E-KYC mandatory ಇನ್ನೂ ಮುಂದೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಮಾಡಿಸಿದರೆ ಮಾತ್ರ ಅವರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಬರಲಿದೆ. ಇಲ್ಲದಿದ್ದರೆ ಮುಂದಿನ ಕಂತು ಸ್ಥಗಿತವಾಗುವ ಸಾಧ್ಯತೆಯಿದೆ. ಈಗಾಗಲೇ 10ನೇ ಕಂತಿನ ಹಣ ಬಿಡುಗಡೆ ಸಂದರ್ಭದಲ್ಲಿ ಕೆಲವು ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಮುಂದಿನ ಕಂತು ಜಮೆಯಾಗಬೇಕಾದರೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಪಿಎಂ ಕಿಸಾನ್ ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಅತ್ಯಂತ ಅವಶ್ಯಕವಾಗಿದೆ. ಹೌದು ಇ-ಕೆವೈಸಿಯನ್ನು ರೈತರು ಮೊಬೈಲ್ ನಲ್ಲಿಯೇ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ
E-KYC mandatory ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಸುವುದು ಹೇಗೆ?
ರೈತರು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಈ https://pmkisan.gov.in/aadharekyc.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ವೆಬ್ ಪೇಜ್ ಓಪನ್ ಆಗುತ್ತದೆ. ರೈತರು ಮೊಬೈಲ್ ನಂಬರ್ ನಮೂದಿಸಿ Get OTP ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ಓಟಿಪಿ ಮೆಸೆಜ್ ರವಾನೆಯಾಗುತ್ತದೆ. ಓಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಮೊಬೈಲಿಗೆ E-KYC Successfully Submitted ಎಂಬ ಮೆಸೆಜ್ ಬರುತ್ತದೆ. ಆಗ ನಿಮ್ಮ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹೀಗೆ ರೈತರೆ ಮೊಬೈಲ್ ಓಟಿಪಿ ಆಧಾರಿತವಾಗಿ ಇ-ಕೆವೈಸಿ ಮಾಡಬಹುದು. ಒಂದು ವೇಳೆ ನಿಮಗೆ ಇ-ಕೆವೈಸಿ ಮಾಡಿಸುವಾಗ ಸಮಸ್ಯೆಯಾಗುತ್ತಿದ್ದರೆ ಅಥವಾ Invalid ಎಂಬ ಮೆಸೆಜ್ ಕಂಡರೆ ನೀವು ನಿಮ್ಮ ಸಮೀಪದ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಬಹುದು.
ನಾಗರಿಕ ಇ ಸೇವಾ ಕೇಂದ್ರದಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆ ಇ-ಕೆವೈಸಿ ಮಾಡಲಾಗುತ್ತದೆ. ಏಪ್ರೀಲ್ -2022 ರಿಂದ ಜುಲೈ 2022ರವರೆಗೆ ಆರ್ಥಿಕ ನೆರವು ಅಂದರೆ 11ನೇ ಕಂತಿನ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಫಲಾನುಭವಿಯೂ ಮಾರ್ಚ್ ತಿಂಗಳೊಳಗಾಗಿ ಇಕೆವೈಸಿ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು.
ಇದನ್ನೂ ಓದಿ: ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ರೈತರ ಹೆಸರಿದ್ದರೂ ಸಹ ಕೆಲವು ರೈತರಿಗೆ 10ನೇ ಕಂತಿನ ಹಣ ಜಮೆಯಾಗಿಲ್ಲ. ಇದಕ್ಕೆ ಇ-ಕೆವೈಸಿ ಮಾಡಸದಿರುವುದು, ಹಾಗೂ ಬ್ಯಾಂಕ್ ಮತ್ತು ಪಾಸ್ ಬುಕ್ ನಲ್ಲಿ ಹೆಸರು ಒಂದೇ ರೀತಿ ಇರದಿರುವುದಕ್ಕೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಏನೇ ಆಗಲಿ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮುಂದಿನ ಕಂತು ಜಮೆಯಾಗಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.