Ekyc is Mandatory for PM kisan ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (ಪಿಎಂ ಕಿಸಾನ್) ಯೋಡನೆಯಡಿ ನೋಂದಣಿ ಮಾಡಿಸಿಕೊಂಡ ರೈತರಿಗೆ ಇಕೆವೈಸಿ ಕಡ್ಡಾಯವಾಗಿದೆ. ಪಿಎಂ ಕಿಸಾನ್ ಯೋಜನೆಯ 19ನೇ ಕಂತು ಪಡೆಯಬೇಕಾದರೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಯೂಟೂಬ್ ಚಾನೆಲಿಗೆ ಸಬಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸುವುದು ಹೇಗೆ? ಹಾಗೂ ಇಕೆವೈಸಿ ಮಾಡಿಸದಿದ್ದರೆ ರೈತರಿಗೆ ಹೇಗೆ ಹಾನಿಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಯೋಜನೆಯನ್ನು 2018 ರ ಡಿಸೆಂಬರ್ ತಿಂಗಳಲ್ಲಿ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ಅರ್ಹ ರೈತರಿಗೆ ಮೂರು ಸಮಾನ ಕಂತುಗಳಲ್ಲಿ 2000 ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿ ಪ್ರತಿ ವರ್ಷ ನೆರವು ನೀಡಲಾಗುತ್ತಿದೆ.
ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಕೆಳೆದ ತಿಂಗಳು 18ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಆಗ ಬಹಳಷ್ಟು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಿರಲಿಲ್ಲ. ಏಕೆಂದರೆ ಇಕೆವೈಸಿ ಮಾಡಿಸದೆ ಇರುವ ಹಲವಾರು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಿರಲಿಲ್ಲ. ಹಾಗಾಗಿ ಮತ್ತೆ ರೈತರಿಗೆ ಇಕೆವೈಸಿ ಮಾಡಿಸಲು ಕಾಲಾವಕಾಶ ನೀಡಲಾಗಿದೆ.
Ekyc is Mandatory for PM kisan ಪಿಎಂ ಕಿಸಾನ್ ಯೋಜನೆಗೆ ನಿಮ್ಮ ಹೆಸರು ಇಕೆವೈಸಿ ಆಗಿದೆಯೋ ಇಲ್ಲವೋ ? ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://exlink.pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಓಟಿಪಿ ಬೇಸ್ಡ್ ಇಕೆವೈಸಿ ಕೆಳಗಡೆ ಆಧಾರ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮ್ಮ ಆಧಾರ್ ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದ್ದರೆ EkYC is Already done ಎಂಬ ಮೆಸೇಜ್ ಕಾಣಿಸುತ್ತದೆ.
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಇಕೆವೈಸಿ ಆಗಿಲ್ಲವಾದರೆ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಇಕೆವೈಸಿ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕದವರಿಗೆ ಎಷ್ಟು ಎಕರೆ ಜಮೀನಿದೆ? ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಒಂದು ವೇಳೆ ನಿಮಗೆ ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸಲು ಆಗದಿದ್ದರೆ ನಿಮ್ಮ ಹತ್ತಿರದ ಸಿಎಸ್.ಕೆ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು.
ಇಕೆವೈಸಿ ಏಕೆ ಮಾಡಿಸಬೇಕು? (Why we should do Ekyc)
ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತ ಬಾಂಧವರು ಮುಂದಿನ ಕಂತು ಪಡೆಯಲು ಇಕೆವೈಸಿ ಕಡ್ಡಾಯವಾಗಿದೆ. ರೈತರು ಎರಡು ವಿಧಆನದಲ್ಲಿ ಇಕವೈಸಿ ಮಾಡಿಸಿಕೊಳ್ಳಬಹುದು. ಮೊಬೈಲ್ ಮೂಲಕ ಅಥವಾ ಹತ್ತಿರ ನಾಗರಿಕ ಸೇವಾ ಕೇಂದ್ರದ ಮೂಲಕವೂ ಮಾಡಿಸಿಕೊಳ್ಳಬಹುದು. ನಿಜವಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಸಿಗಲೆಂಬ ಉದ್ದೇಶದಿಂದ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ.
ನಾಗರಿಕ ಸೇವಾ ಕೇಂದ್ರದಲ್ಲಿ ತಮ್ಮ ಕೈಬೆರಳಿನ ಗುರುತು ಮತ್ತು ಆಧಾರ್ ಸಂಖ್ಯೆಯನ್ನು ಬಳಸಿ ಇಕೆವೈಸಿ ಮಾಡಬಹುದು. ಇಕೆವೈಸಿ ಸೇರಿದಂತೆ ಪಿಎಂ ಕಿಸಾನ್ ಯೋಜನೆಗೆ ಸಂಬಂಸಿದಿ ಮಾಹಿತಿಯನ್ನುಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು.