ಸಮಾಜ ಸೇವೆಗಾಗಿ ರಾಜಕಾರಣಕ್ಕೆ ಬಂದಿರುವ ಶಾಸಕರ ಸಂಬಳ (MLA Salary ) ಕೇಳಿದರೆ ನಿಿಿಿಮಗೆ ಆಶ್ಚರ್ಯವಾಗಬಹುದು. ಐಎಎಸ್ ಆಫೀಸರ್ ನಂತರೆ ಸೌಲಭ್ಯಗಳು ಇರುತ್ತವೆ.
ಒಂದು ರಾಜ್ಯದಲ್ಲಿ ಹೆಚ್ಚು ಕಡಿಮೆ ವೇತನವಿದ್ದರೂ ಸಹ ಐಎಎಸ್ ಅಧಿಕಾರಿಗಳಂಕೆ ಸಂಬಳ ಪಡೆಯುತ್ತಾರೆ. ಶಾಸಕರ ಮಾಸಿಕ ವೇತನ, ಭತ್ಯೆ, ಕ್ಷೇತ್ರ ಮತ್ತು ಪ್ರಯಾಣ ಭತ್ಯೆ, ವಾರ್ಷಿಕ ರೈಲು-ವಿಮಾನ ಪ್ರಯಾಣಕ್ಕೆ ನೀಡುವ ಭತ್ಯೆ, ಸಮಿತಿ ಸಭೆ-ಕಲಾಪಕ್ಕೆ ಹೀಗೆ ಪ್ರತಿಯೊಂದಕ್ಕೂ ಶಾಸಕರಿಗೆ ಭತ್ಯೆ ನೀಡಲಾಗುತ್ತದೆ.
ಬೇರ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಶಾಸಕರ ಸಂಬಳ ಬೇರೆ ಬೇರೆಯಾಗಿರುತ್ತದೆ. ದೇಶದಲ್ಲಿ ಅತೀ ಹೆಚ್ಚು ವೇತನವನ್ನು ತೆಲಂಗಾಣದ ಶಾಸಕರು ಪಡೆಯುತ್ತಾರೆ. ಅಲ್ಲಿ ಪ್ರತಿಯೊಬ್ಬ ಶಾಸಕರು 2.50 ಲಕ್ಷ ಸಂಬಳ ಪಡೆಯುತ್ತಾರೆ.
ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಎಲ್ಲ ಶಾಸಕರಿಗೆ ಪ್ರತಿ ವಿಧಾನಸಭೆಗೆ ವಾರ್ಷಿಕ 1 ಕೋಟಿ ಯಿಂದ 4 ಕೋಟಿ ರೂಪಾಯಿಯನ್ನು ಶಾಸಕರ ನಿಧಿಯಿಂದ ನೀಡಲಾಗುವುದು. ಇದು ಸಹಿತ ರಾಜ್ಯದಿಂದ ರಾಜ್ಯಕ್ಕೆ ಹೆಚ್ಚುಕಡಿಮೆ ಇರುತ್ತದೆ.
ತೆಲಂಗಾಣ ರಾಜ್ಯದ MLA Salary 2.50 ಲಕ್ಷ (Telangana state MLA salary 2.50 lakh)
ಭಾರತದಲ್ಲಿ ತೆಲಂಗಾಣ ರಾಜ್ಯದ ಶಾಸಕರಿಗೆ ತಿಂಗಳಿಗೆ 2.5 ಲಕ್ಷ ರೂ.ಗಳ ಸಂಬಳ ವನ್ನು ನೀಡಲಾಗುತ್ತದೆ, ತ್ರಿಪುರಾ ವಿಧಾನಸಭೆಯ ಶಾಸಕರಿಗೆ ಅತಿ ಕಡಿಮೆ ಸಂಬಳ ರೂ.34000 ನೀಡಲಾಗುತ್ತದೆ. ಕರ್ನಾಟಕದ ಶಾಸಕರಿಗೆ ಸುಮಾರು 1 ಲಕ್ಷ ರುಪಾಯಿ ಸಂಬಳ ಸಿಗುತ್ತದೆ. ಇದಲ್ಲದೆ ಸಭೆಯಲ್ಲಿ ಪಾಲ್ಗೊಂಡರೆ, ಹೋಟೇಲಿನಲ್ಲಿ ಉಳಿದುಕೊಂಡರೆ, ಪ್ರಯಾಣಕ್ಕೆ ಹೀಗೆ ಬೇರೆಬೇರೆ ಕೆಲಸಕ್ಕೆ ಪ್ರತ್ಯೇಕ ಹಣ ಸಿಗುತ್ತದೆ. ಶಾಸಕರ ಕಾರ್ ಖರೀದಿ ಮಾಡಿದರೆ 15 ಲಕ್ಷ ರೂಪಾಯಿಯವರೆ ಸಾಲ ಶೇ. 7 ರ ಬಡ್ಡಿದರದಲ್ಲಿ ಸಿಗುತ್ತದೆ. ಸಾಲಮೊತ್ತ ಹಾಗೂ ಬಡ್ಡಿ ದರ ತೀರಿಸುವ ಮೊದಲೇ ಸಾವನ್ನಪ್ಪಿದರೆ ಸಾಲ ಬಡ್ಡಿ ಮನ್ನಾ ಆಗುತ್ತದೆ.
