Driverless Tractor : ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಜಿಕೆವಿಕೆ ಆವರಣದಲ್ಲಿ ನೀವು ಚಾಲಕರಹಿತ ಟ್ರ್ಯಾಕ್ಟರ್ ನೋಡಲಿದ್ದೀರಿ. ಇದೇ ನವೆಂಬರ್ 14 ರಿಂದ 17 ರವರೆಗೆ ನಾಲ್ಕು ದಿನಗಳ ಕಾಲ ಬೃಹತ್ ಕೃಷಿ ಮೇಳ ಆಯೋಜಿಸಲಾಗಿದೆ.
Driverless Tractor ಚಾಲಕರಹಿತ ಟ್ರ್ಯಾಕ್ಟರ್
ಈ ಕೃಷಿ ಮೇಳದಲ್ಲಿ ಚಾಲಕರಹಿತ ಟ್ಯಾಕ್ಟರ್ ಪ್ರದರ್ಶನಕ್ಕಿಡಲಾಗುವುದು. ಅಟೋಮ್ಯಾಟಿಕ್ ಟ್ರ್ಯಾಕ್ಟರ್ ಮೌಂಟೆಡ್ ಸ್ಪೇಯರ್ ಪ್ರದರ್ಶನವಿದ್ದು, ಈ ಚಾಲಕರಹಿತ ಟ್ರ್ಯಾಕ್ಟರ್ ನಿಂದ ದ್ರವ ರೂಪದ ರಸಗೊಬ್ಬರ, ಕಳೆ ನಾಶಕ, ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಯಾವ ರೀತಿ ಸಿಂಪಡಿಸಬಹುದು ಎಂಬುದನ್ನು ಪ್ರದರ್ಶಿಸಲಾಗುವುದು.
ಜನಜಾಗರಣ ಯೂಟೂಬ್ ಚಾನೆಲ್ ಸೇರಲು subscribe ಮಾಡಿ
ರಾಗಿ ಬೀಜದೊಂದಿಗೆ ಗೊಬ್ಬರವನ್ನು ಸೇರಿಸಿ ಬಿತ್ತನೆ ಮಾಡುವ ಕೈಚಾಲಿತ ಕೂರಿಗೆ ಸಾಧನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಶೇಂಗಾ ಗಿಡ, ಮುಸುಕಿನ ಜೋಳದ ತೆನೆ, ಸೂರ್ಯಕಾಂತಿಯಿಂದ ಕಾಯಿ ಕಾಳುಗಳನ್ನು ಬೇರ್ಪಡಿಸುವ ಬಹು ಬೆಳೆ ಸಂಸ್ಕರಣಾ ಯಂತ್ರವನ್ನು ವಿಜ್ಞಾನಿಗಳು ಅವಷ್ಕರಿಸಿದ್ದಾರೆ . ಈ ಯಂತ್ರಗಳು ಕೃಷಿ ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಈ ಬಾರಿ ಆಯೋಜಿಸಲಿರುವ ಬಹು ನಿರೀಕ್ಷಿತ ಕೃಷಿ ಮೇಳದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಕೃಷಿ ಗೆ ಒತ್ತು ನೀಡಲಾಗಿದೆ. ಆದ್ದರಿಂದ ಈ ಸಲ ಹವಾಮಾನ ಚತುರ – ಡಿಜಿಟಲ್ ಕೃಷಿ ಘೋಷವಾಕ್ಯದಡಿ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ 19 ನೂತನ ತಾಂತ್ರಿಕತೆಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.
ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕವೇ ರೈತರಿಗೆ ಮಾಹಿತಿ ನೀಡಲು ಸಿದ್ದತೆ ಕೈಗೊಳ್ಳಲಾಗುತ್ತಿದೆ.
ಪ್ರಾತ್ಯಕ್ಷಿಕೆ ನೀಡಲು ಅನುಕೂಲವಾಗಲೆಂದು ಕೃಷಿ ಮೇಳ ಮೈದಾನದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.
