ನಾಳೆ ಶಿಕ್ಷಕರ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ

Written by Ramlinganna

Published on:

Direct interview for teacher : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಅಕ್ಟೋಬರ್ 4 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Direct interview for teacher ಶಿಕ್ಷಕರ ಯಾವ ಯಾವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿಯ ಎಸ್.ಆರ್. ಎನ್.ಮೆಹ್ತಾ ಸಿಬಿಎಸ್.ಸಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಕರು (ಗಣಿತ, ಆಂಗ್ಲ ರಾಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಶಿಕ್ಷಕರು) ಪ್ರೈಮರಿ  (ಎಚ್.ಪಿ.ಎಸ್ ಶಿಕ್ಷಕರು, ಕಂಪ್ಯೂಟರ್, ವಿಜ್ಞಾನ, ಇವಿಸ್ ಹಿಂದಿ, ಗಣಿತ ಮತ್ತುಆಂಗ್ಲ ಶಿಕ್ಷಕರು ) ಕೆ.ಜಿ. ಶಿಕ್ಷಕರು ತಾಯಿ ಶಿಕ್ಷಕೀಯರು, ಆ್ಯಕ್ಟಿವಿಟಿ ಶಿಕ್ಷಕರು, ಹಿಂದಿ ಶಿಕ್ಷಕರು, ಕೋ ಆರ್ಡಿನೇಟರ್ (ಹೆಚ್.ಪಿ.ಎಸ್ ಮತ್ತು ಹೆಚ್.ಎಸ್) ಕೌನ್ಸಲರ್ ರಿಸೆಪನಿಸ್ಟ್ ಆಡ್ಮಿಶನ್ ಕೌನ್ಸಲರ್ ಹುದ್ದೆಗಳಿಗೆ ಬಿ.ಎಸ್.ಸಿ, ಎಂ.ಎಸ್.ಸಿ, ಬಿ.ಎಡ್, ಬಿ,ಇ, ಎಮ್.ಟೆಕ್, ಬಿಸಿಎ, ಎಮ್.ಸಿ.ಎ ಮತ್ತು ಎಮ್.ಬಿ.ಎ, ಬಿಬಿಎಮ್, ಬಿಬಿಎ, ಬಿಎ, ಎಮ್.ಎ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 25 ರಿಂದ 40 ವಯೋಮಾನದೊಳಗಿರಬೇಕು. ಡ್ರೈವರ್ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ವಯೋಮಿತಿ 21 ರಿಂದ 35 ವಯೋಮಾನದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮಎಲ್ಲಾ ಅಂಕಪಟ್ಟಿಗಳ ಝರಾಕ್ಸ್,  ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ Land podi ನಕ್ಷೆ ಮೊಬೈಲ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ನೇರ ಸಂದರ್ಶನದಲ್ಲಿ ಭಾಗವಹಿಸುವ  ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಎಲ್ಲಿ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಂಗನವಾಡಿ ಹುದ್ದೆಗಳಿಗೆ ಬೇಕಾಗುವ ಶೈಕ್ಷಣಿಕ ಅರ್ಹತೆಗಳು

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12ನೇ ತರಗತಿ, ಡಿಪ್ಲೋಮಾ, ತತ್ಸಮಾನ ಶಿಕ್ಷಣ ತೇರ್ಗಡೆ ಹೊಂದಿರಬಕು. ಅಂಗನವಾಡಿ ಸಹಾಯಕಿಯರ ಹುದ್ದೆಗೆ 10ನೇ ತರಗತಿ  ಅಂದರೆ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.

ಅರ್ಜಿ ಸಲ್ಲಿಸಲು ಕನಿಸ್ಟ 19 ವರ್ಷ ಪೂರೈಸಿರಬೇಕು. ಗರಿಷ್ಠ 35 ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ ಎಸ್.ಸಿ, ಎಸ್.ಟಿ ಪ್ರವರ್ಗ 1 ವರ್ಗದವರಿಗೆ 5 ವರ್ಷ ವಯಸ್ಸಿನಸಡಿಲಿಕೆ ಇದೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

https://karnemakaone.kar.nic.in/abcd/ApplicationForm_JA_org.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು.  ಕೆಟಗೇರಿ ಆಯ್ಕೆ ಮಾಡಿಕೊಳ್ಳಬೇಕು. ಜಾತಿ ಪ್ರಮಾಣ ಪತ್ರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

Leave a Comment