e-Shram card benefit ಅಸಂಘಟಿತ ವಲಯದಲ್ಲಿ ಬರುವ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆಕೆಲಸಗಾರರು, ಕೃಷಿ ಕಾರ್ಮಿಕರು, ಸಣ್ಣ ರೈತರು ಸೇರಿದಂತೆ ಇತರ ಅಸಂಘಟಿತ ವಲಯ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಈ-ಶ್ರಮ ಪೋರ್ಟಲ್ ಆರಂಭಿಸಿದೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ
ಈ ಪೋರ್ಟಲ್ ಮೂಲಕ ಕಾರ್ಮಿಕರು ಮೊಬೈಲ್ ಮೂಲಕವೇ ಕಾರ್ಡ್ ಗಾಗಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು. ಹೌದು, ಈ-ಶ್ರಮ ಕಾರ್ಡ್ ನೋಂದಣಿ ಮಾಡಿಸಲು ಕಾರ್ಮಿಕರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಿಂದಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ
e-Shram card benefit ಏನಿದು ಈ ಶ್ರಮ ಕಾರ್ಡ್?
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ವಲಯದ ಸುಮಾರು 38 ಕೋಟಿ ಕಾರ್ಮಿಕರಿಗಾಗಿ 12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ ಮತ್ತು ಈ-ಶ್ರಮ ಕಾರ್ಡ್ ನೀಡಲಿದೆ. ಈ ಶ್ರಮ ಕಾರ್ಡ್ ದೇಶಾದ್ಯಂತ ಮಾನ್ಯತೆ ಹೊಂದಿರುತ್ತದೆ. ಈ ಕಾರ್ಮಿಕ ಕಾರ್ಡ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗುತ್ತದೆ.ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು ಪೋರ್ಟಲ್ ನಲ್ಲಿ ಮೊಬೈಲ್ ನಲ್ಲಿಯೇ ನೋಂದಾಯಿಸಿಕೊಳ್ಳಬಹುದು.
ಇ-ಶ್ರಮ ಕಾರ್ಡ್ ಪಡೆಯುವದರಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯಡಿ 60 ವರ್ಷದ ನಂತರ ಪಿಂಚಣಿ ಪಡೆಯಲು ಸಹಾಯವಾಗುತ್ತದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಕಾರ್ಮಿಕರು ಆಕಸ್ಮಿಕವಾಗಿ ಮೃತಪಟ್ಟರೆ 2 ಲಕ್ಷ ರೂಪಾಯಿಯವರೆಗೆ ವಿಮೆ ಪಡೆಯುತ್ತಾರೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಆಕಸ್ಮಿಕ ಸಾವು, ಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ಹಾಗೂ ಭಾಗಶ- ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿ ಪಡೆಯುತ್ತಾರೆ. ಇ ಶ್ರಮ ಕಾರ್ಡ್ ಇದ್ದರೆ ಅಟಲ್ ಪಿಂಚಣಿ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಲು ಇ ಶ್ರಮ ಕಾರ್ಡ್ ಬೇಕಾಗುತ್ತದೆ.ಆರೋಗ್ಯ ವಿಮೆ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಬಹುದು.
ಈ ಶ್ರಮ ಕಾರ್ಡ್ ನೋಂದಣಿಗೆ ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಮೊಬೈಲ್ ನಂಬರ್ ಬೇಕಾಗುತ್ತದೆ.16 ರಿಂದ 59 ವಯೋಮಾನದೊಳಗಿರಬೇಕು.
ಇ-ಶ್ರಮ ಕಾರ್ಡ್ ಗಾಗಿ ನೋಂದಣಿ ಮಾಡುವುದು ಹೇಗೆ?
