FRUITS: ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಭೂ ವಿವರಗಳನ್ನು ನೋಂದಾಯಿಸಿದರೆ ಮಾತ್ರ ಬೆಳೆ ವಿಮೆ, ಬೆಳೆ ಹಾನಿ ಹಾಗೂ ಸರ್ಕಾರದ ಇತರ ಸೌಲಭ್ಯ ಸಿಗಲಿದೆ.
ಹೌದು, ಸರ್ಕಾರದ ಯಾವುದೇ ಸವಲತ್ತು ಪಡೆಯಲು ಫ್ರೂಟ್ಸ್ ತಂತ್ರಾಂಶದ ನೋಂದಣಿಯು ಕಡ್ಡಾಯವಾಗಿದ್ದು, ಕೂಡಲೇ ಎಲ್ಲಾ ರೈತರು ತಮ್ಮ ಮಾಲೀಕತ್ವಕ್ಕೆ ಒಳಪಡುವಎಲ್ಲಾ ಸರ್ವೆ ನಂಬರ್ ಗಳನ್ನು (ಭೂ ಹಿಡುವಳಿಯನ್ನು) ಸಂಬಂಧಪಟ್ಟ ದಾಖಲೆಯೊಂದಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.
ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ವೈಯಕ್ತಿಕ ಮಾಹಿತಿ, ಜಮೀನಿನ, ಬೆಳೆಯ ವಿವರ ಹಾಗೂ ಈ ಹಿಂದೆ ಸರ್ಕಾರದಿಂದ ಪಡೆದ ಎಲ್ಲಾ ಇಲಾಖೆಗಳ ಸವಲತ್ತಿನ ವಿವರ ಒಳಗೊಂಡಿರುತ್ತದೆ. ಸರ್ಕಾರದ ವಿವಿಧ ಇಲಾಖೆಗಳಿಂದ ರೈತರಿಗೆ ವಿವಿಧ ಯೋಜನೆಗಡಳಿ ಸಹಾಯಧನ ಸವಲತ್ತು ನೀಡಲು ರೈತರು ಕ್ರೋಢೀಕರಿಸಿದ ದತ್ತಾಂಶ, ರೈತರ ವೈಯಕ್ತಿಕ ಹಾಗೂ ಜಮೀನಿನ ವಿವರ ಇರುತ್ತದೆ. ಇಲಾಖಾವಾರು ವಿವಿಧ ಯೋಜನೆಯ ಸವಲತ್ತು ಪಡೆದ ರೈತರ ಮಾಹಿತಿ, ದತ್ತಾಂಶದಲ್ಲಿ ಲಭ್ಯವಾಗುವುದು.
ನಿಮ್ಮ ಹೆಸರಿಗೆ FRUITS ಎಫ್ಐಡಿ ಇದೆಯೇ? ಇಲ್ಲೇ ಚೆಕ್ ಮಾಡಿ
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ತಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರದುಕೊಳ್ಳುವ ಪೇಜ್ ನಲ್ಲಿ ಆಧಾರ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರಿಗೆ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಸರ್ಕಾರದ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿ
ರೈತರು ಸರ್ಕಾರದ ಯಾವುದೇ ಇಲಾಖೆಯಲ್ಲಿ ಸವಲ್ತತು ಪಡೆಯಲು ಪ್ರತಿ ಸಲ ದಾಖಲಾತಿ ನೀಡುವ ಅವಶ್ಯಕತೆ ಇರುವುದಿಲ್ಲ. ಸರ್ಕಾರದ ಯೋಜನೆಯ ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಲು ತಂತ್ರಾಂಶ ನೆರವಾಗುವುದು. (ಕಡಿಮೆ ಅವಧಿಯಲ್ಲಿ ಏಕಕಾಲದಲ್ಲಿ ವಿವಿಧ ಹಂತಗಳ ಪರಿಶೀಲನೆ, ಸ್ಥಳ, ನಿರ್ಧಿಷ್ಟತೆ, ಕಾಮಗಾರಿಯ ವಿವಿಧ ಹಂತದ ಛಾಯಾಚಿತ್ರ) ಸರ್ಕಾರದ ಯೋಜನೆಗಳನ್ನು ಕಾಗದ ರಹಿತ ಮಾದರಿಯಲ್ಲಿ ಅನುಷ್ಠಾನಗೊಳಿಸುವುದರಿಂದ ಸರ್ಕಾರಕ್ಕೆ ಹೊರೆ ಕಡಿಮೆಯಾಗಿದೆ.
