difference between crop insurance and crop loss ದೇಶದ ಹಲವಾರು ರೈತರಿಗೆ ಬೆಳೆ ವಿಮೆ ಮತ್ತು ಬೆಳೆಹಾನಿ ಪರಿಹಾರದಲ್ಲಿರುವ ವ್ಯತ್ಯಾಸದ ಬಗ್ಗೆ ಗೊತ್ತಿಲ್ಲದೆ ಈಗಲೂ ಪರಿಹಾರದ ಹಣ ಪಡೆಯುವಲ್ಲಿ ಗೊಂದಲದಲ್ಲಿರುತ್ತಾರೆ. ಪರಿಹಾರ ಹಣ ಜಮೆ ಬಗ್ಗೆ ಗೊತ್ತಿರುತ್ತದೆ ಆದರೆ ಅದು ಬೆಳೆವಿಮೆಯ ಪರಿಹಾರ ಹಣವೋ ಅಥವಾ ಬೆಳೆಹಾನಿಯಿಂದಾಗಿ ಸರ್ಕಾರದ ಘೋಷಿಸಿದ ಪರಿಹಾರದ ಹಣವೋ ಎಂಬ ಗೊಂದಲದಲ್ಲಿರುವ ರೈತರಿಗೆ ಇಲ್ಲಿದೆ ಮಾಹಿತಿ.
ಬೆಳೆಹಾನಿ ಪರಿಹಾರ ಎಂದರೇನು?
ಅತೀವೃಷ್ಟಿ, ಪ್ರವಾಹ ಅಥವಾ ಮಳೆಯಿಲ್ಲದೆ ಬೆಳೆ ಹಾಳಾದಾಗ ರೈತರ ನೆರವಿಗೆ ರಾಜ್ಯ ಸರ್ಕಾರವು ಪರಿಹಾರ ಹಣ ಘೋಷಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಹಣವೂ ಇರುತ್ತದೆ. ಬೆಳೆಹಾನಿ ಪರಿಹಾರದ ಹಣವನ್ನು ಎಕರೆ ಇಂತಿಷ್ಟು ಹಣವೆಂದು ಸರ್ಕಾರ ಘೋಷಿಸುತ್ತದೆ. ಪ್ರಸಕ್ತ ವರ್ಷ ಅತೀವೃಷ್ಟಿ, ಪ್ರವಾಹದಿಂದಾಗಿ ಬೆಳೆಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಪರಿಹಾರ ತಂತ್ರಾಂಶದಲ್ಲಿ ಸಂಬಂಧಿಸಿದ ಅಧಇಕಾರಿಗಳಉ ರೈತರ ಬೆಳೆ ಹಾನಿಯಾದ ಕುರಿತು ಮಾಹಿತಿ ಅಪ್ಲೋಡ್ ಮಾಡುತ್ತಾರೆ. ನಂತರ ಸರ್ಕಾರ ನೇರವಾಗಿ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡುತ್ತದೆ.
ಮಳೆಯಾಶ್ರಿತ ಬೆಳೆಗೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಈಗಾಗಲೇ ಪ್ರತಿ ಹೆಕ್ಟೇರಿಗೆ 6800 ರೂಪಾಯಿ ಪರಿಹಾರ ಘೋಷಿಸಲಾಗಿತ್ತು. ಈಗ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಮತ್ತೆ 6800 ರೂಪಾಯಿ ಘೋಷಿಸಿದೆ. ಮಳೆಯಾಶ್ರಿತ ಜಮೀನಿಗೆ ಒಟ್ಟು 13,600 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ನೀರಾವರಿ ಜಮಿನಿಗೆ ಎಸ್.ಡಿ.ಆರ್.ಎಪ್ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರಿಗೆ 13,500 ರೂಪಾಯಿ ನೀಡಲಾಗಿತ್ತು. ಈಗ 11,500 ರೂಪಾಯಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು ನೀಡುತ್ತಿದೆ. ಒಟ್ಟು ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 25,000 ರೂಪಾಯಿ ನೀಡಲಾಗುವುದು. ತೋಟಗಾರಿಕೆ ಬೆಳೆಗಳಿಗೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿ ದರ ಪ್ರಕಾರ 18000 ರೂಪಾಯಿ ನೀಡಲಾಯಿತು. ಈಗ ರಾಜ್ಯ ಸರ್ಕಾರವು 10 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ. ಪರಿಷ್ಕೃತ ದರ ಈಗ ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರಿಗೆ 28000 ರೂಪಾಯಿ ನೀಡಲಾಗುವುದು.