ಇ ಶ್ರಮ ಪೋರ್ಟಲ್ ನ https://register.eshram.gov.in/#/user/self
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಇ ಶ್ರಮ ಪೋರ್ಟಲ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಸೆಲ್ಫ್ ರೆಜಿಸ್ಟ್ರೇಷನ್ ನಲ್ಲಿ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚಾ ಕೋಡ್ ಹಾಕಬೇಕು ನೀವು ಉದ್ಯೋಗಿ ಪ್ರಾವೆಡೆಂಟ್ ಫಂಡ್ (ಇಪಿಎಫ್ಓ) ಅಥತವಾ ಉದ್ಯೋಗಿ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಷನ್ (ಇಎಸ್ಐಸಿ) ಸದಸ್ಯರೇ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಮೊಬೈಲಿಗೆ ಬಂದ ಓಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಧಾರ್ ಕಾರ್ಡ್ ನಂಬರ್ ಹಾಕಬೇಕು. I Agree to the terms and Condition ಸೆಲೆಕ್ಟ್ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ಆಗ ಮತ್ತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲಿಗೆ ಓಟಿಪಿ ಬರುತ್ತದ. ಓಟಿಪಿ ನಮೂದಿಸಿದ ನಂತರ ವ್ಯಾಲಿಡೆಟ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ? ಇಲ್ಲೇ ಚೆಕ್ ಮಾಡಿ
ಇ-ಶ್ರಮ ಪೇಜ್ ಓಪನ್ ಆದ ಮೇಲೆ ಅಲ್ಲಿ Personal Information ನಲ್ಲಿ ಮೊಬೈಲ್ ನಂಬರ್, ತಂದೆಯ ಹೆಸರು ಕೆಟಗೇರಿ, ನಾಮಿನಿ, ಡಿಟೇಲ್ ಭರ್ತಿ ಮಾಡಿದ ಮೇಲೆ Save and continue ಮೇಲೆ ಕ್ಲಿಕ್ ಮಾಡಬೇಕು. Address ನಲ್ಲಿ ನಿಮ್ಮ ಹೌಸ್ ನಂಬರ್, ರಾಜ್ಯ, ಜಿಲ್ಲೆ, ತಾಲೂಕು, ಪಿನ್ ಕೋಡ್ ಭರ್ತಿ ಮಾಡಬೇಕು. ಎಷ್ಟು ವರ್ಷದಿಂದ ವಾಸವಾಗಿದ್ದೀರಾ ಎಂಬದನ್ನು ನಮೂದಿಸಬೇಕು. ನೀವು ವಲಸೆ ಕಾರ್ಮಿಕರೇ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಪರ್ಮನೆಂಟ್ ಅಡ್ರೆಸ್ ಒಂದೇ ಆಯ್ಕೆಯಾಗಿದ್ದರೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನೀವು ಬೇರೆ ಕಡೆ ಬಾಡಿಗೆ ಮನೆಯಲ್ಲಿದ್ದರೆ ಪರ್ಮನೆಂಟ್ ಅಡ್ರೆಸ್ ನಮೂದಿಸಬೇಕು. ನಂತರ Save and continue ಮೇಲೆ ಕ್ಲಿಕ್ ಮಾಡಬೇಕು. ಎಜುಕೇಷನಲ್ ಕ್ವಾಲಿಫಿಕೇಷನ್ ನಲ್ಲಿ ಎಲ್ಲಿಯವರೆಗೆ ತಾವು ಓದಿದ್ದೀರಿ. ಮಾರ್ಕ್ಸ್ ಕಾರ್ಡ್ ಅಪ್ಲೋಡ್ ಮಾಡಬೇಕು. ತಿಂಗಳ ಆದಾಯ ಎಷ್ಟು ಎಂಬದನ್ನು ಆಯ್ಕೆ ಮಾಡಿಕೊಳ್ಳಬೇಕು. ಇನಕಂಮ್ ಸರ್ಟಿಫಿಕೇಟ್ ಅಪಲೋಡ್ ಮಾಡಿದ ನಂತರ Save and continue ಮೇಲೆ ಕ್ಲಿಕ್ ಮಾಡಬೇಕು. ಅಕ್ಕುಪೇಷನ್ ನಲ್ಲಿ ಬ್ಯಾಂಕ್ ಡಿಟೇಲ್ ಭರ್ತಿ ಮಾಡಿದ ನಂತರ ಪ್ರಿವಿವ್ ಸೆಲ್ಫ್ ಡಿಕ್ಲರೇಷನ್ ಮೇಲೆ ಕ್ಲಿಕ್ ಮಾಡಬೇಕು. ಭರ್ತಿ ಮಾಡಿದ ಎಲ್ಲಾ ಮಾಹಿತಿ ಸರಿಯಾಗಿದೆಯೋ ಎಂಬುದನ್ನು ಚೆಕ್ ಮಾಡಿ I undertake that ಮೇಲೆ ಕ್ಕ್ಲಿಕ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಸೆಲ್ಪ್ ಡಿಕ್ಲರೇಷನ್ ಭರ್ತಿ ಮಾಡಿದ ನಂತರ ಯುಎಎನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಾಗಿ ಅಸಂಘಟಿತ ವಲಯದ ಕಾರ್ಮಿಕರು ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆ 14434 ಗೆ ಕರೆ ಮಾಡಬಹುದು.