Direct interview job: ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ,ಡಿಪ್ಲೋಮಾ ಹಾಗೂ ಪದವಿ ಪಾಸಾದವರಿಗಾಗಿ ಗುಡ್ ನ್ಯೂಸ್ ಇಲ್ಲಿದೆ. ಹೌದು ನಿರುದ್ಯೋಗಿಗಳಿಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಡಿಸೆಂಬರ್ 11 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾಉದ್ಯೋಗ ವಿನಿಮಯದ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮ ಕಚೇರಿಯಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Direct interview job ಸಂದರ್ಶನದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಲ್ಲಿದೆ
ಸ್ನೇಯ್ಡರ್ ಎಲೆಕ್ಟ್ರಿಕ್ ಇಂಡಿಯಾ (ಸ್ಟೇಕ್ಡ್ರಮ್ ಟ್ಯಾಲೆಟ್ ಮ್ಯಾನೇಜ್ಮೆಂಟ್)ದಲ್ಲಿ ಪ್ರೊಡಕ್ಷನ್ ಅಸೋಸಿಯೇಟ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಅಥವಾ ಡಿಪ್ಲೋಮಾ ಪಾಸಾಗಿರಬೇಕು. ಈ ಹುದ್ದೆಗೆ ಅಭ್ಯರ್ಥಿಗಳು ಹೈದ್ರಾಬಾದ್ ನಲ್ಲಿ ಕಾರ್ಯನಿರ್ವಹಿಸಬೇಕು. ಮಹಿಳೆಯರು ಮಾತ್ರ ಸಂದರ್ಶನದಲ್ಲಿಭಾಗವಹಿಸಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು. ಸ್ನೇಯ್ಡರ್ ಎಲೆಕ್ಟ್ರಿಕ್ ಇಂಡಿಯಾ (ಸ್ಟೇಕ್ಟ್ರಮ್ ಟ್ಯಾಲೆಂಟ್ ಮ್ಯಾನೇಜಮೆಂಟ್) ದಲ್ಲಿ ಪ್ರೋಡಕ್ಷನ್ ಅಸೋಸಿಯೇಟ್ ಹುದ್ದೆಗೆ ಐಟಿಐ, ಡಿಪ್ಲೋಮಾ ಪಾಸಾಗಿರಬೇಕು. ಈ ಹುದ್ದೆಗೆ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಬೇಕು.ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಎಮ್.ಆರ್.ಎಫ್. ಟೈಯರ್ಸ್ (ಸ್ಪೇಕ್ಡ್ರಮ್ ಟ್ಯಾಲೆಂಟ್ ಮ್ಯಾನೇಜಮೆಂಟ್)ದಲ್ಲಿ ಪ್ರೋಡಕ್ಷನ್ ಟ್ರೈನಿ ಹುದ್ದೆಗೆ ಯಾವುದೇ ಪದವಿ, ಬಿಇ, ಅಥವಾ ಬಿಟೆಕ್ ಪಾಸಾಗಿರಬೇಕು. ಬರುಚ (ಗುಜರಾತ್ ನಲ್ಲಿಕಾರ್ಯನಿರ್ವಹಿಸಬೇಕು.) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು. ವಯೋಮಿತಿ18 ರಿಂದ 25 ವಯೋಮಾನದೊಳಗಿರಬೇಕು.
ಇದನ್ನೂ ಓದಿ : ಬಗರ್ ಹುಕುಂ ಅಡಿ ಈ ರೈತರಿಗೆ ನೀಡಲಾಗುವುದು ಸಾಗುವಳಿ ಚೀಟಿ
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ದಾಖಲಾತಿಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವುದಕ್ಕಿಂತ ಮುಂಚಿತವಾಗಿ ನೀವು ಕರೆ ಮಾಡಿ ತಿಳಿದುಕೊಳ್ಳಬಹುದು. ಯಾವ ಯಾವ ದಾಖಲೆ ಬೇಕು ಎಂಬುದರ ಕುರಿತು ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು.
ಇಂದು ಇಲ್ಲಿ ನೇರ ಸಂದರ್ಶನ
ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಾದರಿ ವೃತ್ತಿ ಕೇಂದ್ರದಿಂದ ಡಿಸೆಂಬರ್ 7 ರಂದು ಬೆಳಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಜಿಲ್ಲಾಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ – 51, ಜಿಲ್ಲಾಧಿಕಾರಿ ಕಚೇರಿ, ದಾವಣಗೆರೆ ಈ ವಿಳಾಸದಲ್ಲಿ ಆಯೋಜಿಸಲಾಗಿದೆ.
ವಾಕ್ – ಇನ್ ೃ ಇಂಟರವೀವ್ ದಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿಯಲ್ಲಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನುನೇಮಕಾತಿ ಮಾಡಿಕೊಳ್ಳಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ಕನಿಷ್ಠ 5 ಬಯೋಡಾಟಾಮತ್ತು ಆಧಾರ್ ನಂಬರ್ ನೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 74838 08321, ದೂರವಾಣಿ ಸಂಖ್ಯೆ 08192 259446 ಇಲ್ಲಿಗೆ ಸಂಪರ್ಕಿಸಲು ಉದ್ಯೋಗಾಧಿಕಾರಿ ಡಿ. ರವೀಂದ್ರ ತಿಳಿಸಿದ್ದಾರೆ.
ಇನ್ನೇಕ ತಡ ಕೂಡಲೇ ನಿಮ್ಮ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.