ಇದನ್ನೂ ಓದಿ ಭಾಗ್ಯಲಕ್ಷ್ಮೀ ಬಾಂಡ್ ಮೆಚ್ಯೂರ್ ಆಗಿದೆಯೇ ಸ್ಟೇಟಸ್ ಇಲ್ಲೇ ಚೆಕ್ ಮಾಡಿ
ಸುಮಾರು 750 ಕ್ಕೂ ಹೆಚ್ಚುಮಳಿಗೆಗಳಿಗೆ ಅವಕಾಶವಿರಲಿದೆ.. ಕೃಷಿ ವಲಯದ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಬೆಂಗಳೂರು ಕೃಷಿ ವಿವಿ ಮತ್ತು ಸಂಬಂಧಿತ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಉತ್ಪನ್ನಕ್ಕೆ ಅವಕಾಶ ನೀಡುವ ಊರು – ಕೇರಿಯ ಉತ್ಪನ್ನಗಳೂ ಲಭಿಸಲಿದೆ. ನರ್ಸರಿ, ವಿವಿಧ ತಳಿಯ ಕುರಿ, ಕೋಳಿ, ಜಾನುವಾರುಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು.
ಹೊಸ ತಳಿಗಳು
ವಿಶೇಷವಾಗಿ ಅಧಿಕ ಇಳುವರಿ ನೀಡುವ ನಾಲ್ಕು ಮೆಕ್ಕೆಜೋಳದ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಅಲಸಂಧೆ, ಜೋಳ, ಸೂರ್ಯಕಾಂತಿಯ ಹೊಸ ತಳಿಗಳು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೆ ಕಳೆ ನಿರ್ಮೂಲನೆ, ಕೀಟ ನಿಯಂತ್ರಕ ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತದೆ.
ಅದೇ ರೀತಿ ಶೇಂಗಾವನ್ನು ಗಿಡದಿಂದ ಬೇರ್ಪಡಿಸುವ ಯಂತ್ರವನ್ನು ಆವಿಷ್ಕರಿಸಿದೆ. ಶೇಂಗಾ ಜೊತೆಗೆ ಸೂರ್ಯಕಾಂತಿ, ಮೆಕ್ಕೆಜೋಳ ಬೀಜಗಳನ್ನು ಬೇರ್ಪಡಿಸಲು ಈ ಯಂತ್ರಗಳನ್ನು ಬಳಸಬಹುದು.
ನೂತನ ತಾಂತ್ರಿಕತೆ
ಮುಸುಕಿನ ಜೋಳದಲ್ಲಿ ಕಳೆ ನಿರ್ವಹಣೆ, ರಸಗೊಬ್ಬರಗಳ ಸಮರ್ಪಕ ಬಳಕೆ, ತೇಗದಲ್ಲಿ ಅಂತರ ಬೆಳೆಯಾಗಿ ಮೇವಿನ ಹುಲ್ಲುಗಳು, ನೈಸರ್ಗಿಕ ಪದ್ಧತಿಯಲ್ಲಿ ಇಲಿಗಳ ನಿರ್ವಹಣೆ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೋರಕದ ನಿರ್ವಹಣೆ ಸೇರಿದಂತೆ ತಾಂತ್ರಿಕತೆಗಳು ಮೇಳದಲ್ಲಿ ಅನಾವರಣಗೊಳ್ಳಲಿದೆ.
ಒಂದು ಹೆಕ್ಟೇರಿಗೆ 80 ದಿನಗಳಲ್ಲಿ 24 ಕ್ವಿಂಟಾಲ್ ನಷ್ಟು ಇಳುವರಿ ನೀಡುವ ಕೆಬಿಎಸ್.ಎಚ್ 90 ಸೂರ್ಯಕಾಂತಿ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿಪಡಿಸಿದೆ.
ಇನ್ನೇಕೆ ತಡ, ಸಮಯ ಮಾಡಿಕೊಂಡು ಬೆಂಗಳೂರಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಕೃಷಿ ಮೇಳ ವಿವಿಧೆತೆಗಳನ್ನು ಕಣ್ತುಂಬಿಕೊಳ್ಳಿ. ಇದರೊಂದಿಗೆ ಹೊಸ ಹೊಸ ತಂತ್ರಜ್ಞಾನದ ಮಾಹಿತಿ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080 23638883, 23330153ಗೆ ಸಂಪರ್ಕಿಸಬಹುದು ಎಂದು ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾಧಿಕಾರಿ ವಿ.ಎಲ್. ಮಧುಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.