ಪರಿಹಾರ ಹಣ ಜಮೆಯಾಗಿರುವುದನ್ನು ರೈತರು ನೇರವಾಗಿ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಅದಕ್ಕೆ ಸರ್ಕಾರದ ಪ್ರತ್ಯೇಕ ಪರಿಹಾರ ವೆಬ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
difference between crop insurance and crop loss ಪರಿಹಾರ ಸ್ಟೇಟಸ್ ನೋಡುವುದು ಹೇಗೆ?
ರೈತರು https://landrecords.karnataka.gov.in/PariharaPayment/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ವಿಪತ್ತು (calamity Type) ಕಾಲಂನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು.ವರ್ಷದಲ್ಲಿ 2021-22 ಆಯ್ಕೆ ಮಾಡಿಕೊಳ್ಳಬೇಕು.. ಆಧಾರ್ ಸಂಖ್ಯೆ ನಮೂದಿಸಬೇಕು. ಕ್ಯಾಪ್ಚ್ಯಾ ಕೋಡ್ ನ್ನು ನಮೂದಿಸಿ ವಿವರಗಳನ್ನು ಪಡೆಯಲು /Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ಈ ವರ್ಷ ಜಮೆಯಾಗಿದ್ದರೆ ಡಿಟೇಲ್ ಇರುತ್ತದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಎಂದರೇನು?
ಬೆಳೆ ನಷ್ಟ ಅಥವಾ ಬೆಳೆ ವಿಫಲವಾದಾಗ ನಷ್ಟ ಹೊಂದಿದ ರೈತರಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ವಿಮೆ ಕಟ್ಟಿದ ರೈತರಿಗೆ ಮಾತ್ರ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
ಇದನ್ನೂ ಓದಿ : ಈ ರೈತರಿಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ
ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಆಗ ಸಂಬಂಧಿಸಿದ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ನಷ್ಟದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸ್ಟೇಟಸ್ ನೋಡಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ವಿಮೆ ಕಟ್ಟಿದ ರೈತರು ಈ https://www.samrakshane.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ (SAMRAKSHANE) ಸರ್ಕಾರದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಮುಂಗಾರು ಬೆಳೆಯ ಅರ್ಜಿ ಸ್ಟೇಟಸ್ ನೋಡಬೇಕಾದರೆ 2021-22ನೇ ಆಯ್ಕೆ ಮಾಡಿಕೊಂಡು ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ಹಿಂಗಾರು ಬೆಳೆಗಳ ಅರ್ಜಿಯ ಸ್ಟೇಟಸ್ ನೋಡಬೇಕಾದರೆ Rabi ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಸ್ಟೇಟಸ್ Farmers ಕಾಲಂ ಕೆಳಗಡೆಯಿರುವ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಅರ್ಜಿಯು ವಿಮೆ ಕಂಪನಿಯಿಂದ ಸ್ವೀಕೃತವಾಗಿಯೋ ಇಲ್ಲವೆ ಎಂಬ ಮೆಸೇಜ್ ಕಾಣುತ್ತದೆ. ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಯಾವ ದಿನಾಂಕದಂದು ಸ್ವೀಕೃತವಾಗಿದೆ ಎಂಬ ಮೆಸೇಜ್ ಕಾಣುತ್ತದೆ.