಾಹಿತಿ ಪಡೆಯುತ್ತೀರಿ ಎಂಬ ಮೆಸೆಜ್ ಕಂಡುಬರುತ್ತದೆ. ಮತ್ತೆ ಮುಂದೆ ಮೇಲೆ ಕ್ಲಿಕ್ ಮಾಡಿ ಮೇಘದೂತ್ ಆ್ಯಪ್ ಲಾಗಿನ್ ಆಗಬೇಕಾಗುತ್ತದೆ.

ಇಲ್ಲಿ ರೈತರು ತಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಲಾಗಿನ್ ಮೇಲೆ ಒತ್ತಬೇಕು. ನಂತರ ಅಲೋ ಮೇಘದೂತ್ ಆ್ಯಕ್ಸೆಸ್ ಮೆಸೇಜ್ ಬರುತ್ತದೆ. ಅಲ್ಲಿ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜಿಲ್ಲೆ, ಸದ್ಯ ಕನಿಷ್ಠತಾಪಮಾನ, ಯಾವ ದಿನಾಂಕದಂದು ಮಳೆ ಬರುತ್ತದೆ, ಗಾಳಿಯ ವೇಗ ಎಷ್ಟಿದೆ ಸೇರಿದಂತೆ ಇನ್ನಿುತರ ಮಾಹಿತಿ ಕಾಣುತ್ತದೆ.

ಇದನ್ನೂ ಓದಿ : ಅನ್ನಭಾಗ್ಯದ ಹಣ ನಿಮಗೆಷ್ಚು ಜಮೆ ಆಗಿದೆ? ಚೆಕ್ ಮಾಡಿ

ಮೇಘದೂತ್ ಆ್ಯಪ್ ಸಹಾಯದಿಂದ ರೈತರು ಮನೆಯಲ್ಲಿಯೇ ಕುಳಿತು ಮಳೆಯ ಮುನ್ಸೂಚನೆ ಮಾಹಿತಿಯನ್ನು ಪಡೆಯಬಹುದು.  ಅಲ್ಲಿ ಕಾಣುವ ಭೂತಕಾಲದ ಮೇಲೆ ಕ್ಲಿಕ್ ಮಾಡಿದರೆ ಹಿಂದೆ ಐದು ದಿನಗಳ ಕಾಲ ಮಳೆಯ ಮಾಹಿತಿಯನ್ನು ಸಹ ಪಡೆಯಬಹುದು.

ನಿಮ್ಮೂರಿನಲ್ಲಿ ಇಂದು ಮಳೆಯಾಗುತ್ತದೆಯೋ ಇಲ್ಲವೋ ಎಂಬ ಮಾಹಿತಿ ಬೇಕೆ?

ರೈತರು ತಮ್ಮೂರಿನಲ್ಲಿ ಇಂದು ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿಯನ್ನು ಫೋನ್ ನಲ್ಲೇ ಪಡೆಯಬಹುದು. ಹೌದು, ಸರ್ಕಾರದ ಉಚಿತ ವರುಣಮಿತ್ರ ಸಹಾಯವಾಣಿ 92433 45433 ಗೆ ಕರೆ ಮಾಡಿ ಮಳೆಯ ಮಾಹಿತಿ ಪಡೆಯಬಹುದು.

Leave a Comment