Bhoomi app land records ರೈತರು ದೇಶದ ಯಾವುದೇ ಮೂಲೆಯಲ್ಲಿ ಕುಳಿತು ತಮ್ಮೂರಿನಲ್ಲಿ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ಹೌದು, ನಿಮ್ಮೂರಿನಲ್ಲಿರುವ ರೈತರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಅವರ ಜಮೀನು ಜಂಟಿಯಾಗಿದೆಯೋ ಇಲ್ಲವೋ ಚೆಕ್ ಮಾಡಬುದು. ಇದರೊಂದಿಗೆ ಅವರ ಅಕ್ಕಪಕ್ಕದ ಅಂದರೆ ಅವರ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರಿದ್ದಾರೆ ಎಂಬುದನ್ನು ಸಹ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರೈತರಿಗೆ ತಮ್ಮ ಜಮೀನಿನ ದಾಖಲೆಗಳನ್ನು ಮೊಬೈಲ್ಲ ನಲ್ಲೆ ಚೆಕ್ ಮಾಡಲು ಕಂದಾಯ ಇಲಾಖೆಯು ಭೂಮಿ ಆ್ಯಪ್ ನ್ನುಅಭಿವೃದ್ಧಿ ಪಡಿಸಿದೆ.ಈ ಆ್ಯಪ್ ಸಹಾಯದಿಂದ ರೈತರು ಮನೆಯಲ್ಲಿಯೇ ಕುಳಿತು ತಮ್ಮೂರಿನಲ್ಲಿರುವ ರೈತರಿಗೆ ಯಾರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬುದು.
Bhoomi app land records ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ? ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಗ್ರಾಮದಲ್ಲಿ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ನಲ್ಲಿ Bhoomi App ಎಂದು ಟೈಪ್ ಮಾಡಬೇಕು. ಆಗ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಅಭಿವೃದ್ಧಿ ಪಡಿಸಿದ ಭೂಮಿ ಆ್ಯಪ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಇನಸ್ಟಾಲ್ ಮಾಡಿಕೊಳ್ಳಬಹುದು.
ಅಥವಾ ರೈತರು ಈ
https://play.google.com/store/apps/details?id=app.bmc.com.BHOOMI_MRTC&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ರೈತರು Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಾಲ್ಕೈದು ಸೆಕೆಂಡ್ ಗಳಲ್ಲಿ ಭೂಮಿ ಆ್ಯಪ್ ಇನಸ್ಟಾಲ್ ಆಗುತ್ತದೆ. ಆಗ ನಿಮಗೆ ಭೂಮಿ ಆ್ಯಪ್ ಸಹ ಓಪನ್ ಆಗುತ್ತದೆ. ಅಲ್ಲಿ ನೀವು ಯಾವ ಯಾವ ದಾಖಲೆಗಳನ್ನು ಚೆಕ್ ಮಾಡಬಹುದು ಎಂಬುದು ಕಾಣಿಸುತ್ತದೆ. View RTC by Owner Name ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು, ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಂಡು View Details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಜಮೀನು ಮಾಲಿಕರ ವಿವರ
ನಿಮ್ಮ ಗ್ರಾಮದಲ್ಲಿರುವ ಎಲ್ಲಾ ರೈತರ ಪಟ್ಟಿ ಓಪನ್ ಆಗುತ್ತದೆ. ಗ್ರಾಮದ ಜಮೀನಿನ ಮಾಲಿಕರ ಹೆಸರು( Owner Name) , ಸರ್ವೆ ನಂಬ್ ( Surver Number) ಹಾಗೂ Action ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ.
ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಸರ್ವೆ ನಂಬರ್ ಗಳು ಒಂದರಿಂದ ಕೊನೆಯವರೆಗೆ ಅಂದರೆ ನಿಮ್ಮೂರಿನಲ್ಲಿರುವ ಸರ್ವೆ ನಂಬರ್ ಕೊನೆಯವರಿಗೆ ಆರ್ಡರ್ ವೈಸ್ ಕಾಣಿಸುತ್ತದೆ. ಮೊದಲ ಕಾಲಂನಲ್ಲಿ ರೈತರ ಹೆಸರು ಕನ್ನಡದಲ್ಲಿರುತ್ತದೆ.
ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ?
ನಿಮ್ಮೂರಿನಲ್ಲಿ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ರೈತೈರ ಹೆಸರಿನ ಮುಂದುಗಡೆ ಇರುವ Action ಕೆಳಗಡೆಯಿರುವ ಸರ್ಕಲ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಅವರ ಹೆಸರಿಗೆ ಆ ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ರೈತರ ಬೇರೆ ಬೇರೆ ಸರ್ವೆ ನಂಬರ್ ಪ್ರಕಾರ ಅವರ ಹೆಸರಿರುತ್ತದೆ. ನಿಮ್ಮ ಹೆಸರಿನ ಎದುರುಗಡೆ ಆಕ್ಸನ್ ಸರ್ಕಲ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಿಮಗೆಷ್ಟು ಎಕರೆ ಜಮೀನಿದೆ ಹಾಗೂ ನಿಮ್ಮ ಸರ್ವೆ ನಂಬರಿನಲ್ಲಿ ಜಮೀನು ಜಂಟಿಯಾಗಿದ್ದರೆ ಅದರ ಮಾಹಿತಿಯೂ ಇರುತ್ತದೆ.