ಇದನ್ನೂ ಓದಿ : Gruhalakshmi scheme money ಈ ಮಹಿಳೆಯರಿಗೆ ಜಮೆ: ಮೊಬೈಲ್ ನಲ್ಲೇ ಇಲ್ಲೆ ಚೆಕ್ ಮಾಡಿ
ಫ್ರೂಟ್ಸ್ ತಂತ್ರಾಂಶದ ಜೋಡಣೆಯೊಂದಿಗೆ ಅನುಷ್ಠಾನ ಇಲಾಖೆಗಳಿಂದ ಯೋಜನೆಗಳನ್ನು ಅನುಮೋದನೆ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ಹಸಿರು ತಂತ್ರಾಂಶದ ಮೂಲಕ ಎಲ್ಲಾ ಯೋಜನೆ ಹಾಗೂ ಬೆಳೆ ವಿಮೆ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಮತ್ತು ಬೆಳೆ ವಿಮೆ, ರೇಷ್ಮೆ ಇಲಾಖೆಯಿಂದ ಫ್ರೂಟ್ಸ್ ನೋಂದಾಯಿತ ರೈತರಿಗೆ ಸವಲತ್ತು ನೀಡಲಾಗುತ್ತಿದೆ. ಪಶು ಸಂಗೋಪನೆ ಇಲಾಖೆಯಿಂದ ಪಶುಭಾಗ್ಯ, ಕೆಎಂಎಫ್ ಪ್ರೋತ್ಸಾಹಧನ, ಸಹಕಾರ ಇಲಾಖೆಯಿಂದ ಬೆಂಬಲ ಬೆಲೆ ಯೋಜನೆ ಹಾಗೂ ಕಂದಾಯ ಇಲಾಖೆಯಿಂದ ಬೆಳೆ ನಾಶ, ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳನ್ನು ಫ್ರೂಟ್ಸ್ ತಂತ್ರಾಂಶದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
FRUITS ತಂತ್ರಾಂಶದಲ್ಲಿ ಹೆಸರು ನೋಂದಣಿ ಎಲ್ಲಿ ಮಾಡಬೇಕು?
ಹೋಬಳಿ ಮಟ್ಟದಲ್ಲಿ ಎಲ್ಲಾ ರೈತ ಸಂಪರ್ಕ ಕೇಂದ್ರ, ತಾಲೂಕು ಮಟ್ಟದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಪಾಲನೆ ಕಚೇರಿ, ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ನಾಡ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್.ಸಿ) ಫ್ರೂಟ್ಸ್ ತಂತ್ರಾಂಶದಡಿ ನೋಂದಣಿ ಮಾಡಬಹುದಾಗಿದೆ.
ಈ ತಂತ್ರಾಂಶದಲ್ಲಿ ನೋಂದಣಿ ಮಾಡಿಸಲು ರೈತರು ಆಧಾರ್ ಸಂಖ್ಯೆ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಮೊಬೈಲ್ ಸಂಖ್ಯೆ, ಪ್ರಸಕ್ತ ಸಾಲಿನ ಪಹಣಿ, ಆರ್.ಟಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಸರ್ಕಾರದ ಸೌಲತ್ತು ಪಡೆಯಲು ಫ್ರೂಟ್ಸ್ ತಂತ್ರಾಂಶದ ನೋಂದಣಿಯು ಕಡ್ಡಾಯವಾಗಿದೆ. ಕೂಡಲೇ ಎಲ್ಲಾ ರೈತರು ತಮ್ಮ ಮಾಲೀಕತ್ವದ ಎಲ್ಲಾ ಸರ್ವೆ ನಂಬರ್ ಗಳನ್ನು (ಭೂ ಹಿಡುವಳಿಯನ್ನು) ಸಂಬಂಧಪಟ್ಟ ದಾಖಲೆಯೊಂದಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾವಣಿ ಮಾಡಿ ಸವಲತ್ತು ಪಡೆಯುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.