ಇದನ್ನೂ ಓದಿ : Baragala parihara amount:1.26 ಲಕ್ಷ ರೈತರಿಗೆ ಬರ ಪರಿಹಾರ ಜಮೆ
ಶದ ಯಾವ ರಾಜ್ಯದಲ್ಲಿ ಶಾಸಕರಿಗೆ ಎಷ್ಟು ಸಂಬಳ ನೀಡಲಾಗುತ್ತದೆ ಎಂಬುದರ ಪಟ್ಟಿ ಇಲ್ಲಿದೆ.
MLA Salary ಮತ್ತು ಸೌಲಭ್ಯ ( ರೂ.ಗಳಲ್ಲಿ)
- ತೆಲಂಗಾಣ 2.50 ಲಕ್ಷ ರೂ.
- ದೆಹಲಿ 2.10 ಲಕ್ಷ ರೂ.
- ಉತ್ತರ ಪ್ರದೇಶ 1.87 ಲಕ್ಷ ರೂ.
- ಮಹಾರಾಷ್ಟ್ರ 1.70 ಲಕ್ಷ ರೂ.
- ಜಮ್ಮು ಮತ್ತು ಕಾಶ್ಮೀರ 1.60 ಲಕ್ಷ
- ಉತ್ಟ್ರಾಖಂಡ್ 1.60 ಲಕ್ಷ
- ಆಂಧ್ರಪ್ರದೇಶ 1.30 ಲಕ್ಷ
- ಹಿಮಾಚಲ ಪ್ರದೇಶ 1.25 ಲಕ್ಷ
- ರಾಜಸ್ಥಾನ 1.25 ಲಕ್ಷ
- ಗೋವಾ 1.17 ಲಕ್ಷ
- ಹರಿಯಾಣ 1.15 ಲಕ್ಷ
- ಪಂಜಾಬ್ 1.14 ಲಕ್ಷ
- ಜಾರ್ಖಂಡ್ 1.11 ಲಕ್ಷ
- ಮಧ್ಯಪ್ರದೇಶ 1.10 ಲಕ್ಷ
- ಛತ್ತೀಸಗಢ 1.10 ಲಕ್ಷ
- ಬಿಹಾರ 1.14 ಲಕ್ಷ
- ಪಶ್ಚಿಮ ಬಂಗಾಳ 1.13 ಲಕ್ಷ
- ತಮಿಳುನಾಡು 1.05 ಲಕ್ಷ
- ಕರ್ನಾಟಕ 98 ಸಾವಿರ
- ಸಿಕ್ಕಿಂ 86.5 ಸಾವಿರ
- ಕೇರಳ 70 ಸಾವಿರ
- ಗುಜರಾತ್ 65 ಸಾವಿರ
- ಒಡಿಶಾ 62 ಸಾವಿರ
- ಮೇಘಾಲಯ 59 ಸಾವಿರ
- ಪುದುಚೇರಿ 50 ಸಾವಿರ
- ಅರುಣಾಚಲ ಪ್ರದೇಶ 49 ಸಾವಿರ
- ಮಿಜೋರಾಂ 47 ಸಾವಿರ
- ಅಸ್ಸಾಂ 42 ಸಾವಿರ
- ಮಣಿಪುರ 37 ಸಾವಿರ
- ನಾಗಾಲ್ಯಾಂಡ್ 36 ಸಾವಿರ
- ತ್ರಿಪುರಾ 34 ಸಾವಿರ
ಸಂಬಳದ ಜೊತೆಗೆ ಇತರ ಅಧಿಕಾರ (What other facilities are enjoyed by the MLAs besides the salary?)
ಐದು ವರ್ಷಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಸುರಕ್ಷಿತ ನೀರನ್ನು ಒದಗಿಸಲು 1೦೦ ಕ್ಕೂ ಹೆಚ್ಚು ಹ್ಯಾಂಡ್ ಪಂಪ್ ಗಳನ್ನು ಹಂಚಿಕೆ ಮಾಡುವ ಅಧಿಕಾರವೂ ಶಾಸಕನಿಗೆ ಇದೆ. ಇದರ ಹೊರತಾಗಿ; ಒಬ್ಬ ವ್ಯಕ್ತಿಯು ರೈಲಿನಲ್ಲಿ ಶಾಸಕನೊಂದಿಗೆ ಮುಕ್ತವಾಗಿ ಪ್ರಯಾಣಿಸಬಹುದು.
ನಿವೃತ್ತಿಯ ನಂತರ ಶಾಸಕರಿಂದ ಯಾವ ಪ್ರಯೋಜನಗಳು ಸಿಗುತ್ತದೆ? (What benefits do MLA get after retirement?)
5 ವರ್ಷದ ಅವಧಿ ಮುಗಿದ ನಂತರ; ಶಾಸಕರು ಪಿಂಚಣಿ ರೂಪದಲ್ಲಿ ತಿಂಗಳಿಗೆ ರೂ.30000, ಜೊತೆಗೆ ಡೀಸೆಲ್ ವೆಚ್ಚವಾಗಿ ರೂ.8000, ಜೊತೆಗೆ ಉಚಿತ ರೈಲ್ವೆ ಪಾಸ್ ಮತ್ತು ಜೀವನದುದ್ದಕ್ಕೂ ವೈದ್ಯಕೀಯ ಸೌಲಭ್ಯದ ಪ್ರಯೋಜನಗಳನ್ನು ಪಡೆಯುತ್ತಾರೆ. ಆದ್ದರಿಂದ ಒಂದು ಸಲ ಶಾಸಕನಾದರೆ ಸಾಕು ಜೀವನದ ಕೊನೆಯವರೆಗೂ ಸೌಲಭ್ಯಗಳು ಸಿಗುತ್ತಿರುತ್ತವೆ.